1
October, 2026

A News 365Times Venture

1
Thursday
October, 2026

A News 365Times Venture

ವಿವೇಕ ಸ್ಮಾರಕ ಉದ್ಘಾಟಿಸಿದ್ದು ನನ್ನ ಸೌಭಾಗ್ಯ: ದೇಶದ ಯುವಕರ ಸಾಮರ್ಥ್ಯದಿಂದ ಆರ್ಥಿಕತೆ ಬೆಳೆಯುತ್ತಿದೆ – ಪ್ರಧಾನಿ ಮೋದಿ

Date:

ಮೈಸೂರು,ಆ,1,2026 (www.justkannada.in): ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ದೇಶದ ಯುವಕರ ಸಾಮರ್ಥ್ಯದಿಂದ ಆರ್ಥಿಕತೆ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರುನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವೇಕ ಸ್ಮಾರಕ ಉದ್ಘಾಟಿಸಿದರು. ನಂತರ ವಿವೇಕ ಸ್ಮಾರಕದ ಬಳಿ ಧ್ಯಾನ ಮಾಡಿ, ಮ್ಯೂಸಿಯಂ ವೀಕ್ಷಣೆ, ವಿವೇಕನಂದರ ಬೋಧನೆಗಳನ್ನ  ಓದಿದರು. ಇದಾದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ  ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿವೇಕಾನಂದರ ಮೂರ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಕನ್ನಡದಲ್ಲೇ ಮಾತು ಆರಂಭಿಸಿ ಮೊದಲಿಗೆ ಚಾಮುಂಡೇಶ್ವರಿ ತಾಯಿಗೆ ನಮಸ್ಕರಿಸುತ್ತೇನೆ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ವಿವೇಕ ಸ್ಮಾರಕ ಉದ್ಘಾಟಿಸಿದ್ದು ನನ್ನ ಸೌಭಾಗ್ಯ.  ಮೈಸೂರು ತನ್ನ ಪರಂಪರೆಯನ್ನ ಕಾಯ್ದುಕೊಡು ಬಂದಿದೆ. ಮೈಸೂರು ಭಾರತದದ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಎರಡು ದಿನದ ಹಿಂದೆ ಗುರು ಪೂರ್ಣಿಮೆ ಆಚರಿಸಿದ್ದೇವೆ.    ಮೈಸೂರಿನ ರಾಮ‍ಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ . ಮೈಸೂರಿನ ರಾಮಕೃಷ್ಣ ಆಶ್ರಮದ ಸೇವೆ ಆಪಾರ. ವಿವೇಕಾನಂದರ ಜೀವನದಲ್ಲಿ ಮೈಸೂರಿನ ಪಾಲು ತುಂಬಾ ಇದೆ  ಎಂದು ಬಣ್ಣಿಸಿದರು.

ಸ್ವಾಮಿವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ.  ಭಾರತದ ಅರ್ಥವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಭಾರತೀಯ ಯುವಕರು ತಮ್ಮ ತಾಕತ್ತು ತೋರಿಸುತ್ತಿದ್ದಾರೆ.  ಇದೆಲ್ಲಾ ಹೊಸ ಆರಂಭದ ಸಂಕೇತವಾಗಿದೆ,  ಮೊಬೈಲ್ ಉದ್ಥಾದನೆ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲಾಗುತ್ತಿದೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು ಯವಕರಿಂದ ದೇಶದ  ಅಭಿವೃದ್ದಿಯಾಗುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ದೇಶದ ಆರ್ಥಿಕತೆ ಬೆಳೆಯುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಯುವಕರು ಇತಿಹಾಸ ಸೃಷ್ಠಿಸುತ್ತಿದ್ದಾರೆ. 4 ಸಾವಿರಕ್ಕೂ ಹೆಚ್ಚು ಐಟಿಐಗಳನ್ನ ಸ್ಥಾಪಿಸಲಾಗಿದೆ.  ಕಳೆದ 12 ವರ್ಷದಲ್ಲಿ 650 ವಿವಿಗಳನ್ನ ಸ್ಥಾಪಿಸಲಾಗಿದೆ.  9 ಐಐಎಂ, 7 ಐಐಟಿ ಸ್ಥಾಪಿಸಲಾಗಿದೆ ಎಂದರು ಪ್ರಧಾನಿ ಮೋದಿ ನುಡಿದರು.

Key words: Mysore, Viveka Memorial, youth,  PM Modi

The post ವಿವೇಕ ಸ್ಮಾರಕ ಉದ್ಘಾಟಿಸಿದ್ದು ನನ್ನ ಸೌಭಾಗ್ಯ: ದೇಶದ ಯುವಕರ ಸಾಮರ್ಥ್ಯದಿಂದ ಆರ್ಥಿಕತೆ ಬೆಳೆಯುತ್ತಿದೆ – ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಡಿಸ್ಟ್ರಿಕ್ ಜಡ್ಜ್‌ ಕಾರಿಗೆ ಆಟೋ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಮಂಗಳೂರು,ಅಕ್ಟೋಬರ್‌,1,2026 (www.justkannada.in): ದಕ್ಷಿಣ ಕನ್ನಡ ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ...

പൊലീസ് രാജിനെയും സ്പോൺസർഷിപ്പ് രാജിനെയും ചെറുക്കാൻ ജനകീയ പ്രതിരോധം ഉയരും: എം.വി. ഗോവിന്ദൻ

തിരുവനന്തപുരം: തലസ്ഥാനത്ത് യൂണിവേഴ്സിറ്റി കോളേജിന് മുന്നിൽ വിദ്യാർത്ഥികൾക്ക് നേരെ അരങ്ങേറിയത് പൊലീസിനെ...

'முதல்வர் விஜய்யின் வீட்டுக்கு எதிரே நடைபாதையில் தவெகவினரின் அபாய பேனர்!' – கவனிக்குமா தலைமை?

முதல்வர் விஜய்யின் பட்டினப்பாக்கம் வீட்டுக்கு எதிரே மக்கள் நடப்பதற்காக அமைக்கப்பட்டிருக்கும் நடைமேடையில்...

Ind Vs WI: భారీ లక్ష్య ఛేదనలో చరిత్ర సృష్టించిన గిల్ సేన.. విండీస్‌పై టీమిండియా ఘన విజయం.. సిరీస్ కైవసం..

గౌహతిలోని బర్సపరా క్రికెట్ స్టేడియంలో వెస్టిండీస్‌‌తో జరిగిన రెండో వన్డే మ్యాచ్‌లో...