27
September, 2026

A News 365Times Venture

27
Sunday
September, 2026

A News 365Times Venture

ಅ. 4 ರಂದು ಪ್ರೀಮಿಯರ್ ಇವೆಂಟ್  ಲೆಟೇಪ್  L’ETAPE ಸೈಕ್ಲಥಾನ್  ಸ್ಪರ್ಧೆ -ಎಂ.ಎನ್ ಅನುಚೇತ್

Date:

ಮೈಸೂರು ಸೆಪ್ಟಂಬರ್,25,2026 (www.justkannada.in): ಯುವ ಸಮುದಾಯಗಳ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ರಚನಾತ್ಮಕ ಚಟುವಟಿಕೆಗಳಲ್ಲಿ  ತೊಡಗುವಂತೆ  ಪ್ರೇರೇಪಿಸುವ ಸಲುವಾಗಿ ಅ. 4 ರಂದು ಮೈಸೂರಿನಲ್ಲಿ ವಿಶ್ವ ದರ್ಜೆಯ ಇಂಡಿಯನ್ ಪ್ರೀಮಿಯರ್ ಇವೆಂಟ್  ಲೆಟೇಪ್ L’ETAPE ಸೈಕ್ಲಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸೈಕ್ಲಥಾನ್ ಸ್ಪರ್ಧೆ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ ಅವರು ಟೂರ್ ದಿ ಫ್ರಾನ್ಸ್ ಸ್ಪರ್ಧೆಯಿಂದ ಪ್ರೇರೇಪಿತಗೊಂಡು ಸೈಕ್ಲಥಾನ್ ಅನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಸೈಕ್ಲಥಾನ್  ಸ್ಪರ್ಧೆಯಲ್ಲಿ ನಾಲ್ಕು ವಿವಿಧ ವಿಭಾಗಗಳಲ್ಲಿ ಚಟುವಟಿಕೆಗಳು ನಡೆಯಲಿದೆ ಎಂದರು.

100 ಕಿ.ಮೀ ದಾ ರೇಸ್,50 ಕಿ.ಮೀ ದಾ ರೈಡ್, 20 ಕಿ.ಮೀ – ಫ್ಯಾಮಿಲಿ ರೈಡ್ ,1 ಕಿ.ಮೀ – ಮಕ್ಕಳ ಫನ್ ರೇಸ್ ನಂಥಹ 4 ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ ಅವರು ಮಾತನಾಡಿ ದಸರಾ ಸಂದರ್ಭ ಮೈಸೂರಿನಲ್ಲಿ ವಿಶ್ವದರ್ಜೆಯ ಸೈಕ್ಲಥಾನ್ ಸ್ಪರ್ಧೆ ನಡೆಸುತ್ತಿದ್ದು,  ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಸುರಕ್ಷಿತ ಕ್ರಮಗಳನ್ನು ಗಮನಿಸಿ ಅಚ್ಚುಕಟ್ಟಾಗಿ ಸೈಕ್ಲಥಾನ್ ಸ್ಪರ್ಧೆಯನ್ನು ನಡೆಸಿಕೊಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದರು.

ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಮಾತನಾಡಿ ಸಂಚಾರ  ವ್ಯವಸ್ಥೆಗಳಲ್ಲಿ  ಅಡ್ಡಿ ಆಗದಂತೆ ಹಾಗೂ ಆರೋಗ್ಯ ಸುರಕ್ಷತೆಗಳನ್ನು ಗಮನಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆ‌ರ್,ಉಪ ವಿಭಾಗಾಧಿಕಾರಿ ಆಶಪ್ಪ .ಕೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: ‘L’Etape’ premier cyclathon, event, October 4, M.N. Anucheth

Source link

LEAVE A REPLY

Please enter your comment!
Please enter your name here

Share post:

Popular

More like this
Related

ട്രംപ്-ഷി കൂടിക്കാഴ്ച: വ്യാപാര യുദ്ധത്തിന് താത്ക്കാലിക ശമനം; 30 ബില്യണ്‍ ഡോളറിന്റെ താരിഫ് ഇളവിന് ധാരണ

വാഷിങ്ടണ്‍: അമേരിക്കയും ചൈനയും തമ്മിലുള്ള വ്യാപാര സംഘര്‍ഷത്തിന് താത്ക്കാലിക ശമനമെന്ന് റിപ്പോര്‍ട്ട്....

`மகனுடன் சேர்ந்து ஏரி மண் திருட்டு' – திமுக முன்னாள் அமைச்சர் எ.வ.வேலு மீது வழக்குப்பதிவு!

கடந்த 14-12-2025 அன்று, தி.மு.க வடக்கு மண்டல இளைஞரணி நிர்வாகிகள் சந்திப்புக்கான...

Off The Record: ఖైరతాబాద్‌లో పొలిటికల్ తలరాతలు తిరగబడే ముప్పు ముంచుకొస్తుందా..?

Off The Record: ఖైరతాబాద్‌ అసెంబ్లీ నియోజకవర్గానికి ఉప ఎన్నిక ఖాయమైంది....

സി.ജെ.പി നേതാവ് ആശുതോഷ് റങ്ക അസമില്‍ കസ്റ്റഡിയില്‍; മുഖ്യമന്ത്രിയ്ക്ക് ഭയമാണെന്ന് പാര്‍ട്ടി

ഗുവാഹത്തി: കൊക്രോച്ച് ജനതാ പാര്‍ട്ടി കോ-കണ്‍വീനര്‍ ആശുതോഷ് റങ്ക പൊലീസ് കസ്റ്റഡിയില്‍....