12
September, 2026

A News 365Times Venture

12
Saturday
September, 2026

A News 365Times Venture

ಹೊಸಕಡಜೆಟ್ಟಿ ಮಹದೇವಮ್ಮ ಸಾವು ಪ್ರಕರಣ: ಮೃತಳ ಮಗಳಿಗೆ ₹4.12 ಲಕ್ಷ ಪರಿಹಾರ

Date:

ಮೈಸೂರು,ಸೆಪ್ಟಂಬರ್,11,2026 (www.justkannada.in):  ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಮೃತಳ ಮಗಳು ಗೀತಾ ಅವರಿಗೆ ₹4,12,500 ಪರಿಹಾರದ ಚೆಕ್ ವಿತರಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು ಅವರು ಗೀತಾ ಅವರಿಗೆ ಚೆಕ್ ಹಸ್ತಾಂತರಿಸಿದರು.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತ ಮಹದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಗೀತಾ ಅವರಿಗೆ ₹20 ಸಾವಿರ ನೀಡಿ ರಾಜಿ ಮಾಡಿಸಲು ಮಧ್ಯವರ್ತಿಗಳು ಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದ ಬಳಿಕ, ಹುಲ್ಲಹಳ್ಳಿ ಠಾಣೆಯಲ್ಲಿ ಆರೋಪಿ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಯಮಾನುಸಾರ ಒಟ್ಟು ₹8 ಲಕ್ಷ ಪರಿಹಾರ ನೀಡಬೇಕಿದ್ದು, ಈಗ ₹4.12 ಲಕ್ಷ ವಿತರಿಸಲಾಗಿದೆ. ಉಳಿದ ಮೊತ್ತವನ್ನು ಕೆಲ ದಿನಗಳಲ್ಲಿ ನೀಡುವುದಾಗಿ ಇಲಾಖೆ ಭರವಸೆ ನೀಡಿದೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

വന്ദേമാതരം വിവാദം: കേരളത്തില്‍ ആരെങ്കിലും ജയിലില്‍ പോയോ? ഉമര്‍ അബ്ദുല്ലക്കെതിരെ കോണ്‍ഗ്രസ്

ശ്രീനഗര്‍: വന്ദേമാതരം ആലാപനവുമായി ബന്ധപ്പെട്ട വിവാദത്തില്‍ ജമ്മു കാശ്മീര്‍ മുഖ്യമന്ത്രി ഉമര്‍...

மேற்கு வங்கம் அசைவ உணவு சர்ச்சை: கோயிலில் மீன் வறுவல் சாப்பிட்ட முதல்வர்; என்ன சொல்கிறது பாஜக?

நாட்டின் பிற பகுதிகளில், கோவிலில் அசைவ உணவு உண்பது அனுமதிக்கப்படாத ஒன்றாக...

Modi-Putin: మోడీతో పుతిన్ భేటీ.. ద్వైపాక్షిక సంబంధాలపై చర్చ

బ్రిక్స్ శిఖరాగ్ర సమావేశాల్లో భాగంగా ఢిల్లీలోని భారత్ మండపంలో ప్రధాని మోడీ-రష్యా...

മോദിയുടെ സ്വയം പുകഴ്ത്തല്‍ വേണ്ട; റഷ്യയുമായുള്ള ബന്ധത്തിന് നീണ്ട ചരിത്രമുണ്ട്: കോണ്‍ഗ്രസ്

ന്യൂദല്‍ഹി: പ്രധാനമന്ത്രി നരേന്ദ്ര മോദിയുടെ സ്വയം പ്രചാരണം എന്തുതന്നെയായാലും ഇന്ത്യയും റഷ്യയും...