13
September, 2026

A News 365Times Venture

13
Sunday
September, 2026

A News 365Times Venture

18ನೇ ಬ್ರಿಕ್ಸ್ ಶೃಂಗಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ

Date:

ನವದೆಹಲಿ,ಸೆಪ್ಟಂಬರ್,12,2026 (www.justkannada.in): ಬ್ರಿಕ್ಸ್ ಒಕ್ಕೂಟ ಯಾವುದೇ ದೇಶದ ವಿರುದ್ಧವಿಲ್ಲ. ಬ್ರಿಕ್ಸ್ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸ್ಥಿತಿಸ್ಥಾಪಕತ್ವವಾಗಿದೆ. ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಒಗ್ಗಟ್ಟಾಗಿ ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ಒಗ್ಗಟ್ಟಿನ ಮಂತ್ರ ಜಪಿಸಿದರು.

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಒಗ್ಗಟ್ಟಾಗಿ ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶ. ಈ ವರ್ಷದ ಬ್ರಿಕ್ಸ್ ಶೃಂಗಸಭೆ ಐತಿಹಾಸಿಕ ಮೈಲುಗಲ್ಲು ಹಾಗೂ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಕಳೇದ 20 ವರ್ಷಗಳಲ್ಲಿ ಬ್ರಿಕ್ಸ್ ಒಕ್ಕೂಟ ಒಳ್ಳೆಯ ಕೆಲಸ ಮಾಡಿದೆ. ಭವಿಷ್ಯದ  20 ವರ್ಷಗಳ ಅಜೆಂಡಾದ ಮೇಲೆ ಕೆಲಸ ಮಾಡುತ್ತಿದೆ.  ಬ್ರಿಕ್ಸ್ ಒಕ್ಕೂಟ ದೇಶಗಳನ್ನು ಪರಸ್ಪರ ಒಗ್ಗೂಡಿಸುತ್ತಿದೆ.  ಬ್ರಿಕ್ಸ್ ಒಕ್ಕೂಟ ಇದು ಯಾವುದೇ ದೇಶದ ವಿರುದ್ದವಾಗಿ ಇಲ್ಲ.  ಜಾಗತಿಕ ಸುಧಾರಣೆಯೇ ನಮ್ಮ ಅಜೆಂಡಾ. ನಾವೆಲ್ಲಾ ಒಟ್ಟಾಗಿ ಹೋಗಬೇಕಿದೆ ಒಟ್ಟಾಗಿ ಇರಬೇಕಿದೆ ಎಂದರು.

ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲಿ ಈ ಬ್ರಿಕ್ಸ್ ಶೃಂಗಸಭೆಗೆ ವಿಶೇಷ ಮಹತ್ವವಿದೆ. 20ನೇ ವಯಸ್ಸು ಮಾನವನ ಜೀವನದಲ್ಲಿ ಪರಿಪಕ್ವತೆ, ಜವಾಬ್ದಾರಿಯ ಹೊಸ ಹಂತವನ್ನು ತಲುಪತ್ತದೆ. ಅದೇ ರೀತಿ ಬ್ರಿಕ್ಸ್ ಕೂಡ ಈಗ ಪ್ರೌಢಾವಸ್ಥೆ ಹಂತಕ್ಕೆ ಪ್ರವೇಶಿಸಿದೆ. ಈಗ ಬ್ರಿಕ್ಸ್ ಜಾಗತಿಕ ವೇದಿಕೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಮುಂದಿನ ಹಂತದಲ್ಲಿ ಪರಸ್ಪರ ಗೌರವ, ಸಹಕಾರ ಮತ್ತು ಜವಾಬ್ದಾರಿಯೊಂದಿಗೆ ಬ್ರಿಕ್ಸ್ ದೇಶಗಳ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

ഉക്രൈനിലേക്ക് സൈന്യത്തെ അയച്ചാൽ നേരിട്ടുള്ള യുദ്ധം: യൂറോപ്പിന് വ്ളാദിമിർ പുടിന്റെ മുന്നറിയിപ്പ്

ന്യൂദൽഹി: ഉക്രൈനിലേക്ക് യൂറോപ്യൻ രാജ്യങ്ങൾ സൈന്യത്തെ വിന്യസിക്കാൻ തുനിഞ്ഞാൽ അത് റഷ്യയുമായുള്ള...

"நீங்கள் திருந்தாவிட்டால் திருத்தப்படுவீர்கள்" – தவெகவிற்கு ஆ.ராசா எச்சரிக்கை

தமிழ்நாடு சட்டப்பேரவையில் தமிழ்நாடு முதலமைச்சர் விஜய் திமுகத் தலைவர் ஸ்டாலின் மிசா...

Bangladesh: బంగ్లాదేశ్‌కు భారత్ ‘‘కరెంట్ షాక్’’..

Bangladesh: బంగ్లాదేశ్‌లో విద్యుత్ సంక్షోభం ముదిరింది. జార్ఖండ్ రాష్ట్రంలోని అదానీ పవర్‌కు...

ಚಿದಂಬರರಾವ್ ಜಂಬೆ ಅವರಿಗೆ ನುಡಿ ನಮನ

ಮೈಸೂರು,ಸೆಪ್ಟಂಬರ್,12,2026 (www.justkannada.in): ಒಬ್ಬ ಕಲಾವಿದನ ಸಾವು ಒಂದು ಜೀವದ ಅಂತ್ಯವಾಗಬಹುದು…...