ಮೈಸೂರು,ಜನವರಿ,25,2025 (www.justkannada.in): ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ನಿನ್ನೆ ನಡೆದ ರಾಜ್ಯ ಸಚಿವ ಸಫುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಸರ್ಕಾರದ ಈ ನಡೆಗೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ಸಿದ್ದರಾಮಯ್ಯ ಸಿಎಂ ಅದಾಗೆಲ್ಲ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸೆಟಲ್ ಮೆಂಟ್ ಮಾಡಬಹುದಿತ್ತು. ಆದರೆ ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಸಿಎಂ ಅದಾಗೆಲ್ಲ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ. ರಸ್ತೆಗೆ ಇರುವ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ. ನಾನು ಡೆಮೋಕ್ರೆಟಿಕ್ ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆ. ಈ ರೀತಿ ಸಿಎಂ ಸಿದ್ದರಾಮಯ್ಯ ನಡೆದುಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಸರ್ಕಾರದ ಕೈಗೊಂಬೆ
ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್ , ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದೆ. ಲೋಕಾಯುಕ್ತರಿಗೆ ಪೋಸ್ಟಿಂಗ್ ಮಾಡೋದು ಸರ್ಕಾರ. ಹೀಗಾಗಿ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ಇಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದೆಯಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ.? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೊ ಶಾಸಕರ ಅಧಿಕಾರಿಗಳಗಬಾರದು ಎಂದು ಹೆಚ್.ವಿಶ್ವನಾಥ್ ಚಾಟಿ ಬೀಸಿದರು.
Key words: CM Siddaramaiah, palace, H. Vishwanath, ordinance
The post ಸಿದ್ದರಾಮಯ್ಯ ಸಿಎಂ ಅದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ: ಸುಗ್ರಿವಾಜ್ಞೆಗೆ ಹೆಚ್.ವಿಶ್ವನಾಥ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.