25
September, 2026

A News 365Times Venture

25
Friday
September, 2026

A News 365Times Venture

ದಸರಾ ಸಂಭ್ರಮ: ಟ್ರಾಫಿಕ್ ನಿರ್ವಹಣೆಗೆ ಡಿಜಿಟಲ್ ತಂತ್ರಜ್ಞಾನ, ಸುಗಮ ಸಂಚಾರಕ್ಕೆ ಹೊಸ App.

Date:

 

ಮೈಸೂರು, ಸೆ.25, 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ನವರಾತ್ರಿ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ನಗರ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಮುಂದಾಗಿದೆ.

ದಸರಾ ಮಹೋತ್ಸವದ ವೇಳೆ ಹೊರ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಅರಮನೆ ದೀಪಾಲಂಕಾರ, ಜಂಬೂಸವಾರಿ, ಟಾರ್ಚ್‌ಲೈಟ್ ಪೆರೇಡ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ನಗರದಲ್ಲಿ ಭಾರೀ ಜನಸಂದಣಿ ಉಂಟಾಗಲಿದೆ. ಇದರ ಪರಿಣಾಮವಾಗಿ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ.

ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು “ ಜಸ್ಟ್ ಕನ್ನಡ” ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಲಾಖೆಯ ನೂತನ ಯೋಜನೆಗಳನ್ನು ತಿಳಿಸಿದ್ದಾರೆ.

ಟ್ರಾಫಿಕ್ ನಿರ್ವಹಣೆಗೆ ಡಿಜಿಟಲ್ ಪರಿಹಾರ

ದಸರಾ ಸಂದರ್ಭದಲ್ಲಿ ಎದುರಾಗಬಹುದಾದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಮೈಸೂರು ನಗರ ಪೊಲೀಸರು ವಿಶೇಷ App ಅಭಿವೃದ್ಧಿಪಡಿಸುತ್ತಿದ್ದಾರೆ.

ಈ App ಮೂಲಕ ದಸರಾ ದಿನಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾಗುವ ಸಂಚಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ವಿಶೇಷವಾಗಿ,

ಯಾವ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶವಿದೆ, ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಅಥವಾ ಬದಲಾವಣೆ ಮಾಡಲಾಗಿದೆ, ಪರ್ಯಾಯ ಸಂಚಾರ ಮಾರ್ಗಗಳು ಯಾವುವು, ವಾಹನ ನಿಲುಗಡೆಗೆ ನಿಗದಿಪಡಿಸಿರುವ ಸ್ಥಳಗಳು, ಪಾರ್ಕಿಂಗ್‌ಗೆ ಸಂಬಂಧಿಸಿದ ಅಗತ್ಯ ಮಾಹಿತಿ ಜತೆಗೆ ದಸರಾ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯಲ್ಲಾಗುವ ಬದಲಾವಣೆ.. ಮುಂತಾದ ಮಾಹಿತಿಯನ್ನು App ಮೂಲಕ ಸಾರ್ವಜನಿಕರಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ.

QR Code ಮೂಲಕ ನೇರ Access

ಈ App ಬಳಕೆ ಕೂಡ ಸರಳವಾಗಿರಲಿದೆ. QR Code ಸ್ಕ್ಯಾನ್ ಮಾಡುವ ಮೂಲಕ Appಗೆ Access ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದ ಮೈಸೂರಿಗೆ ಹೊರಗಿನಿಂದ ಆಗಮಿಸುವ ಪ್ರವಾಸಿಗರು ಕೂಡ ತಮ್ಮ ಮೊಬೈಲ್ ಮೂಲಕ ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ ಕುರಿತು ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ದಸರಾ ವೇಳೆ ಪ್ರಮುಖ ಸ್ಥಳಗಳಿಗೆ ತೆರಳುವ ಮುನ್ನವೇ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸಂಚಾರ ಮಾರ್ಗದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಮೂಲಕ ವಾಹನ ಸವಾರರು ಅನಗತ್ಯವಾಗಿ ಟ್ರಾಫಿಕ್‌ನಲ್ಲಿ ಸಿಲುಕುವುದನ್ನು ತಪ್ಪಿಸುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ.

