30
July, 2026

A News 365Times Venture

30
Thursday
July, 2026

A News 365Times Venture

ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯ: ಏಕೆ ಇಂತಹ ಕಪಟ ನಾಟಕ-ಬಿವೈ ವಿಜಯೇಂದ್ರ ಕಿಡಿ

Date:

ಶಿವಮೊಗ್ಗ,ಜುಲೈ,29,2026 (www.justkannada.in): ತಮಿಳುನಾಡು ಸಿಎಂ ಖುಷಿ ಪಡಿಸಲು ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ಈ ಮೂಲಕ  ರೈತರಿಗೆ ಅನ್ಯಾಯ ಮಾಡಿದರು. ಸಿಎಂ ಡಿಕೆ ಶಿವಕುಮಾರ್ ಅವರೇ ಏಕೆ ಇಂತಹ ಕಪಟ ನಾಟಕ ಮಾಡುತ್ತೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.

ಇಂದು ಮಾತನಾಡಿದ ಬಿವೈ ವಿಜಯೇಂದ್ರ, ನಿನ್ನೆ ಆದೇಶ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಸಿಎಂ ಕೆಲವು ದಿನದ ಹಿಂದೆ ಆ ಭಾಗದ ರೈತರಿಗೆ ಕರೆ ಕೊಟ್ಟಿದ್ದರು. ಬರ ಪರಿಸ್ಥಿತಿ ಇದೆ. ಯಾರೂ ಬೆಳೆ ಬೆಳೆಯಬೇಡಿ ಎಂದಿದ್ದರು.  ಸಿಎಂ ಆಗಿ ರೈತರಿಗೆ ಧೈರ್ಯ ತುಂಬಬೇಕಿತ್ತು.  ಆದರೆ ಸಿಎಂ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು.  ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯಮಾಡಿದರು. ಸಿಎಂ ಡಿಕೆ ಶಿವಕುಮಾರ್ ಅವರೇ ಏಕೆ ಇಂತಹ ಕಪಟ ನಾಟಕ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.

ಕೆಆರ್ ಎಸ್ ನಲ್ಲಿ  17.39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ .  ಉಳಿದ 12 ರಿಂದ 13 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟರೇ ರೈತರ ಗತಿಯೇನು?  ಸಿಎಂ ಡಿಕೆ ಶಿವಕುಮಾರ್ ಏಕೆ ಕಾವೇರಿ ಕೊಳ್ಳದ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದೀರಿ. ಈ ಚೆಲ್ಲಾಟ ಆಡೋದು ಬಿಟ್ಟು ಮರುಪರಿಶೀಲನಾ ಅರ್ಜಿ ಸಲ್ಲಿಸಲಿ. ಸಿಡಬ್ಲ್ಯು ಆರ್  ಸಿ ಮುಂದೆ ಸರಿಯಾದ ರೀತಿ ವಾದ ಮಂಡಿಸಬೇಕು ಎಂದು ಬಿವೈ ವಿಜಯೇಂದ್ರ ಸಲಹೆ ನೀಡಿದರು.

Key words: Farmers, Tamil Nadu, Water, CM, DK Shivakumar, BY Vijayendra

The post ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯ: ಏಕೆ ಇಂತಹ ಕಪಟ ನಾಟಕ-ಬಿವೈ ವಿಜಯೇಂದ್ರ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സൗദി-യു.എസ് സൈനിക നീക്കത്തിന് പിന്നാലെ ഇറാനെ ആക്രമിച്ച് യു.എസ്; രണ്ട് കുട്ടികള്‍ക്ക് പരിക്ക്

ടെഹ്‌റാന്‍: ഇറാനില്‍ വീണ്ടും യു.എസ് ആക്രമണം. ഇന്ത്യന്‍ സമയം ഇന്ന് പുലര്‍ച്ചെയോടെയാണ് ആക്രമണമുണ്ടായത്....

ட்ரம்ப் சொன்னது போல், ஈரான் மீது 'சக்திவாய்ந்த தாக்குதல்' நடத்தும் அமெரிக்கா; என்ன நடக்கிறது?

ஜூலை 24-ம் தேதிக்குப் பிறகு, ஈரானும், அமெரிக்காவும் எந்த அறிவிப்புமின்றி தங்களுக்குள்...

EPFO: పీఎఫ్ చందాదారులకు భారీ ఊరట.. అప్లై చేయకుండానే నేరుగా బ్యాంక్ ఖాతాల్లోకి డబ్బులు!

EPFO: బ్యాంకులు, ఎల్ఐసీ (LIC), ఈపీఎఫ్‌ఓ (EPFO)లలో వేల కోట్ల రూపాయల...

അമിത് ഷാ കുറ്റക്കാരന്‍, അല്ലെങ്കില്‍ കഴിവില്ലാത്തവന്‍: രാജി ആവശ്യപ്പെട്ട് രാഹുല്‍

ന്യൂദല്‍ഹി: ദല്‍ഹിയില്‍ വിദ്യാര്‍ത്ഥി പ്രതിഷേധത്തിന് നേര്‍ക്കുണ്ടായ പൊലീസ് അതിക്രമങ്ങളില്‍ ആഭ്യന്തര മന്ത്രി...