16
August, 2026

A News 365Times Venture

16
Sunday
August, 2026

A News 365Times Venture

ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಕೇಸ್: ಆರೋಪಿ ಪತ್ನಿ ಸೇರಿ ಮೂವರಿಗೆ ಜೈಲುಶಿಕ್ಷೆ, ದಂಡ

Date:

ಮೈಸೂರು,ಫೆಬ್ರವರಿ,6,2025 (www.justkannada.in): ಪತ್ನಿ  ಪರಪುರಷನೊಂದಿಗೆ ಆನೈತಿಕ ಸಂಬಂಧವಿಟ್ಟುಕೊಂಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ, ಆಕೆಯ ಸಹೋದರ ಮತ್ತು ಪ್ರಿಯಕರನಿಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 5 ವರ್ಷಗಳ ಕಠಿಣ ಸಜೆ ಮತ್ತು ರೂ.1,25 ಲಕ್ಷ ರೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ನಂಜನಗೂಡು ತಾಲ್ಲೂಕು ಬಿಳಿಗೆರೆ ಗ್ರಾಮದ ಮಾದೇಗೌಡರ ಮಗನಾದ ಕುಮಾರ್ ಎಂಬುವವರು 23.01.2018ರಂದು  ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಕುಮಾರ್ ಅವರ ಪತ್ನಿ ಜ್ಯೋತಿಯು (1ನೇಆರೋಪಿ), ಪ್ರಿಯಕರ ಚಿಕ್ಕಾಟಿ ಗ್ರಾಮದ ಪ್ರಸನ್ನಕುಮಾರ(3ನೇ ಆರೋಪಿ) ಆಕೆಯ ಸಹೋದರ ಮಂಜುನಾಥ(2ನೇ ಆರೋಪಿ) ಜೈಲು ಶಿಕ್ಷೆಗೊಳಗಾದವರು.

ಪತ್ನಿ ಜ್ಯೋತಿಯು  ಪ್ರಸನ್ನಕುಮಾರ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದನ್ನ ಕಣ್ಣಾರೇ ಕಂಡಿದ್ದ ಪತಿ ಕುಮಾರ್ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪೋಲಿಸ್ ಉಪನಿರೀಕ್ಷಕರಾದ ಯಶವಂತಕುಮಾರ್‌ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆ)ದ ನ್ಯಾಯಾಧೀಶೆ ಕೆ. ಭಾಗ್ಯ ಅವರು ಆರೋಪಿಗಳು ಭಾರತೀಯ ದಂಡ ಸಂಹಿತೆಯ ಕಲಂ 306, 109 ಸ/ವಾ 34 ರಡಿಯಲ್ಲಿ ಅಪರಾಧವೆಸಗಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಅವರಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ. ನ್ಯಾಯಾಧೀಶರು ಆರೋಪಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆಯನ್ನು ವಿಧಿಸಿದ್ದು ಹಾಗೂ ರೂ.1,25,000/- ದಂಡವನ್ನು ವಿಧಿಸಿದ್ದು ದಂಡವನ್ನು ತೆರಲು ತಪ್ಪಿದಲ್ಲಿ 1 ವರ್ಷದ ಸಜೆಯನ್ನು ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ.ಟಿ.ಹೆಚ್.ರವರು ವಾದಿಸಿದರು.

Key words: husband, commits suicide, wife, sentenced to jail, mysore court

The post ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಕೇಸ್: ಆರೋಪಿ ಪತ್ನಿ ಸೇರಿ ಮೂವರಿಗೆ ಜೈಲುಶಿಕ್ಷೆ, ದಂಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇസ്രഈല്‍ ആക്രമണം: തിരിച്ചടിക്കാന്‍ ലെബനന് അവകാശമുണ്ട്, പൂര്‍ണ പിന്തുണയുമായി ഇറാന്‍

ടെഹ്‌റാന്‍: തെക്കന്‍ ലെബനനിലെ നബാത്തിയ പ്രദേശത്ത് ഇസ്രഈല്‍ നടത്തിയ ശക്തമായ ആക്രമണത്തെ...

"தமிழ்நாடு முழுக்கவே வம்பு இழுத்து வைத்திருக்கிறேன்!"- சொல்கிறார் அமைச்சர் பிரபு

பாரம்பர்ய அரசியல் குடும்பத்திலிருந்து த.வெ.க-வுக்குள் அடியெடுத்துவைத்த டாக்டர் து.க.பிரபு, காரைக்குடி தொகுதியில்...

Guinness World Record: ముక్కు నేలకు తాకేలా హ్యాండ్‌స్టాండ్ పుష్‌అప్స్.. మహిళ గిన్నిస్‌ రికార్డు..

Guinness World Record: పుష్‌అప్స్‌ చేయడమే చాలా మందికి కష్టంగా ఉంటుంది.....

 പറയൂ, നിങ്ങൾ ഏത് സ്വാതന്ത്ര്യ സമരത്തിലാണ് പങ്കെടുത്തത്: ആർ.എസ്.എസിനോട് പ്രിയങ്ക് ഖാർഗെ

കലബുർഗി: സ്വാതന്ത്ര്യ സമരവുമായി ബന്ധപ്പെട്ട് ആർ.എസ്.എസ് ഉന്നയിക്കുന്ന അവകാശ വാദങ്ങളെ ചോദ്യം...