27
June, 2026

A News 365Times Venture

27
Saturday
June, 2026

A News 365Times Venture

ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ

Date:

ಕೋಲ್ಕತ್ತಾ,ಮೇ,6,2026 (www.justkannada.in):  ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರ ಬಂದ ಬಳಿಕವೂ ಸಹ ಹಿಂಸಾಚಾರ ನಿಂತಿಲ್ಲ. ಪ. ಬಂಗಾಳ ರಾಜ್ಯದ ವಿವಿಧೆಡೆ ನಡೆದ ಭೀಕರ ಸಂಘರ್ಷಗಳಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ವರು ರಾಜಕೀಯ ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಸುಮಾರು 12ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಪು ಘರ್ಷಣೆ, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ದಾಳಿ ಪ್ರಕರಣಗಳು ನಡೆದಿವೆ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ತಡರಾತ್ರಿ ನಡೆದ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತ ಮಧು ಎಂಬುವವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎನ್ನಲಾಗಿದೆ.  ಈ ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಕಿಡಿಕಾರಿದ್ದಾರೆ.

ಇತ್ತ  ವೀರಭೂಮಿಯ ನ್ಯೂಟೌನ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಎಂಬುವವರನ್ನು ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರತಿಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ನಿನ್ನೆಯಷ್ಟೇ ಟಿಎಂಸಿ ನಾಯಕರೊಬ್ಬರ ಕಚೇರಿಯನ್ನ ಧ್ವಂಸ ಮಾಡಲಾಗಿತ್ತು.

Key words: Violence, West Bengal, after, election, activists, killed

The post ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ജനങ്ങളുടെ വിശ്വാസം വെച്ച് കളിക്കരുത്; ഫണ്ട് തട്ടിപ്പുമായി ബന്ധപ്പെട്ട പ്രതിപക്ഷ ആരോപണങ്ങള്‍ രാഷ്ട്രീയ ലാഭത്തിനെന്ന് യോഗി

ന്യൂദല്‍ഹി: അയോധ്യ രാമക്ഷേത്ര ഫണ്ട് തട്ടിപ്പ് കേസില്‍ പ്രതിപക്ഷത്തിനെതിരെ യു.പി മുഖ്യ...

வெங்கட நாராயணா நியமனம்: 'மேகதாது அணைக்கு எதிராகப் போராடுகையில், கர்நாடகாவைச் சேர்ந்தவரே.!' – சீமான்

ஜனநாயகன் திரைப்படத்தின் தயாரிப்பாளர் வெங்கட நாராயணா . இவரை தமிழ்நாட்டின் டெல்லி...

Ketan Murder Case: కేతన్ హత్య కేసులో కొత్త ట్విస్ట్.. ఇద్దరు తల్లుల మధ్య మాటల యుద్ధం!

Ketan Agarwal Murder Case: పుణెలో సంచలనం సృష్టించిన కేతన్ అగర్వాల్...

ಡಿಸಿಎಂ ಪರಮೇಶ್ವರ್ ತವರಲ್ಲಿ ಮಲ ಹೊರುವ ಪದ್ದತಿ ಜೀವಂತ

ತುಮಕೂರು,ಜೂನ್,26,2026 (www.justkannada.in):  ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ...