28
August, 2026

A News 365Times Venture

28
Friday
August, 2026

A News 365Times Venture

ಕಾಮಗಾರಿ ಅಪೂರ್ಣ, ಬಳಕೆಗೆ ಬಾರದ ಸ್ಥಿತಿ:  “ಸೈನಿಕ” ಉದ್ಯಾನವನಕ್ಕೆ ಗ್ರಹಣವೇ?

Date:

ಮೈಸೂರು,ಆಗಸ್ಟ್,27,2026 (www.justkannada.in): ನಗರದ ದಟ್ಟಗಳ್ಳಿ 3ನೇ ಹಂತದಲ್ಲಿ, ಮಹಾಲಕ್ಷ್ಮಿ ದೇವಸ್ಥಾನದ ಸಮೀಪದಲ್ಲಿರುವ “ಸೈನಿಕ” ಉದ್ಯಾನವನದಲ್ಲಿ ತಿಂಗಳುಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಮಕ್ಕಳಿಗಾಗಿ ಆಟದ ಸಾಮಗ್ರಿಗಳು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗಾಗಿ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಅರ್ಧಂಬರ್ದ ಕಾಮಗಾರಿ, ಅಪೂರ್ಣ ವ್ಯವಸ್ಥೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಇಡೀ ಉದ್ಯಾನವನವೇ ಬಳಕೆಗೆ ಅಸಾಧ್ಯವಾಗಿರುವ ಆರೋಪ ಕೇಳಿಬರುತ್ತಿದೆ.

ಮಕ್ಕಳ ಆಟದ ಸಾಮಗ್ರಿಗಳನ್ನು ಅಳವಡಿಸಿ, ಅವುಗಳನ್ನು ಬಳಸಲು ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಯಸ್ಕರು ಮತ್ತು ಹಿರಿಯರ ಆರೋಗ್ಯದ ದೃಷ್ಟಿಯಿಂದ ಅಳವಡಿಸಿರುವ ಫಿಟ್ನೆಸ್ ಉಪಕರಣಗಳೂ ಇದ್ದೂ ಇಲ್ಲದಂತಾಗಿವೆ.

ಉದ್ಯಾನವನ ನಿರ್ಮಾಣಕ್ಕೆ ಹಣ ಖರ್ಚಾಗಿದೆ… ಉಪಕರಣಗಳು ಬಂದಿವೆ… ಆದರೆ ಸಾರ್ವಜನಿಕರಿಗೆ ಮಾತ್ರ ಬಳಕೆಯ ಅವಕಾಶ ಇಲ್ಲ! ಇದಕ್ಕಿಂತ ದೊಡ್ಡ ನಿರ್ಲಕ್ಷ್ಯವಲ್ಲದೇ ಮತ್ತೇನು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇದರ ನಡುವೆ ಮಳೆಗಾಲವೂ ಮುಂದುವರಿದಿದ್ದು, ಹೊರಾಂಗಣದಲ್ಲಿ ಅಳವಡಿಸಿರುವ ಕಬ್ಬಿಣದ ಉಪಕರಣಗಳಿಗೆ ತುಕ್ಕು ಹಿಡಿಯುವ ಅಪಾಯ ಎದುರಾಗಿದೆ. ಕಾಮಗಾರಿ ಹೀಗೆಯೇ ವಿಳಂಬವಾದರೆ, ಹೊಸದಾಗಿ ಅಳವಡಿಸಿರುವ ಉಪಕರಣಗಳೇ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಉದ್ಯಾನವನವೊಂದು ಪೂರ್ಣಗೊಳ್ಳುವ ಮುನ್ನವೇ ಹಾಳಾಗುವಂತಾಗಬಾರದು. ಹೀಗಾಗಿ ಕಾಮಗಾರಿ ಯಾವ ಹಂತದಲ್ಲಿದೆ? ತಿಂಗಳುಗಳು ಕಳೆದರೂ ಏಕೆ ಪೂರ್ಣಗೊಂಡಿಲ್ಲ? ಉದ್ಯಾನವನವನ್ನು ಸಾರ್ವಜನಿಕರ ಬಳಕೆಗೆ ಯಾವಾಗ ಮುಕ್ತಗೊಳಿಸಲಾಗುತ್ತದೆ? ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಿದೆ.

ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಳವಡಿಸಿರುವ ಉಪಕರಣಗಳ ಗುಣಮಟ್ಟವನ್ನೂ ಪರಿಶೀಲಿಸಿ, ಮಳೆಯಿಂದ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಆಟದ ಮೈದಾನ ಬೇಕು… ಹಿರಿಯರಿಗೆ ವ್ಯಾಯಾಮದ ಸ್ಥಳ ಬೇಕು… ಜನರಿಗೆ ಸುಂದರ ಉದ್ಯಾನವನ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Key words: Incomplete, unusable, condition, Mysore, Soldier park

The post ಕಾಮಗಾರಿ ಅಪೂರ್ಣ, ಬಳಕೆಗೆ ಬಾರದ ಸ್ಥಿತಿ:  “ಸೈನಿಕ” ಉದ್ಯಾನವನಕ್ಕೆ ಗ್ರಹಣವೇ? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രതിപക്ഷ ഉപനേതാവ് തര്‍ക്കം തുടരുന്നു; പ്രസ്താവനകളില്‍ നേതാക്കള്‍ മിതത്വം പാലിക്കണമെന്ന് ടി.പി രാമകൃഷ്ണന്‍

തിരുവനന്തപുരം: പ്രതിപക്ഷ ഉപനേതാവ് തര്‍ക്കത്തിലെ പ്രസ്താവനകളില്‍ നേതാക്കള്‍ മിതത്വം പാലിക്കണമെന്ന് എല്‍.ഡി.എഫ്...

கருப்புச் சட்டையில் திமுக கவுன்சிலர்கள்; முதல்வர் விஜய்க்கு கடிதம் எழுதிய மேயர் பிரியா; விவரம் என்ன?

சென்னை மாநகராட்சியின் மாதாந்திரக் கூட்டம் இன்று ரிப்பன் மாளிகையில் நடந்து வருகிறது....

Off The Record: కొండా సురేఖ, చిన్నారెడ్డిపై యాక్షన్‌కు బ్రేక్! ఢిల్లీ నుంచి వచ్చిన సందేశమేంటి?

Off The Record: పాజిటివో, నెగెటివో… పార్టీలో కొండా సురేఖ ఎపిసోడ్‌కి...

ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ

ಮೈಸೂರು, ಆಗಸ್ಟ್,27,2026 (www.justkannada.in): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ...