1
October, 2026

A News 365Times Venture

1
Thursday
October, 2026

A News 365Times Venture

Justkannada Impact: ಕಬಿನಿ ನೀರು ಮಾಲಿನ್ಯ: ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತನಿಖಾ ಸಮಿತಿ ರಚನೆಗೆ ಆದೇಶ

Date:

ಮೈಸೂರು, ಆಗಸ್ಟ್,6,2026 (www.justkannada.in): ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ರೆಸಾರ್ಟ್‌ಗಳು, ಹೋಂಸ್ಟೇಗಳು, ಹೋಟೆಲ್‌ ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಂದ ಅಕ್ರಮವಾಗಿ ಘನ ತ್ಯಾಜ್ಯ ಮತ್ತು ಸಂಸ್ಕರಿಸದ ದ್ರವ ತ್ಯಾಜ್ಯ ವಿಲೇವಾರಿಯಾಗುತ್ತಿರುವ ಕುರಿತು Justkannada ಪ್ರಕಟಿಸಿದ್ದ ವಿಶೇಷ ವರದಿ ಪರಿಣಾಮವಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು ನಾಲ್ಕು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು, ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣೆ, ಪರಿಸರ ನಿಯಮಗಳ ಪಾಲನೆ ಹಾಗೂ ನೀರು ಮಾಲಿನ್ಯಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಅಧ್ಯಕ್ಷತೆಯ ಸಮಿತಿಯಲ್ಲಿ ಕಬಿನಿ ಯೋಜನೆಯ ಕಾರ್ಯಪಾಲಕ ಅಭಿಯಂತರ ರಂಗಯ್ಯ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸುನೀಲ್ ಸದಸ್ಯರಾಗಿದ್ದಾರೆ.

ಸಮಿತಿಯು ಅಗತ್ಯವಿದ್ದಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು. ಪರಿಸರ ಕಾನೂನು ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಕಬಿನಿ ನೀರಿನ ಕಲುಷಿತದ ಬಗ್ಗೆ Justkannada ನಿರಂತರವಾಗಿ ವರದಿ ಪ್ರಕಟಿಸಿ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ಜಿಲ್ಲಾಡಳಿತ ತನಿಖಾ ಸಮಿತಿ ರಚಿಸಿರುವುದು ಗಮನಾರ್ಹವಾಗಿದೆ.

Key words: Kabini water, pollution, Mysore DC, formation, inquiry committee

The post Justkannada Impact: ಕಬಿನಿ ನೀರು ಮಾಲಿನ್ಯ: ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತನಿಖಾ ಸಮಿತಿ ರಚನೆಗೆ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರದ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಸಚಿವ ಎಂ.ಬಿ ಪಾಟೀಲ್ ಆಗ್ರಹ

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ತಾವು ಪ್ರತಿನಿಧಿಸುತ್ತಿರುವ...

ബുര്‍ഖ ധരിച്ച് ലേബര്‍ റൂമിലെത്തിയ വിദ്യാര്‍ത്ഥിനികള്‍ക്ക് വിലക്ക്; ജമ്മു കാശ്മീരില്‍ മെഡിക്കല്‍ വിദ്യാര്‍ത്ഥികളുടെ പ്രതിഷേധം

ശ്രീനഗര്‍: ജമ്മു കാശ്മീരിലെ ദോഡ സര്‍ക്കാര്‍ മെഡിക്കല്‍ കോളേജില്‍ ബുര്‍ഖ ധരിച്ചെത്തിയ...

"சனி, ஞாயிறு விடு​முறை எடுக்கும் ஒரே முதல்வர், ஸ்வீட் ப்ரோ விஜய் தான்!"- திமுக எம்.பி கனிமொழி

மது​ராந்​தகம் திமுக வேட்​பாளர் பரந்​தாமனுக்கு ஆதர​வாக எம்.பி கனிமொழி நேற்று (செப்.30)...

Rain Alert: ఉరుములు, మెరుపులతో మూడు రోజులు వర్షాలు!

Three Days of Rain in AP: బంగాళాఖాతంలో ఏర్పడిన అల్పపీడనం...