19
June, 2025

A News 365Times Venture

19
Thursday
June, 2025

A News 365Times Venture

UPSC: ಅರ್ಜಿ ಸಲ್ಲಿಕೆಗೆ ದಾಖಲೆ ಕಡ್ಡಾಯ

Date:

ನವದೆಹಲಿ,ಜನವರಿ,25,2025 (www.justkannada.in): ಅಭ್ಯರ್ಥಿಗಳು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ವಯಸ್ಸು ದೃಢಪಡಿಸುವ ಮತ್ತು ಮೀಸಲಾತಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಇದಕ್ಕೂ ಮೊದಲು  ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ ಲೋಡ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಈ ಮಧ್ಯೆ ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ನಕಲಿ ದಾಖಲೆಗಳನ್ನು ನೀಡಿದ್ದ ಆರೋಪ ಈಚೆಗೆ ಕೇಳಿಬಂದಿದ್ದು,  ಇದರ ಬೆನ್ನಲ್ಲೇ ಇದೀಗ  ಕೇಂದ್ರ ಸರ್ಕಾರ ನಿಯಮಗಳಲ್ಲಿ ಬದಲಾವಣೆ ತಂದಿದೆ.

ಅಭ್ಯರ್ಥಿಗಳು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ವಯಸ್ಸು ದೃಢಪಡಿಸುವ ಮತ್ತು ಮೀಸಲಾತಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದೆ.  ಆನ್‌ ಲೈನ್ ಅರ್ಜಿ ನಮೂನೆಯೊಂದಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ವಿಫಲ ‘ವಾದರೆ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಜನವರಿ 22ರಂದು ಹೊರಡಿಸಿರುವ ‘ನಾಗರಿಕ ಸೇವಾ ಪರೀಕ್ಷೆಗಳ ನಿಯಮ- 2025’ರಲ್ಲಿ ತಿಳಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗವು ಈ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ್ದು, ಪೂರ್ವಭಾವಿ ಪರೀಕ್ಷೆಯು ಮೇ 25ರಂದು ನಡೆಯಲಿದೆ. ಐಎಎಸ್, ಐಎಫ್‌ಎಸ್ ಮತ್ತು ಐಪಿಎಸ್ ಸೇರಿದಂತೆ ಒಟ್ಟು 979 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು http:// upsconline.gov.in ವೆಬ್‌ಸೈಟ್ ಮೂಲಕ ಫೆಬ್ರುವರಿ 11, 2025ರ ಸಂಜೆ  6 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Key words: Documents, mandatory,  filing, application, UPSC, Exam

The post UPSC: ಅರ್ಜಿ ಸಲ್ಲಿಕೆಗೆ ದಾಖಲೆ ಕಡ್ಡಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮುಸ್ಲೀಮರಿಗೆ ಮೀಸಲಾತಿ ಹೆಚ್ಚಳ: ಎಸ್.ಸಿ, ಎಸ್ ಟಿ, ಒಬಿಸಿಗೆ ಅನ್ಯಾಯ-ಎನ್. ರವಿಕುಮಾರ್ ಕಿಡಿ

ಬೆಂಗಳೂರು,ಜೂನ್,19,2025 (www.justkannada.in): ಮುಸ್ಲೀಂ ಸಮುದಾಯಕ್ಕೆ ಗುತ್ತಿಗೆ ಬಳಿಕೆ ವಸತಿ ಯೋಜನೆಯಲ್ಲೂ...

"அதிமுக தலைமையிலான கூட்டணியா? கூட்டணிக்குள் அதிமுக-வா?" – விமர்சிக்கும் திருநாவுக்கரசர்

ராகுல் காந்தி பிறந்த நாளை முன்னிட்டு, புதுக்கோட்டை பார்வையற்றோர் பள்ளியில் மதிய...

Russia: ఇజ్రాయిల్-ఇరాన్ వివాదంలో మీ జోక్యం వద్దు.. యూఎస్‌కి రష్యా వార్నింగ్..

Russia: ఇజ్రాయిల్ ఇరాన్ సంఘర్షణ నేపథ్యంలో రష్యా అమెరికాకు స్ట్రాంగ్ వార్నింగ్...

ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು.

ಬೆಂಗಳೂರು,ಜೂನ್,19,2025 (www.justkannada.in):  ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡು...