30
July, 2026

A News 365Times Venture

30
Thursday
July, 2026

A News 365Times Venture

ಮೇಕೆದಾಟು ಯೋಜನೆ ತಕ್ಷಣ ಆರಂಭಿಸಿ  ಎರಡು ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ

Date:

ಬೆಂಗಳೂರು, ಜುಲೈ, 28,2026 (www.justkannada.in):  ಮೇಕೆದಾಟು ಸಮತೋಲನ ಜಲಾಶಯ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ, ತಕ್ಷಣವೇ ಯೋಜನೆಗೆ ಚಾಲನೆ ನೀಡಿ ತಮ್ಮ ಅಧಿಕಾರಾವಧಿಯೊಳಗೆ ಪೂರ್ಣಗೊಳಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.

2018ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳ ಸಮ್ಮತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಕಾರಣಗಳಿಂದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿವೆ ಎಂದು ಅವರು ಆರೋಪಿಸಿದ್ದಾರೆ.

ತಮಿಳುನಾಡಿನ ರಾಜಕೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಿಜೆಪಿ ಸರ್ಕಾರ ಜಲಶಕ್ತಿ ಸಚಿವಾಲಯದ ಮೂಲಕ ಅನುಮತಿಗಳನ್ನು ಇಷ್ಟು ದಿವಸ ತಡೆ ಹಿಡಿದದ್ದು  ಖಂಡನೀಯ ಎಂದು ತಿಳಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ  ನೆರೆಹೊರೆ ರಾಜ್ಯಗಳ ಸಮ್ಮತಿ ಬೇಕಿಲ್ಲ ಎಂಬ ಸ್ಪಷ್ಟನೆ ನೀಡಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆಯ ಹೆಸರಿನಲ್ಲಿ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದರೂ, ಎರಡು ವರ್ಷಗಳ ಆಡಳಿತದಲ್ಲಿ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ. ಇದೇ ವೇಳೆ, ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಕೇಂದ್ರದ ಮುಂದೆ ಧ್ವನಿ ಎತ್ತಲು ವಿಫಲವಾಗಿರುವ ಕರ್ನಾಟಕದ ಬಿಜೆಪಿ ಸಂಸದರೂ ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೋಟ್ಯಾಂತರ ಜನರ ಕುಡಿಯುವ ನೀರಿನ ಭವಿಷ್ಯವನ್ನು ರಾಜಕೀಯದ ವಿಷಯವನ್ನಾಗಿಸದೆ, ಮೇಕೆದಾಟು ಯೋಜನೆಯನ್ನು ಜನರ ಬದುಕಿನ ಹಕ್ಕಿನ ಯೋಜನೆಯಾಗಿ ಪರಿಗಣಿಸಿ  ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಡಾ. ಮುಖ್ಯಮಂತ್ರಿ ಚಂದ್ರು ಅವರು ಒತ್ತಾಯಿಸಿದ್ದಾರೆ.

Key words: Mekedatu project, Mukyamantri Chandru, CM DK Shivakumar

 

The post ಮೇಕೆದಾಟು ಯೋಜನೆ ತಕ್ಷಣ ಆರಂಭಿಸಿ  ಎರಡು ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സൗദി-യു.എസ് സൈനിക നീക്കത്തിന് പിന്നാലെ ഇറാനെ ആക്രമിച്ച് യു.എസ്; രണ്ട് കുട്ടികള്‍ക്ക് പരിക്ക്

ടെഹ്‌റാന്‍: ഇറാനില്‍ വീണ്ടും യു.എസ് ആക്രമണം. ഇന്ത്യന്‍ സമയം ഇന്ന് പുലര്‍ച്ചെയോടെയാണ് ആക്രമണമുണ്ടായത്....

ட்ரம்ப் சொன்னது போல், ஈரான் மீது 'சக்திவாய்ந்த தாக்குதல்' நடத்தும் அமெரிக்கா; என்ன நடக்கிறது?

ஜூலை 24-ம் தேதிக்குப் பிறகு, ஈரானும், அமெரிக்காவும் எந்த அறிவிப்புமின்றி தங்களுக்குள்...

EPFO: పీఎఫ్ చందాదారులకు భారీ ఊరట.. అప్లై చేయకుండానే నేరుగా బ్యాంక్ ఖాతాల్లోకి డబ్బులు!

EPFO: బ్యాంకులు, ఎల్ఐసీ (LIC), ఈపీఎఫ్‌ఓ (EPFO)లలో వేల కోట్ల రూపాయల...

ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯ: ಏಕೆ ಇಂತಹ ಕಪಟ ನಾಟಕ-ಬಿವೈ ವಿಜಯೇಂದ್ರ ಕಿಡಿ

ಶಿವಮೊಗ್ಗ,ಜುಲೈ,29,2026 (www.justkannada.in): ತಮಿಳುನಾಡು ಸಿಎಂ ಖುಷಿ ಪಡಿಸಲು ಕದ್ದುಮುಚ್ಚಿ ರಾತ್ರೋರಾತ್ರಿ...