ಹಾಸನ,ಫೆಬ್ರವರಿ,4,2025 (www.justkannada.in): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ನಿತ್ಯ ಸೂತಕದ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕ ಸೂತಕ ಮನೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸರಣಿ ಸಾವು, ಬಾಣಂತಿಯರ ಸಾವಿಗೆ ಯಾವುದೇ ರೀತಿ ಕ್ರಮ ಇಲ್ಲ. ಹಣ ಬಿಡುಗಡೆ ಆಗದೇ ಇರುವುದರಿಂದ ಗುತ್ತಿಗೆದಾರರು ಸಾವು, ಅಧಿಕಾರಿಗಳ ಸಾವಿಗೆ ಸರ್ಕಾರ ಸ್ಪಂದನೆ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ನಿತ್ಯವೂ ಕೊಲೆ ಸುಲಿಗೆ ಅತ್ಯಾಚಾರ ನಡೆಯುತ್ತಿದೆ. ಸರ್ಕಾರ ಕಠಿಣಕ್ರಮ ಎಂದು ಭಜನೆ ಮಾಡುತ್ತಿದೆ. ಯಾವ ಮೈಕ್ರೋ ಫೈನಾನ್ಸ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ . ಯಾವ ಸಂಸ್ಥೆಯ ಮ್ಯಾನೇಜರ್ ರನ್ನು ಬಂಧಿಸಿದ್ದಾರೆ. ಕಾಟಾಚಾರಕ್ಕೆ ಸುಗ್ರಿವಾಜ್ಞೆ ಎಂದು ಹೇಳುತ್ತಿದ್ದಾರೆ ಅಷ್ಟೆ ಎಂದು ಟೀಕಿಸಿದರು.
Key words: Congress, government, constant, atmosphere, R. Ashok
The post ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿತ್ಯವೂ ಸೂತಕದ ವಾತಾವರಣ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.