1
October, 2026

A News 365Times Venture

1
Thursday
October, 2026

A News 365Times Venture

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರದ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಸಚಿವ ಎಂ.ಬಿ ಪಾಟೀಲ್ ಆಗ್ರಹ

Date:

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ತಾವು ಪ್ರತಿನಿಧಿಸುತ್ತಿರುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳ 5,600 ಎಕರೆ ಮುಳುಗಡೆ ಆಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 1,000 ಎಕರೆಗಾದರೂ ಪರಿಹಾರ‌ ಕೊಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಜಲಸಂಪನ್ಮೂಲ ಸಚಿವ ಎನ್.ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

, ಅಣೆಕಟ್ಟೆಯನ್ನು ಈಗಿರುವ 519.60 ಮೀಟರ್ ನಿಂದ 524.256 ಮೀಟರ್ ಗೆ ಎತ್ತರಿಸಲಾಗುತ್ತಿದೆ. ಇದರಿಂದಾಗಿ 184 ಗ್ರಾಮಗಳ 75,563 ಎಕರೆ ಮುಳುಗಡೆ ಆಗುತ್ತಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳಿದ್ದು, ಬಬಲೇಶ್ವರ ವಿಧಾನಸಭೆ ಕ್ಷೇತ್ರದ 15 ಹಳ್ಳಿಗಳಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ 5,600 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸದ್ಯ ಪ್ರಸ್ತಾಪಿಸಿರುವ ಅಂದಾಜು 3,000 ಕೋಟಿ ರೂಪಾಯಿ ಪಾವತಿ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಜಮೀನುಗಳಿಗೆ ಕನಿಷ್ಠ 500 ಕೋಟಿ ಮೀಸಲಿಡಬೇಕು ಎಂದು ಸಚಿವ ಎಂ.ಬಿ ಪಾಟೀಲ್‌ ಅವರು ಪತ್ರದಲ್ಲಿ ಕೋರಿದ್ದಾರೆ.

ಇದರಲ್ಲಿ ಈಗಾಗಲೇ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಚಿಕ್ಕಗಲಗಲಿ, ಶಿರಬೂರು, ಹೊಸೂರು ಮತ್ತು ಕಣಬೂರು ಗ್ರಾಮಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ, ಮೊದಲ ಸುತ್ತಿನಲ್ಲಿ 500 ಕೋಟಿ ರೂ.ಗಳಷ್ಟು ಪರಿಹಾರ ಕೊಡಬೇಕು.‌ ಉಳಿದ 10 ಗ್ರಾಮಗಳಿಗೆ ಕೂಡ ಅಧಿಸೂಚನೆ ಹೊರಡಿಸಿ, ಪರಿಹಾರ ವಿತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು‌ ಸಚಿವ ಎಂ.ಬಿ ಪಾಟೀಲ್ ಮನವಿ ಮಾಡಿದ್ದಾರೆ.

Raising, Almatti Dam, height, Minister ,M.B. Patil, Letter, villages,  Emergency Relief

Source link

LEAVE A REPLY

Please enter your comment!
Please enter your name here

Share post:

Popular

More like this
Related

ബുര്‍ഖ ധരിച്ച് ലേബര്‍ റൂമിലെത്തിയ വിദ്യാര്‍ത്ഥിനികള്‍ക്ക് വിലക്ക്; ജമ്മു കാശ്മീരില്‍ മെഡിക്കല്‍ വിദ്യാര്‍ത്ഥികളുടെ പ്രതിഷേധം

ശ്രീനഗര്‍: ജമ്മു കാശ്മീരിലെ ദോഡ സര്‍ക്കാര്‍ മെഡിക്കല്‍ കോളേജില്‍ ബുര്‍ഖ ധരിച്ചെത്തിയ...

"சனி, ஞாயிறு விடு​முறை எடுக்கும் ஒரே முதல்வர், ஸ்வீட் ப்ரோ விஜய் தான்!"- திமுக எம்.பி கனிமொழி

மது​ராந்​தகம் திமுக வேட்​பாளர் பரந்​தாமனுக்கு ஆதர​வாக எம்.பி கனிமொழி நேற்று (செப்.30)...

Rain Alert: ఉరుములు, మెరుపులతో మూడు రోజులు వర్షాలు!

Three Days of Rain in AP: బంగాళాఖాతంలో ఏర్పడిన అల్పపీడనం...

BK ಹರಿಪ್ರಸಾದ್ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ-ಬಿವೈ ವಿಜಯೇಂದ್ರ ತಿರುಗೇಟು

ಚಿತ್ರದುರ್ಗ,ಸೆಪ್ಟಂಬರ್,30,2026 (www.justkannada.in):  ಬಿವೈ ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಹಣ...