17
April, 2026

A News 365Times Venture

17
Friday
April, 2026

A News 365Times Venture

ಬಾನುಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸುವವರಿಗೆ  ಠಕ್ಕರ್ : ಸೆ.9 ರಂದು ‘ಚಾಮುಂಡಿ ನಡಿಗೆ’

Date:

ಮೈಸೂರು,ಸೆಪ್ಟಂಬರ್,6,2025 (www.justkannada.in): ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿರುವುದನ್ನ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದು ಇದಕ್ಕೆ ಪ್ರತಿಯಾಗಿ ದಲಿತ ಮಹಾಸಭಾವು ಚಾಮುಂಡಿ ನಡಿಗೆ ಆಯೋಜಿಸಿದೆ.

ದಿನಾಂಕ 09-09-2025 ರಂದು ಚಾಮುಂಡಿಬೆಟ್ಟಕ್ಕೆ ಚಾಮುಂಡಿತಾಯಿಯನ್ನು ಮತ್ತು ದಸರಾ ಉದ್ಘಾಟನೆಯನ್ನು ಕುರುಬರಹಳ್ಳಿ ವೃತ್ತದಿಂದ ರಾಜಕೀಯಕ್ಕೆ ಹಾಗೂ ಕೋಮುಗಲಭೆ ಸೃಷ್ಟಿಸಲು ಬಳಸಿಕೊಳ್ಳೂತ್ತಿರುವವರ ವಿರುದ್ಧ ಚಾಮುಂಡಿ ನಡಿಗೆ ಮಾಡಲು ಅನುಮತಿ  ನೀಡುವಂತೆ ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ಅವರು ಪೊಲೀಸ್ ಆಯಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ನಿಸಾರ್ ಅಹಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜರವರನ್ನು ಕರೆದು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಯೆಂದು ಹೇಳಿಕೊಳ್ಳುತ್ತಿರುವವರು ಚಕಾರವೆತ್ತಿರಲಿಲ್ಲ. ಆದರೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾಗಿರುವ ಬಾನು ಮಸ್ತಾಕ್ ರವರನ್ನು ದಸರಾ ಉದ್ಘಾಟಿಸಲು ಸರ್ಕಾರ ಅಹ್ವಾನ ಮಾಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂದು ಪ್ರಯತ್ನ ನಡೆಯುತ್ತಿದೆ.

ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಸುಮಾರು 10000 ಜನರು ದಿನಾಂಕ 09-09-2025 ರಂದು ಬೆಳಿಗ್ಗೆ  7.30ಕ್ಕೆ “ಚಾಮುಂಡಿತಾಯಿಯನ್ನು ರಾಜಕೀಯಗೊಳಿಸದಿರಿ ಹಾಗು ಕೋಮುಗಲಭೆ ಸೃಷ್ಟಿಸದಿರಿ” ಎಂಬ ಘೋಷವಾಕ್ಯದಡಿ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

Key words: Banumushtak, inauguration, Dasara,  Chamundi nadige, September 9

The post ಬಾನುಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸುವವರಿಗೆ  ಠಕ್ಕರ್ : ಸೆ.9 ರಂದು ‘ಚಾಮುಂಡಿ ನಡಿಗೆ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മന്തിക്കടയുടെ വിഷുപരസ്യത്തിൽ ശ്രീകൃഷ്ണൻ; സംഘപരിവാർ പ്രവർത്തകന്റെ പരാതിയിൽ ഉടമയെ അറസ്റ്റ് ചെയ്ത പോലീസ്

ആലപ്പുഴ: മന്തിക്കടയുടെ വിഷുപരസ്യത്തിൽ ശ്രീകൃഷ്ണന്റെ ചിത്രം ഉപയോഗിച്ചതിൽ കടയുടമയെ അറസ്റ്റ് ചെയ്ത്...

"பெண் தெய்வமான காளியும் கருப்பு உடைதான் அணிந்துள்ளார்.!"- மோடியின் விமர்சனத்திற்கு கனிமொழி பதிலடி

மகளிர் இடஒதுக்கீடு மசோதா மற்றும் தொகுதி மறுவரையறை மசோதா மீதான விவாதம்...

Yuvraj Singh: అభిషేక్ శర్మతో పాటు.. అతడు కూడా యువరాజ్ సింగ్ శిష్యుడే.. ఓపెనింగ్‌లో దబిడిదిబిడే..

క్రికెట్ అనేది కేవలం గణాంకాలు, స్కోర్లకే పరిమితం కాదు.. సరైన గురువుల...

ಸಚಿವ ಜಮೀರ್ ಬಗ್ಗೆ ವದಂತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು- ಬಿಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು,ಏಪ್ರಿಲ್,17,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಉಪಚುನಾವಣಾ...