ಮೈಸೂರು, ಆ.19: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿರುವ ಸುಮಾರು 1,100 ಬದಲಿ ನಿವೇಶನಗಳ ಹಂಚಿಕೆ ರದ್ದುಪಡಿಸಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಸೂಚನೆಯಂತೆ, 2023ರ ಮಾರ್ಚ್ 14ರ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮಾಡಿರುವ ಎಲ್ಲಾ ಬದಲಿ ನಿವೇಶನ ಹಂಚಿಕೆಗಳನ್ನು ತಕ್ಷಣದಿಂದಲೇ ರದ್ದುಪಡಿಸಲು ಆದೇಶಿಸಲಾಗಿದೆ.
ಸುಮಾರು ₹2,000 ಕೋಟಿ ಮೌಲ್ಯದ ನಿವೇಶನಗಳಿಗೆ ಕುತ್ತು!
ನಿಯಮ ಉಲ್ಲಂಘಿಸಿ ಹಂಚಿಕೆಯಾಗಿರುವ ಸುಮಾರು 1,100 ನಿವೇಶನಗಳ ಒಟ್ಟು ಮೌಲ್ಯ ಸರಿ ಸುಮಾರು ₹2,000 ಕೋಟಿ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಪ್ರಮುಖ ಸೂಚನೆಗಳು:
– 14-03-2023ರ ನಿರ್ದೇಶನ ಉಲ್ಲಂಘಿಸಿ ಮಾಡಿರುವ ಎಲ್ಲಾ ಬದಲಿ ನಿವೇಶನ ಹಂಚಿಕೆ ಆದೇಶ ರದ್ದು.
– ಈಗಾಗಲೇ ನೋಂದಣಿಯಾಗಿರುವ ನಿವೇಶನಗಳ ಕ್ರಯಪತ್ರ ರದ್ದತಿಗೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಸೂಚನೆ.
– ಕ್ರಯಪತ್ರವಾಗದ ಪ್ರಕರಣಗಳಲ್ಲಿ ಮುಂದಿನ ಆದೇಶದವರೆಗೆ ಹೊಸ ಕ್ರಯಪತ್ರ ನೀಡದಂತೆ ತಡೆ.

– ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಡೆಹಿಡಿಯಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ.
– ಈಗಾಗಲೇ ಮಾಡಿರುವ ಖಾತಾಗಳನ್ನು ನಿಯಮಾನುಸಾರ ರದ್ದುಪಡಿಸಲು ಸೂಚನೆ.
– ಕೈಗೊಂಡ ಕ್ರಮಗಳ ಕುರಿತು ತಕ್ಷಣ ಅನುಪಾಲನಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ.
ಸರ್ಕಾರದ ಆದೇಶ ಪಾಲನೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
MDA ಅಕ್ರಮ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸರ್ಕಾರದ ಈ ಆದೇಶ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳ ಭವಿಷ್ಯ ಇದೀಗ ಪ್ರಶ್ನಾರ್ಥಕವಾಗಿದೆ.
Key words: MDA ,Cancels, Illegal Alternative Site, Allotment,s Worth ₹2,000 Crore

BREAKING NEWS :
MDA Cancels Illegal Alternative Site Allotments Worth ₹2,000 Crore
Mysuru: The Karnataka government has ordered the immediate cancellation of around 1,100 alternative site allotments made by the Mysuru Development Authority (MDA) in violation of the March 14, 2023 government directive.
Urban Development Minister Dr. Yathindra Siddaramaiah said action will also be taken to cancel registered sale deeds through civil courts.

Key directions:
Cancel all illegal allotments
Stop new sale deeds
Halt khata process
Cancel existing illegal khatas
Submit immediate compliance report
The affected sites are estimated to be worth around ₹2,000 crore.

The post EXCLUSIVE BREAKING NEWS: MDA ಬದಲಿ ನಿವೇಶನ ಹಂಚಿಕೆ ರದ್ದು: ₹2,000 ಕೋಟಿ ಮೌಲ್ಯದ 1,100 ನಿವೇಶನಗಳಿಗೆ ಕುತ್ತು! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





