ಮೈಸೂರು, ಮೇ.೦೩,೨೦೨೬: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆಯಿಂದ ಮೈಸೂರು ನಗರ ಪಾಲಿಕೆ ಎಚ್ಚೆತ್ತ್ತುಕೊಳ್ಳಬೇಕಾಗಿದೆ. ಏಕೆಂದರೆ ಮೈಸೂರಿನ ಹೃದಯ ಭಾಗದಲ್ಲಿಯೇ ಬ್ರಿಟಿಷರ ಕಾಲದ ಹಲವಾರು ಕಟ್ಟಡಗಳು ಧರೆಗುರುಳಲು ತುದಿಗಾಲಿನಲ್ಲಿ ನಿಂತಿದೆ.
ಆದರೆ ಜಿಲ್ಲಾಡಳಿತ, ಪೊಲೀಸರು, ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತುಕೊಳ್ಳಬೇಕಾದರೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡಿನಂತೆ ಮೈಸೂರಲ್ಲೂ ಕೂಡಾ ಹೆಣಗಳು ಉರುಳಬೇಕೇನೋ!
ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನ ಹೃದಯ ಭಾಗದ ಶ್ರೀರಾಮ ಪೇಟೆಯ ವಿನೋಬಾ ರಸ್ತೆಯಲ್ಲಿರುವ ಮನ್ನಾರ್ಸ್ ಮಾರ್ಕೆಟ್ ಎದುರು ಇರುವ ಬೃಹತ್ ಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದೆ.ಇಂದೋ ನಾಳೆಯೋ ಧರೆಗುರುಳಿ ಅಮಾಯಕರನ್ನು ಬಲಿ ಪಡೆಯಲು ಕಾಯುತ್ತಿದೆ.
ಕೃಷ್ಣರಾಜ ವೃತ್ತ,ದೇವರಾಜ ಮಾರುಕಟ್ಡೆ,ದೇವರಾಜ ಅರಸ್ ರಸ್ತೆ ಮುಂತಾದ ಜನನಿಬಿಡ ಸ್ಥಳದ ಪಕ್ಕದಲ್ಲಿಯೇ ಇರುವ ವಿನೋಬಾರಸ್ತೆಯ ಈ ಭಾಗದಲ್ಲಿ ಇರುವ ಜನಜಂಗುಳಿಯು ತಿರುಪತಿ ತಿಮ್ಮಪ್ಪನ ಸನ್ನಿಧಿಗಿಂತಲೂ ಹೆಚ್ಚಾಗಿರುತ್ತದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಕಾಲದ ಹೊಡೆತಕ್ಕೆ ನಲುಗಿ ಈ ಪುರಾತನ ಕಟ್ಟಡವು ನೀರಿನಲ್ಲಿ ನೆನೆದು ಬಿರುಕು ಬಿಟ್ಟು ಧರೆಗುರುಳಲು ತುದಿಗಾಲಿನಲ್ಲಿ ನಿಂತಿದೆ.

