ಮೈಸೂರು,ಫೆಬ್ರವರಿ,1,2025 (www.justkannada.in): ಸಿಎಂ ಬದಲಾವಣೆ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ನನ್ನ ಕಂಡ್ರೆ ಬಿಜೆಪಿಗೆ ಭಯ ಎಂದು ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚೇಂಜ್ ಆಗುತ್ತಾರೆ ಎಂದು ಹೇಳುತ್ತಲೆ ಇದ್ದಾರೆ ಚೇಂಜ್ ಪ್ರಶ್ನೆಯೆ ಇಲ್ಲ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಅಶೋಕ್ ಸುಮ್ಮನೆ ಏನೇನೋ ಮಾತಾಡುತ್ತಾರೆ. ಬಿಜೆಪಿ ಅವರು ಹಲವು ಬಾರಿ ಸಿಎಂ ಬದಲಾವಣೆ ಆಗಿಯೆ ಹೋಯ್ತು ಎಂದು ಮಾತಾಡಿದ್ದಾರೆ. ಬದಲಾವಣೆ ಆಗಿದ್ಯಾ? ಎಂದು ಪ್ರಶ್ನಿಸಿದರು.
ಬಿಜೆಪಿ ಸಂಪೂರ್ಣವಾಗಿ ಇಬ್ಭಾಗವಾಗಿದೆ. ಒಬ್ಬರನ್ನು ಕಂಡರೆ ಒಬ್ಬರು ಕೆಟ್ಟ ಕೆಟ್ಟದಾಗಿ ಬೈಯ್ದು ಕೊಳ್ಳುತ್ತಿದ್ದಾರೆ. ಏಕ ವಚನದಲ್ಲಿ ಬೈಯ್ದಾಡುತ್ತಿದ್ದಾರೆ. ಅದನ್ನು ಅಶೋಕ್ ಮೊದಲು ನೋಡಿಕೊಳ್ಳಲಿ. ಬಿಜೆಪಿ ಹಳಸಿಕೊಂಡಿದೆ. ಅದನ್ನು ನೋಡಿ ನೋಡಿಕೊಂಡು ನಮ್ಮ ಬಗ್ಗೆ ಮಾತಾಡುತ್ತಾರೆ. ನಾನು ಗಂಟು ಮೂಟೆ ಕಟ್ಟಿದ್ದೇನೆ ಎಂದು ಬಿಜೆಪಿ ಅವರು ಬಹಳಷ್ಟು ಬಾರಿ ಭ್ರಷ್ಟಾಚಾರದ ಅಪಪ್ರಚಾರ ಮಾಡಿದರು ಉಪ ಚುನಾವಣೆ ಗೆಲ್ಲಲಿಲ್ವಾ? ಜೆಡಿಎಸ್ ಉತ್ತರಾಧಿಕಾರಿ ಹಾಗೂ ಅಧ್ಯಕ್ಷನಾಗಲು ಹೊರಟ್ಟಿದ್ದವರನ್ನೆ ಅವರ ಕ್ಷೇತ್ರದಲ್ಲಿ ಸೋಲಿಸಿದ್ದೇವೆ. ಚಿಕ್ಕೋಡಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿ ಗೆದ್ದಿದ್ದೇವೆ. ಇದು ನಮಗೆ ಜನರು ಮಾಡುತ್ತಿರುವ ಆಶೀರ್ವಾದ. ಕಾಂಗ್ರೆಸ್ ಪರವಾದ ಅಲೆ ಮುಂದೆಯೂ ಇನ್ನೂ ಜೋರಾಗುತ್ತದೆ. ಸಿದ್ದರಾಮಯ್ಯ ಕಂಡರೆ ಬಿಜೆಪಿ ಗೆ ಭಯ ಎಂದರು.
Key words: fear ,BJP, CM Siddaramaiah
The post ನನ್ನ ಕಂಡ್ರೆ ಬಿಜೆಪಿಗೆ ಭಯ: ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.