App ಅಭಿವೃದ್ಧಿ ಅಂತಿಮ ಹಂತದಲ್ಲಿ

ಪೊಲೀಸ್ ಇಲಾಖೆ ರೂಪಿಸುತ್ತಿರುವ ಈ ನೂತನ App ಇದೀಗ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. App ಸಿದ್ಧಗೊಂಡ ಬಳಿಕ ಅದರ ಬಳಕೆ, QR Code, ಲಭ್ಯವಾಗುವ ಸೇವೆಗಳು ಹಾಗೂ ಸಾರ್ವಜನಿಕರು ಹೇಗೆ ಬಳಸಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸ್ ಇಲಾಖೆ ಪ್ರಕಟಿಸಲಿದೆ.

“ದಸರಾ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಹೊಸ App ಅಭಿವೃದ್ಧಿಪಡಿಸಲಾಗುತ್ತಿದ್ದು, QR Code ಮೂಲಕ ಸಾರ್ವಜನಿಕರು ಸಂಚಾರ ಮತ್ತು ಪಾರ್ಕಿಂಗ್ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ” ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ದಸರಾ: ಪೊಲೀಸರಿಗೆ ಮತ್ತೊಂದು ದೊಡ್ಡ ಸವಾಲು

ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿ ಹೋಗುತ್ತವೆ. ಈ ಬಾರಿ ಕೂಡ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆ ಪೊಲೀಸ್ ಇಲಾಖೆಗೆ ಪ್ರಮುಖ ಸವಾಲಾಗಲಿದೆ.

ಜನಸಂದಣಿ ಹೆಚ್ಚಾಗುವ ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುವುದರ ಜೊತೆಗೆ, ಪ್ರವಾಸಿಗರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಮಾರ್ಗ ಕಲ್ಪಿಸುವುದು ಹಾಗೂ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಟ್ರಾಫಿಕ್ ನಿರ್ವಹಣೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಹೊಸ ಪ್ರಯತ್ನ ದಸರಾ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. App ಅಧಿಕೃತವಾಗಿ ಲಭ್ಯವಾದ ಬಳಿಕ QR Code ಹಾಗೂ ಬಳಕೆಯ ಸಂಪೂರ್ಣ ವಿವರವನ್ನು ಪೊಲೀಸ್ ಇಲಾಖೆ ಪ್ರಕಟಿಸುವ ನಿರೀಕ್ಷೆಯಿದೆ.

KEY WORDS:

Mysuru, Dasara traffic, app, Mysore Dasara, parking updates. Mysuru City Police app, Dasara traffic route diversions. Mysore traffic live updates

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗ്യാനേഷ് കുമാറിന് കുറഞ്ഞത് പത്മഭൂഷണെങ്കിലും നല്‍കണമെന്ന് ബി.ജെ.പി നേതാവ്

ന്യൂദല്‍ഹി: രാജ്യത്തെ മുഖ്യ തെരഞ്ഞെടുപ്പ് കമ്മീഷണര്‍ ഗ്യാനേഷ് കുമാര്‍ കുറഞ്ഞത് ഒരു...

"நிர்வாண வீடியோவை பரப்புகிற கேவலமான ஆள் நானில்லை" – பெண் குற்றச்சாட்டு குறித்து கருப்பு முருகானந்தம்

தமிழக பாரதிய ஜனதா கட்சியின் மாநில பொதுச்செயலாளர் கருப்பு முருகானந்தம் மீது,...

Traffic: ట్రాఫిక్ కష్టాలకు శాశ్వత పరిష్కారం.. తెలంగాణలో కొత్త విధివిధానాలు అమల్లోకి..

తెలంగాణలో పెరుగుతున్న ట్రాఫిక్ రద్దీ, రోడ్డు ప్రమాదాలను నివారించేందుకు, ప్రయాణాలను సురక్షితంగా...

‘ഫ്രീ ഫലസ്തീൻ ടൂർ’ പ്രഖ്യാപിച്ച് എഡ് ഷീറന്റെ സംഗീത പര്യടനത്തിൽ നിന്ന് പുറത്തായ റാപ്പർ മാക്ലെമോർ

ന്യൂയോർക്ക്: ഫലസ്തീന് ഐക്യദാർഢ്യം പ്രഖ്യാപിച്ചതിന്റെ പേരിൽ ബ്രിട്ടീഷ് ഗായകൻ എഡ് ഷീറന്റെ...