ಈ ಕಟ್ಟಡ ಧರೆಗುರುಳಲು ಭೂಕಂಪ ಸಂಭವಿಸಬೇಕಿಲ್ಲ.ಈ ಕಟ್ಟಡದ ಸಮೀಪ ಒಂದು ಜೆಸಿಬಿ ಓಡಾಡಿದರೂ ಸಾಕು!
ವಿಪರ್ಯಾಸವೆಂದರೆ ಈ ಕಟ್ಟಡದಲ್ಲಿ ಈಗಲೂ ವ್ಯಾಪಾರ-ವಹಿವಾಟು ನಡೆಯುತ್ತಿದೆ.ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಶಿಥಿಲವಾದ ಈ ಕಟ್ಟಡದ ಸುತ್ತ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.ಕಟ್ಟಡ ಧರೆಗುರುಳಿ ಪ್ರಾಣಹಾನಿ ಸಂಭವಿಸುವ ದೃಶ್ಯ ಸರೆಯಾಗಲಿ ಎಂದು!
ಈ ಭಾಗದಲ್ಲಿ ಓಡಾಡುವ ಪಾಲಿಕೆ ಇಂಜಿನಿಯರ್, ಕಾರ್ಪೊರೇಟರ್, ಪೊಲೀಸರು ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಈ ಅಪಾಯಕಾರಿ ಕಟ್ಟಡ ಗೋಚರಿಸುತ್ತಿಲ್ಲವೇ? ಈ ಪುರಾತನ ಕಟ್ಟಡ ಧರೆಗುರುಳಿದರೆ ಕಟ್ಟಡದೊಂದಿಗೆ ಅಮಾಯಕರ ಪ್ರಾಣಹಾನಿ ಸಂಭವಿಸಬಹುದೆಂಬ ಸಾಮಾನ್ಯ ಜ್ಞಾನ ನಮ್ಮ ಪಾಲಿಕೆಯ ಅಧಿಕಾರಿಗಳಿಗಿಲ್ಲವೇ?
ಇದೇ ಜಾಗದಲ್ಲಿ ದೇವರಾಜ ಪೊಲೀಸರು ಸದಾಕಾಲ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಅವರಿಗೂ ಈ ಅಪಾಯದ ಅರಿವಿಲ್ಲವೇ?
ಶಿಥಿಲವಾದ ಈ ಕಟ್ಟಡದಲ್ಲಿ ಇರುವ ವ್ಯಾಪಾರಸ್ಥರ ಮಳಿಗೆಗಳಲ್ಲಿ ಮಾರಾಟ ಮಾಡುವ ನಿಷೇದ್ಇತ ಪ್ಲಾಸ್ಟಿಕ್ ಕವರುಗಳನ್ನು ಜಪ್ತಿ ಮಾಡಲು ಆಗಾಗ ಪಾಲಿಕೆ ಅಧಿಕಾರಿಗಳು ಭೇಟಿ ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಪಾಲಿಕೆಯ ಅಧಿಕಾರಿಗಳ ಮೇಲೆ ಈ ಕಟ್ಟಡ ಕುಸಿದುಬಿದ್ದರೆ,ಅವರ ಪ್ರಾಣಹಾನಿಯಾದರೆ ಯಾರು ಹೊಣೆ? ಪಾಲಿಕೆಯ ಬೇಜವಾಬ್ದಾರಿಯಿಂದ ಪಾಲಿಕೆಯ ಅಧಿಕಾರಿಗಳ ಪ್ರಾಣಕ್ಕೆ ಕುತ್ತಾದರೆ ಜವಾಬ್ದಾರಿ ಯಾರು ಹೊರುತ್ತಾರೆ?
ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಈ ಅಪಾಯಕಾರಿ ಕಟ್ಟಡವನ್ನು ತೆರವುಗೊಳಿಸಿ ಮೈಸೂರಿನ ನಾಗರಿಕರು ನೆಮ್ಮದಿಯಿಂದ ಈ ಭಾಗದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಿ.
ಈ ಕಟ್ಟಡವನ್ನು ಪಾಲಿಕೆಯು ತೆರವುಗೊಳಿಸುವವರೆಗೆ ದೇವರಾಜ ಪೊಲೀಸರು ಕಟ್ಟಡದ ಸುತ್ತ ಬ್ಯಾರಿಕೆಡ್ ಅಳವಡಿಸಿ ಸಾರ್ವಜನಿಕರು ಸಂಚರಿಸದಂತೆ ಕ್ರಮ ಜರುಗಿಸಿ ಜವಾಬ್ದಾರಿ ಮೆರೆಯಲಿ.
ಅನಾಹುತ,ಸಾವು-ನೋವು ಸಂಭವಿಸಿದ ನಂತರ ದೂರು,ಎಫ್ ಐ ಆರ್,ಶವ ಮಹಜರ್,ಪೋಸ್ಟ್ ಮಾರ್ಟಂ,ಇತ್ಯಾದಿಗಳಿಗೆಂದು ಓಡಾಡಿ ನಂತರ ಮುಖ್ಯಮಂತ್ರಿಗಳು ಬಂದು ಸತ್ತವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸುವ ಬದಲಾಗಿ ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದು ಜಾಣತನ.
–ಪಿ.ಜೆ.ರಾಘವೇಂದ್ರ , ನ್ಯಾಯವಾದಿ ಮೈಸೂರು
key words: Danger, Lurks, in the Heart of, Mysuru

SUMMARY:
Danger Lurks in the Heart of Mysuru
Mysuru, May 3, 2026:
The tragic collapse of the compound wall at Bowring and Lady Curzon Hospital in Bengaluru, which claimed 7 lives, has raised serious concerns for Mysuru city as well.
Several British-era buildings in the heart of Mysuru are in a dilapidated condition and on the verge of collapse. However, authorities including the district administration, police, city corporation, and development bodies appear to be inactive.

A dangerously weakened structure located on Vinoba Road in Shivarampet, opposite Mannar’s Market, poses an immediate threat to public safety. The building could collapse at any moment, risking innocent lives.
This area, close to busy zones like Krishnaraja Circle, Devaraja Market, and Devaraj Urs Road, witnesses heavy footfall—often compared to the crowd density at Tirumala Venkateswara Temple.
The pressing question remains:
Will authorities act before tragedy strikes, or only after lives are lost?

The post ಮೈಸೂರಿನ ಹೃದಯ ಭಾಗದಲ್ಲಿಯೇ ವಾಲಾಡುತ್ತಿದೆ ತೂಗುಗತ್ತಿ! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





