21
August, 2026

A News 365Times Venture

21
Friday
August, 2026

A News 365Times Venture

KMF ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣ: ನಾಲ್ವರು ಹಿರಿಯ ಅಧಿಕಾರಿಗಳು ಸಸ್ಪೆಂಡ್

Date:

ಬೆಂಗಳೂರು,ಆಗಸ್ಟ್,20,2026 (www.justkannada.in): ಕೆಎಂಎಫ್ ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಎಸ್ ನಾಗೇಶ್ ಹಿರಿಯ ಉಪನಿರ್ದೇಶಕರು(ಪಶು ಆಹಾರ), ಜೆ.ಜಯಕುಮಾರ್ ನಿರ್ದೇಶಕರು (ಪಶು ಆಹಾರ),  ಸೋಮನಾಥ್ ಉಪನಿರ್ದೇಶಕರು(ಪಶು ಆಹಾರ),  ಸಿ ಮಲ್ಲಿಕಾರ್ಜುನ ವ್ಯವಸ್ಥಾಪಕರು(ಪಶು ಆಹಾರ) ಅಮಾನತಾದವರು. ಅಮಾನತು ಮಾಡಿ ಕೆಎಂಎಫ್ ಎಂಡಿ ಡಾ.ಎಸ್ ಟಿ ಸುರೇಶ್  ಅವರು ಆದೇಶ ಹೊರಡಿಸಿದ್ದಾರೆ.

ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಆಹಾರವನ್ನು ರೈತರಿಗೆ ಪೂರೈಕೆ ಮಾಡಲಾಗಿದ್ದು, ಅದನ್ನು ಸೇವಿಸಿದ ಬಳಿಕ ಹಲವು ಪಶುಗಳು ಅನಾರೋಗ್ಯಕ್ಕೆ ಒಳಗಾಗಿವೆ ಎಂದು ರೈತರು ಆರೋಪಿಸಿದ್ದಾರೆ.

ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿ ಮತ್ತು ಗುಣಮಟ್ಟದ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವ ಅನುಮಾನವನ್ನು ರೈತರು ವ್ಯಕ್ತಪಡಿಸಿದ್ದಾರೆ. ಸುಮಾರು 86 ಸಾವಿರ ಮೆಟ್ರಿಕ್ ಟನ್ ಪಶು ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಆಹಾರವನ್ನು ರೈತರು ಸ್ವೀಕರಿಸದೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಪಶು ಆಹಾರ ತಯಾರಿಕೆಗೆ ಬಳಸುವ ಮೊಲಾಸಸ್‌ (ಕಾಕಂಬಿ) ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಆರೋಪವಿದೆ. ಗುಣಮಟ್ಟ ಕಡಿಮೆ ಇರುವ TRS ಹೊಂದಿದ್ದ ಕಾಕಂಬಿಯನ್ನು ಖರೀದಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು ನಿನ್ನೆ ಈ ಕುರಿತು ಮಾಧ್ಯಮವೊಂದರಲ್ಲಿ ವರದಿಯಾಗಿತ್ತು.

Key words: KMF, animal, feed, adulteration case,  Four, senior officials, suspended

The post KMF ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣ: ನಾಲ್ವರು ಹಿರಿಯ ಅಧಿಕಾರಿಗಳು ಸಸ್ಪೆಂಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ:  ಕಪ್ಪು ಟೀ ಶರ್ಟ್ ಧರಿಸಿ BJP-JDS ಶಾಸಕರ ಪ್ರತಿಭಟನೆ

ಬೆಂಗಳೂರು,ಆಗಸ್ಟ್,21,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು...

അമേരിക്ക സന്ദര്‍ശിക്കാന്‍ അനുമതി നിഷേധിച്ച് കേന്ദ്ര സര്‍ക്കാര്‍; രേവന്ത് റെഡ്ഡി തിരികെ മടങ്ങും

ഹൈദരാബാദ്: അമേരിക്കന്‍ സന്ദര്‍ശനത്തിന് കേന്ദ്രസര്‍ക്കാരിന്റെ അനുമതി ലഭിക്കാത്തതിനെ തുടര്‍ന്ന് തെലങ്കാന മുഖ്യമന്ത്രി...

தொகுதி மறுவரையறை: “ராகுல் காந்தி குறிப்பிட்ட அந்த 'எட்டப்பர்' விஜயா?" – திமுக எம்.பி தயாநிதிமாறன்

தென் மண்டல நிர்வாகக்குழு கூட்டம் மத்திய உள்துறை அமைச்சர் அமித் ஷாவின்...

రూ.1,999కే CMF Buds Neo.. 35dB ANC, 52 గంటల బ్యాటరీ లైఫ్‌తో అదిరిపోయే ఇయర్‌బడ్స్..!

CMF Buds Neo: నథింగ్ (Nothing) సబ్‌-బ్రాండ్ సీఎంఎఫ్ (CMF) సంస్థ...