30
April, 2026

A News 365Times Venture

30
Thursday
April, 2026

A News 365Times Venture

ಶೀಲ ಶಂಕಿಸಿ ಪತ್ನಿ ಕೊಂದಿದ್ದ ಆಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ.

Date:

ಮಂಡ್ಯ. ಏಪ್ರಿಲ್, 30,2026 (www.justkannada.in):  ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದಿದ್ದ ಅಪರಾಧಿಗೆ  ಮಂಡ್ಯದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಅಜ್ವಲ್ ಖಾನ್ ಬಿನ್ (39) ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ . ಈತ  ಮೂಲತ: ರಾಮನಗರ ಪಟ್ಟಣ ಎಕ್ಸ್‌ ಟೆನ್ಸನ್ ಲೇಔಟ್ ವಾಸಿಯಾಗಿದ್ದು, ನಂತರ ಮಂಡ್ಯ ಜಿಲ್ಲೆ ಮಳ್ಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮ ವಾಸವಾಗಿದ್ದನು, ಈತ.2006 ರಲ್ಲಿ ಸಲ್ಮಾ ಬೇಗಂ ಎಂಬುವವರನ್ನು ಮದುವೆಯಾಗಿದ್ದನು.

ಮದುವೆಯಾದ ನಂತರ ಮೂರು ವರ್ಷಗಳ ಕಾಲ ಅನ್ಯೂನ್ಯವಾಗಿದ್ದರು.  ತದನಂತರ ಆರೋಪಿ ಅಜ್ವಲ್ ಖಾನ್ ಬಿನ್ ಸಲ್ಯಾ ಬೇಗಂ ಅವರ ಶೀಲದ ಮೇಲೆ ಅನುಮಾನ ಪಟ್ಟು. ಶೀಲ ಶಂಕಿಸಿ  2023 ಮೇ 8 ರಂದು ಸಲ್ಮಾ ಬೇಗಂನನ್ನು ಕೊಲೆಗೈದಿದ್ದನು. ಈ ಸಂಬಂಧ ಆರೋಪಿತನ ವಿರುದ್ಧ ಕಲಂ.498(ಎ),120(ಬಿ), 302 ರೆ/ವಿ 34 ಐ.ಪಿ.ಸಿ ಅಡಿ ಹಲಗೂರು ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸದರಿ ಪ್ರಕರಣದ ವಿಚಾರಣೆ ನಡೆಸಿದ  ಮಂಡ್ಯದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಸಾಕ್ಷ್ಯಧಾರಗಳನ್ನು ಪರಿಗಣಿಸಿ ಕಲಂ. 498(ಎ), 120(ಬಿ), 302 ಐ.ಪಿ.ಸಿ ರೀತ್ಯಾ ಆರೋಪಿಯು ತನ್ನ ಮಗನೊಂದಿಗೆ (ಕಾ.ಸ.ಒ.ಬಾ) ಸೇರಿ ತನ್ನ ಪತ್ನಿಯ ಕೊಲೆ ಮಾಡಿರುವುದು ವಿಚಾರಣೆಯಿಂದ ದೃಡಪಟ್ಟಿದೆ ಎಂದು ಘೋಷಿಸಿದರು. ಹಾಗೆಯೇ ಆರೋಪಿ ಅಜ್ವಲ್ ಖಾನ್ ಬಿನ್ ಗೆ ಭಾದಂಸಂ ಕಲಂ. 302 ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1,00,000/- ರೂಪಾಯಿ ದಂಡ. ಮತ್ತು ಭಾದಂಸಂ ಕಲಂ. 120(ಬಿ)ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1.00.000/- ರೂಪಾಯಿ ದಂಡ, ಭಾದಂಸಂ ಕಲಂ.498(ಎ)ರ ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಸಜೆ ಮತ್ತು 25,000/- ರೂ ದಂಡ ವಿಧಿಸಿ ಶಿಕ್ಷೆಯ ತೀರ್ಪು ಪ್ರಕಟಿಸಿದರು.

ಮೃತರ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರಿದಂದ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ. ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕ  ನಾಗರಾಜ ಕೆ. ರವರು ವಾದ ಮಂಡಿಸಿದ್ದರು

Key words: Life sentence, husband, killed, wife, Mandya

The post ಶೀಲ ಶಂಕಿಸಿ ಪತ್ನಿ ಕೊಂದಿದ್ದ ಆಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുസ്‌ലിങ്ങള്‍ മുഖ്യമന്ത്രിയാകരുതെന്ന് ഭരണഘടനയില്‍ എവിടെയെങ്കിലും പറഞ്ഞിട്ടുണ്ടോ? വെള്ളാപ്പള്ളിയോട് ടി.എസ്. ശ്യാംകുമാര്‍

  കോഴിക്കോട്: യു.ഡി.എഫ് അധികാരത്തിലെത്തിയാല്‍ മുസ്‌ലിം ലീഗില്‍ നിന്നും മുഖ്യമന്ത്രിയുണ്ടായേക്കാമെന്ന എസ്.എന്‍.ഡി.പി...

தமிழ்நாடு `டு' மேற்கு வங்கம்; எக்ஸிட் போல் குறித்து மல்லிகார்ஜுன கார்கே சொன்னது என்ன?

புதுச்சேரி, கேரளா, மற்றும் அஸ்ஸாம் ஆகிய மூன்று மாநில சட்டமன்றத் தேர்தல்கள்...

West Bengal Exit Poll 2026: బెంగాల్ లేటెస్ట్ ఎగ్జిట్ పోల్.. బీజేపీదే అధికారం..

West Bengal Exit Poll 2026: నాలుగు రాష్ట్రాలు, ఒక కేంద్రపాలిత...

കാര്യങ്ങള്‍ കൈവിടുന്നു, എണ്ണവില കുതിച്ചുയരുന്നു; ഹോര്‍മുസ് കടലിടുക്ക് തുറക്കാന്‍ അന്താരാഷ്ട്ര സഹായം തേടി അമേരിക്ക

  വാഷിങ്ടണ്‍: ഇറാനുമായുള്ള യുദ്ധം രണ്ട് മാസം പിന്നിടുന്ന സാഹചര്യത്തില്‍ ഹോര്‍മുസ്...