25
June, 2026

A News 365Times Venture

25
Thursday
June, 2026

A News 365Times Venture

ರಾಜೀನಾಮೆ ವಾಪಸ್ ಪಡೆಯಲು ರಾಮಲಿಂಗರೆಡ್ಡಿ ಒಪ್ಪಿದ್ದಾರೆ- ರಣದೀಪ್ ಸಿಂಗ್ ಸುರ್ಜೇವಾಲ

Date:

ಬೆಂಗಳೂರು,ಜೂನ್,6,2026 (www.justkannada.in):  ರಾಮಲಿಂಗರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆದು ಸಚಿವ ಸಂಪುಟದಲ್ಲಿ ಮುಂದುವರೆಯಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ಸಚಿವ ರಾಮಲಿಂಗರೆಡ್ಡಿ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಮಲಿಂಗರೆಡ್ಡಿ ಹಲವು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ .  ರಾಜೀನಾಮೆ ಸುದ್ದಿ ಹೊರ ಬರ್ತಿದ್ದಂತೆ ಸಿಎಂ ಡಿಕೆ ಶಿವಕುಮಾರ್ ಹರಿಪ್ರಸಾದ್ ನಾವು ಚರ್ಚಿಸಿದ್ದೇವೆ. ರಾಜೀನಾಮೆ ವಾಪಸ್ ಪಡೆದು ಸಚಿವರಾಗಿ ಕೆಲಸ ಮಾಡಲು ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ರಾಜಕೀಯಕ್ಕಾಗಿ ಹುಳಿ ಹಿಂಡುತ್ತಿದ್ದಾರೆ. ರಾಮಲಿಂಗರೆಡ್ಡಿ ಬಹುಕಾಲದಿಂದ ಕಾಂಗ್ರೆಸ್ ನಲ್ಲಿದ್ದಾರೆ.  ಅವರ ವಿಚಾರದಲ್ಲಿ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ರಾಮಲಿಂಗರೆಡ್ಡಿ ಸಂಪುಟದಲ್ಲಿ ಮುಂದುವರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಜನರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಬದ್ದತೆ ಎಂದರು.

Key words: Ramalinga Reddy, withdraw, resignation, Randeep Singh Surjewala

The post ರಾಜೀನಾಮೆ ವಾಪಸ್ ಪಡೆಯಲು ರಾಮಲಿಂಗರೆಡ್ಡಿ ಒಪ್ಪಿದ್ದಾರೆ- ರಣದೀಪ್ ಸಿಂಗ್ ಸುರ್ಜೇವಾಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വിവാഹസല്‍ക്കാരത്തിന് ബീഫ് വിളമ്പിയെന്നാരോപണം; ഉത്തര്‍പ്രദേശില്‍ ഹാള്‍ പൊളിച്ചുമാറ്റി അധികൃതര്‍

മുസാഫര്‍നഗര്‍: ഉത്തര്‍പ്രദേശിലെ ഷാംലി ജില്ലയില്‍ വിവാഹ സല്‍ക്കാരത്തില്‍ ബീഫ് വിളമ്പിയെന്നാരോപിച്ച് ബാങ്ക്വേറ്റ്...

Water Bottle Cleaning: మీరు నీళ్లు తాగే బాటిల్ శుభ్రంగా ఉందా.? బ్యాక్టీరియా, దుర్వాసన రాకుండా ఇలా చేసేయండి.!

Water Bottle Cleaning: మనం ప్రతిరోజూ ఉపయోగించే ప్లాస్టిక్ వాటర్ బాటిల్‌ను...

ದೇವನಹಳ್ಳಿ ಭೂಸ್ವಾಧೀನ: ಎಕರೆಗೆ ₹2.70 ಕೋಟಿ ಪರಿಹಾರಕ್ಕೆ ಶಿಫಾರಸು

ಬೆಂಗಳೂರುಜೂನ್,24,2026 (www.justkannada.in): ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ...