ಬಳ್ಳಾರಿ,ಮೇ,8,2026 (www.justkannada.in): ಪಡಿತರ ಅಕ್ಕಿ ಅಕ್ರಮ ಸಾಗಣೆದಾರರಿದ 3 ಲಕ್ಷ ವಸೂಲಿ ಮಾಡಿದ ಆರೋಪದ ಮೇಲೆ ಬಳ್ಳಾರಿ ಎಸ್ ಪಿ ಸುಮನ ಪನ್ನೇಕರ್ ಅವರ ಗನ್ ಮ್ಯಾನ್ ನನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ.
ಗನ್ ಮ್ಯಾನ್ ದೇವರಾಜ್ ಮತ್ತು ಸಹಚರ ಬಂಧಿತರು. ಶರಬಯ್ಯ ಎಂಬ ಪಡಿತರ ಅಕ್ಕಿ ಸಾಗಣೆದಾರನಿಂದ 3 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ. ಮೋಕಾ ಪೊಲೀಸ್ ಠಾಣೆಗೆ ಅಕ್ಕಿ ಸಾಗಣೆದಾರ ಶರಬಯ್ಯ ದೂರು ನೀಡಿದ್ದರು. ದೂರು ಆಧರಿಸಿ ಎಸ್ ಪಿ ಸುಮನ ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜು ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.
2 ಲಾರಿಗಳು ಪಡಿತರ ಅಕ್ಕಿ ತುಂಬಿಕೊಂಡು ಅಂಧ್ರಪ್ರದೇಶಕ್ಕೆ ಹೊರಟಿದ್ದವು. ಲಾರಿ ಅಡ್ಡಗಟ್ಟಿ ಎಸ್ ಪಿ ಸ್ಕ್ವಾಡ್ ಅಂತಾ 5 ಲಕ್ಷ ಕೇಳಿ 3 ಲಕ್ಷ ಪಡೆದಿದ್ದ. ಹಣ ನೀಡದಿದ್ದರೆ ಅಕ್ಕಿ ಸೀಜ್ ಮಾಡಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಗನ್ ಮ್ಯಾನ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ನಂತರ ಗನ್ ಮ್ಯಾನ್ ಸೇರಿ ಮೂವರ ವಿರುದ್ದ ಶರಬಯ್ಯ ದೂರು ನೀಡಿದ್ದರು. ಇದೀಗ ಮೋಕಾ ಪೊಲೀಸ್ ಠಾಣೆಯಲ್ಲಿ ಗನ್ ಮ್ಯಾನ್ ನನ್ನು ಎಸ್ ಪಿ ಸುಮನ ಪನ್ನೇಕರ್ ವಿಚಾರಣೆ ನಡೆಸುತ್ತಿದ್ದಾರೆ.
Key words: SP, gunman, , arrests, Rs 3 lakh, illegal, ration, rice, transporter
The post ಪಡಿತರ ಅಕ್ಕಿ ಅಕ್ರಮ ಸಾಗಣೆದಾರರಿದ 3 ಲಕ್ಷ ವಸೂಲಿ ಆರೋಪ: SP ಗನ್ ಮ್ಯಾನ್ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





