2
May, 2026

A News 365Times Venture

2
Saturday
May, 2026

A News 365Times Venture

ಮೇ 3 ರಂದು ‘ಕಾಯಕ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭ

Date:

ಮೈಸೂರು,ಮೇ,1,2026 (www.justkannada.in): ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಕಾಯಕ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 3 ಭಾನುವಾರದಂದು ಬೆಳಗ್ಗೆ 10.30ಕ್ಕೆ ಮೈಸೂರಿನ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಧುರೀಣ ಹಾಗೂ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅಯೂಬ್‌ಖಾನ್ ಮತ್ತು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಭಾಗವಹಿಸಲಿದ್ದಾರೆ.

ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ಬಸವ ಬಳಗಗಳ ಒಕ್ಕೂಟ 2026ರ ಅಧ್ಯಕ್ಷ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಸಿ.ಕೆ. ಮಹೇಂದ್ರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಉಪಸ್ಥಿತರಿರುವರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಹಾಗೂ ಉತ್ತಮ ಪುಟವಿನ್ಯಾಸಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮತ್ತು ಪ್ರತಿನಿಧಿ ದಿನಪತ್ರಿಕೆಯ ಉಪಸಂಪಾದಕ ರಂಗು ಸಂದೇಶ್ ಅವರಿಗೆ ಕಾಯಕ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಿಲ್ಲಾ ಘಟಕ ಮೈಸೂರಿನ ಅಧ್ಯಕ್ಷ ಬಿ.ಆರ್. ಶಿವಕುಮಾರ್ ನಿರ್ವಹಿಸಲಿದ್ದಾರೆ ಎಂದು ಅನಿಕೇತನ ಸೇವಾ ಟ್ರಸ್ಟ್‌ ಅಧ್ಯಕ್ಷ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್‌ ತಿಳಿಸಿದ್ದಾರೆ.

Key words: Mysore, Kayaka Seva Award, Aniketan Seva Trust

The post ಮೇ 3 ರಂದು ‘ಕಾಯಕ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഡി.എം.കെ 180 ലേറെ സീറ്റുകള്‍ നേടും; ടി.വി.കെ പിളര്‍ക്കുക എ.ഐ.എ.ഡി.എം.കെ വോട്ടുകളെന്ന് ഡി.എം.കെ വക്താവ്

ചെന്നൈ: തമിഴ്‌നാട്ടില്‍ 180ലേറെ സീറ്റുകള്‍ നേടി വന്‍ ഭൂരിപക്ഷത്തോടെ ഭരണം നിലനിര്‍ത്തുമെന്ന്...

"இந்தியர்கள் வேண்டாம்..!" – தைவானில் அரசின் முடிவுக்குக் கிளம்பும் எதிர்ப்பும் எதார்த்த நிலையும்!

தைவானில் நிலவும் கடுமையான தொழிலாளர் பற்றாக்குறையைச் சமாளிக்க, இந்தியாவுடன் தைவான் அரசு...

Tamil Nadu Politics: తమిళనాడులో రాజకీయ సంచలనం.. ‘విజయ్’ కింగ్ మేకర్‌గా మారతారా? మరో షాకింగ్‌ సర్వే!

Tamil Nadu Politics: తమిళనాడు రాజకీయాల్లో భారీ మార్పులకు దారితీసేలా ఒక...

അവര്‍ക്ക് ഹൃദയാഘാതം ഉണ്ടാകാതിരിക്കട്ടെ; ശത്രുക്കള്‍ ഭയക്കുന്ന ഒരായുധം, അത് അവരുടെ തൊട്ടടുത്തുണ്ട്; മുന്നറിയിപ്പുമായി ഇറാന്‍

ടെഹ്‌റാന്‍: അമേരിക്കയും ഇറാനും തമ്മിലുള്ള നയതന്ത്ര ചര്‍ച്ചകള്‍ പൂര്‍ണമായും വഴിമുട്ടിയതോടെ, പുതിയ...