ಯಾದಗಿರಿ,ಮೇ,30,2026 (www.justkannada.in): ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಸ್ವಾಮಿ, ಇವರ ಗದ್ದುಗೆ ಗುದ್ದಾಟದಿಂದ ರಾಜ್ಯವೇ ಸಂಪೂರ್ಣವಾಗಿ ನಾಶವಾಗುತ್ತಿದೆ. ಈ ಸರ್ಕಾರದ ನಡೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಸಂಪೂರ್ಣ ನಿಂತುಹೋಗಿವೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮೂರು ವರ್ಷಗಳ ಕಾಲ ದೊಡ್ಡ ಭ್ರಷ್ಟಾಚಾರದ ಸರ್ಕಾರ ಇತ್ತು. ಮುಂದಿನ 2 ವರ್ಷ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
Key words: Super corrupt government, next 2 years, Chalavadi Narayanaswamy
The post ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





