11
October, 2026

A News 365Times Venture

11
Sunday
October, 2026

A News 365Times Venture

ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ: ಚಾವಿಸನಿನಿ(CESC) ಸ್ಪಷ್ಟನೆ

Date:

ಮೈಸೂರು, ಜುಲೈ, 29, 2026 (www.justkannada.in): ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚಾವಿಸನಿನಿ) ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹ ಕಾರ್ಯ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ.

ಈ ನಡುವೆ, ಫಲಾನುಭವಿಗಳ ಮಾಹಿತಿ ಸಂಗ್ರಹಣೆಗೆ ಜುಲೈ 31,2026 ಕೊನೆಯ ದಿನ ಎಂಬ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ವದಂತಿ ಗ್ರಾಹಕರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದೆ. ಈ ಕುರಿತು ಚಾವಿಸನಿನಿ ಸ್ಪಷ್ಟನೆ ನೀಡಿದ್ದು, ಮಾಹಿತಿ ಸಂಗ್ರಹಣೆ ಹಾಗೂ ಅಗತ್ಯ ವಿವರಗಳನ್ನು ಸಲ್ಲಿಸಲು ಆಗಸ್ಟ್‌ 31, 2026ರವರೆಗೂ ಅವಕಾಶವಿದೆ.

ಆದ್ದರಿಂದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹಾಗೂ ವಿದ್ಯುತ್ ಗ್ರಾಹಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗದೆ, ನಿಗದಿತ ಅವಧಿಯೊಳಗೆ ತಮ್ಮ ಮಾಹಿತಿಯನ್ನು ಸಲ್ಲಿಸಬಹುದು ಮತ್ತು ಇದಕ್ಕಾಗಿ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಚಾವಿಸನಿನಿ ತಿಳಿಸಿದೆ.

ಚಾವಿಸನಿನಿಯ ಮೀಟರ್‌ ರೀಡರ್‌ ಅಥವಾ ನಿಯೋಜಿತ ಸಿಬ್ಬಂದಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗೆ ಮಾಹಿತಿ ಸಂಗ್ರಹಣೆಗೆ ಭೇಟಿ ನೀಡಲಿದ್ದು, ಗ್ರಾಹಕರು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಚಾವಿಸನಿನಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೃಹಜ್ಯೋತಿ ಮಾಹಿತಿ ಸಂಗ್ರಹಣೆಗೆ ನೀಡಬೇಕಾದ ದಾಖಲಾತಿಗಳ ವಿವರ:

  1. ಆಧಾರ್ ಕಾರ್ಡ್
  2. ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  3. ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
  4. ಪ್ಯಾನ್ ಕಾರ್ಡ್ (ಅನ್ವಯಿಸುವಲ್ಲಿ ಮಾತ್ರ)
  5. ಚಾಲ್ತಿಯಲ್ಲಿರುವ ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ)
  6. ರೇಷನ್ ಕಾರ್ಡ್(ಅನ್ವಯಿಸುವಲ್ಲಿ ಮಾತ್ರ)

Key words: Rumors, Grihajyoti, data collection, CESC,  clarifies

The post ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ: ಚಾವಿಸನಿನಿ(CESC) ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുഖ്യ തെരഞ്ഞെടുപ്പ് കമ്മീഷണർക്കെതിരെ പ്രക്ഷോഭം ശക്തമാക്കാൻ സി.ജെ.പി; മുംബൈയിൽ ഇന്ന് സമരം

ന്യൂദൽഹി: മോദിയും അമിത് ഷായും ചേർന്ന് രാജ്യത്തെ ഏകാധിപത്യത്തിലേക്ക് നയിക്കുകയാണെന്നും ഇതിനെതിരെ...

"உக்ரைனுக்கு புதிய அதிபர் வர வேண்டிய நேரம் வந்துவிட்டது" – ரஷ்யாவிடம் 'டீல்' போட்ட ட்ரம்ப் கருத்து

நேற்று முன்தினம் (அக்டோபர் 9) அமெரிக்க அதிபர் டரம்ப், ரஷ்யாவுடன் டீசல்...

Yogi Adityanath: ‘‘ఇద్దరం పోటీ చేద్దాం, అదృష్టాన్ని పరీక్షించుకుందాం’’.. అఖిలేష్‌కు యోగి సవాల్..

Yogi Adityanath: సమాజ్‌వాదీ పార్టీ(ఎస్పీ)చీఫ్ అఖిలేష్ యాదవ్‌కు ఉత్తర్ ప్రదేశ్ సీఎం...

ഫോര്‍ട്ട് ഹുഡ് കൊലയാളിയുടെ വധശിക്ഷ ലൈവ് സ്ട്രീം ചെയ്യുമെന്ന് യു.എസ്: വധശിക്ഷ സ്വീകാര്യമല്ലെന്ന് മാര്‍പാപ്പ

വാഷിങ്ടണ്‍ ഡി.സി: വധശിക്ഷ അനുവദനീയമല്ലെന്നും അത് വ്യക്തിയുടെ അന്തസിന് നേരെയുള്ള ആക്രമണമാണെന്നും...