2
September, 2026

A News 365Times Venture

2
Wednesday
September, 2026

A News 365Times Venture

ಖಾಲಿ ಇರುವ 61,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದಿದ್ರೆ ರಾಜ್ಯಾದ್ಯಂತ ಬೃಹತ್ ಹೋರಾಟ-ಆರ್.ಅಶೋಕ್

Date:

ಬೆಂಗಳೂರು,ಆಗಸ್ಟ್,31,2026 (www.justkannada.in):  ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಕೇವಲ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿರುವ ಅದರಲ್ಲೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ಶಿಕ್ಷಕರ ಕೊರತೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಇವುಗಳನ್ನು ಭರ್ತಿ ಮಾಡಲು  ರಾಜ್ಯ ಸರ್ಕಾರದ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ  ಖಾಲಿ ಇರುವ 60 ಸಾವಿರ ಶಿಕ್ಷಕರ ನೇಮಕಾತಿಗೆ ವಿಪಕ್ಷ ನಾಯಕ ಆರ್.ಅಶೋಕ್  ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಅಶೋಕ್ I am an educationist by choice ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರೇ, ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯವಲ್ಲವೇ?

ನೀವು ಆಡಳಿತದಲ್ಲಿ ರಾಜ್ಯದ ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳ ಸ್ಥಿತಿ ಏನಾಗಿದೆ ಎಂದು ಒಮ್ಮೆಯಾದರೂ ತಿರುಗಿ ನೋಡಿದ್ದೀರಾ? ಎಂದು ಕಿಡಿಕಾರಿದ್ದಾರೆ.

61,000 ಶಿಕ್ಷಕರ ಅಭಾವ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 61,000 ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ನೀವು ಭರ್ತಿ ಮಾಡುತ್ತಿರುವುದು ಕೇವಲ 15,000 ಹುದ್ದೆಗಳನ್ನು ಮಾತ್ರ. ಇನ್ನುಳಿದ 46,000 ಹುದ್ದೆಗಳನ್ನು ಖಾಲಿ ಬಿಟ್ಟು, ಲಕ್ಷಾಂತರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಕತ್ತಲೆಗೆ ತಳ್ಳುವುದು ನಿಮ್ಮ “ಶಿಕ್ಷಣ ಪ್ರೇಮವೇ”? ಸರ್ಕಾರಕ್ಕೆ ಆರ್.ಅಶೋಕ್ ಕುಟುಕಿದ್ದಾರೆ.

ಖಾಸಗಿ ಮಾಫಿಯಾಗೆ ಸಾಥ್: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತೆ ಮಾಡಿ, ಬಡ ಮತ್ತು ಮಧ್ಯಮ ವರ್ಗದ ಪೋಷಕರು ಅನಿವಾರ್ಯವಾಗಿ ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ಖಾಸಗಿ ಶಾಲೆಗಳಿಗೆ ಸೇರುವಂತೆ ಮಾಡುವುದು ನಿಮ್ಮ ಸರ್ಕಾರದ ಅಸಲಿ ಸಂಚೇ? ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಹಾಗೆಯೇ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ! ತಕ್ಷಣವೇ ಖಾಲಿ ಇರುವ ಎಲ್ಲಾ 61,000 ಹುದ್ದೆಗಳನ್ನು ಭರ್ತಿ ಮಾಡದಿದ್ದರೆ, ಬಿಜಿಪಿ ರಾಜ್ಯಾದ್ಯಂತ ಬೃಹತ್ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: protest, 61,000 vacant teacher, posts, not filled, R. Ashok

The post ಖಾಲಿ ಇರುವ 61,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದಿದ್ರೆ ರಾಜ್ಯಾದ್ಯಂತ ಬೃಹತ್ ಹೋರಾಟ-ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എസ്.ഐ.ആര്‍ റദ്ദാക്കും വരെ കര്‍ണാടക ഉറങ്ങില്ല; പ്രകാശ് രാജ്; വോട്ടവകാശം തട്ടിയെടുക്കാന്‍ ആര്‍ക്കും അവകാശമില്ലെന്ന് കിഷോര്‍

ബെംഗളൂരു: തീവ്ര വോട്ടര്‍ പട്ടിക പരിഷ്‌കരണം (എസ്.ഐ.ആര്‍) റദ്ദാക്കണമെന്നും അത് റദ്ദാക്കുന്നതുവരെ...

’தவெக ஆட்சி 5 ஆண்டுகளுக்கு நிலைக்காது’ – எடப்பாடி பழனிசாமி ஆரூடம்!

கோவை விமான நிலையத்தில் அ.தி.மு.க பொதுச்செயலாளர் எடப்பாடி பழனிசாமி செய்தியாளர்களை சந்தித்தார்....

CM Revanth Reddy: ఈ 1000 రోజుల్లో కేసీఆర్ ఒక్కసారైనా జనం కోసం బయటకు వచ్చారా..?: సీఎం రేవంత్‌రెడ్డి

కాంగ్రెస్ ప్రభుత్వం అధికారంలోకి వచ్చిన ఈ 1,000 రోజుల పాలనలో మాజీ...

നീറ്റ് പ്രതിഷേധം; കോടതി വിധിയെ സ്വാഗതം ചെയ്യുന്നു; യഥാര്‍ത്ഥ നീതി ലഭിച്ചെന്ന് ദീപ്‌കെ

ഛത്രപതി സംഭാജിനഗര്‍: നീറ്റ് ക്രമക്കേടിനെതിരായ പ്രതിഷേധങ്ങള്‍ക്കെതിരെ രജിസ്റ്റര്‍ ചെയ്ത എല്ലാ എഫ്.ഐ.ആറുകളും...