29
July, 2026

A News 365Times Venture

29
Wednesday
July, 2026

A News 365Times Venture

ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ: ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತೆ- ಸಚಿವ ಎಂ.ಬಿ ಪಾಟೀಲ್

Date:

ಬೆಂಗಳೂರು,ಜುಲೈ,29,2026 (www.justkannada.in):  ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯೂಸೆಕ್ಸ್  ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ನಮ್ಮಲ್ಲಿ ನೀರು ಇದ್ದರೇ ತಾನೇ ಬಿಡೋಕೆ ಆಗೋದು.  ವಾಟರ್ ಕಮಿಷನ್ ಗಳೂ ನದಿಪಾತ್ರದ ಕೆಳಗಿನ ಪರವಾಗಿ ಇರುತ್ತವೆ. ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತದೆ.  ನಮ್ಮ ಲಭ್ಯತೆ ಅಗತ್ಯತೆ ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸಿಎಂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಲಾಭವಿದೆ. ಆದರೆ ಕೇವಲ ರಾಜಕೀಯ ಕಾರಣಕ್ಕೆ ಮಾತ್ರ ವಿರೋಧಿಸಲಾಗುತ್ತೆ. ಸಿಎಂ ಡಿಕೆ ಶಿವಕುಮಾರ್ ಕೂಡ ಜಲಸಂಪನ್ಮೂಲ ಸಚಿವರಾಗಿದ್ದವರು ಅವರು ತಮಿಳನಾಡು ಸಿಎಂ ವಿಜಯ್ ಜೊತೆ ಮಾತನಾಡುತ್ತಾರೆ ಎಂದರು.

Key words: Order,  release, water, Tamil Nadu, Minister, M.B. Patil

The post ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ: ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತೆ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ತಮಿಳುನಾಡಿಗೆ ನೀರು ಬಿಟ್ಟರೇ ಬೀದಿಗಿಳಿದು ಹೋರಾಟ- ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಮಂಡ್ಯ,ಜುಲೈ,29,2026 (www.justkannada.in):  ರಾಜ್ಯದಲ್ಲಿ ಕುಡಿಯುವ ನೀರಿಗೂ ಕೊರತೆ ಇದ್ದರೂ ತಮಿಳುನಾಡಿಗೆ...

പെണ്‍കുട്ടികള്‍ എന്ന് ഞാന്‍ പറഞ്ഞിട്ടില്ല: മക്കള്‍ക്ക് പകര്‍ന്ന് കൊടുക്കണം എന്നാണ് പറഞ്ഞത്, ഇതില്‍ എന്ത് സ്ത്രീ വിരുദ്ധത: വിശദീകരണവുമായി മുഖ്യമന്ത്രി

തിരുവനന്തപുരം: പാചകവുമായി ബന്ധപ്പെട്ട് താന്‍ സ്ത്രീവിരുദ്ധമായ പരമാര്‍ശം നടത്തിയിട്ടില്ലെന്ന് മുഖ്യമന്ത്രി വി.ഡി...

அமெரிக்க தளத்தில் ஈரான் தாக்குதல், ட்ரம்ப்-நெதன்யாகு, ஜெலன்ஸ்கி மீட், ஈராக் தாக்குதல் ஏன்?|#AllInOne

ஈரான் போர், அதிபர்கள் சந்திப்பு உள்ளிட்ட முக்கிய உலக செய்திகளை இங்கே...

Mega DSC: ‘మెగా డీఎస్సీ కాదు.. దగా డీఎస్సీ’.. రాష్ట్రవ్యాప్తంగా వైసీపీ ఆందోళనలు, లోకేష్ రాజీనామా చేయాలని డిమాండ్!

మెగా డీఎస్సీ నియామకాల్లో అక్రమాలు జరిగాయని ఆరోపిస్తూ రాష్ట్రవ్యాప్తంగా వైసీపీ యువజన,...