15
July, 2026

A News 365Times Venture

15
Wednesday
July, 2026

A News 365Times Venture

ಅಷಾಢ ಮಾಸದ ಸಿದ್ದತೆ ಪರಿಶೀಲನೆ: ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಸಚಿವ ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು,ಜುಲೈ,15,2026 (www.justkannada.in): ಚಾಮುಂಡಿ ಬೆಟ್ಟದಲ್ಲಿ ಆಷಾಡ ಮಾಸದ ಸಿದ್ಧತೆ ಕುರಿತು ಪರಿಶೀಲನೆ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅನುಕೂಲ ಮಾಡಿ ಕೊಡಬೇಕು ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದು ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಿದ್ದತೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ,  ಈಗಾಗಲೇ ಸಿದ್ಧತೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೀನಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅನುಕೂಲ ಮಾಡಿ ಕೊಡಬೇಕು. ವಿಐಪಿಗಳಿಗೆ ಈಗಾಗಲೇ ಸಮಯ ನಿಗದಿ ಮಾಡಿದ್ದೇವೆ. 9:30 ರ ಒಳಗೆ ಎಲ್ಲಾ ವಿಐಪಿಗಳು ದರ್ಶನ ಮಾಡಬೇಕು. ಬೇಕಾದ ಸಮಯದಲ್ಲಿ ವಿಐಪಿಗಳು ಬಂದು ದರ್ಶನ  ಮಾಡುವಂತಿಲ್ಲ. ವಿಐಪಿ ಗಳಿಗೆ ವಾಹನಗಳನ್ನು ಮಹಿಷಾಸುರ ಪ್ರತಿಮೆಯ ಬಳಿ ಪಾರ್ಕಿಂಗ್ ಮಾಡಬೇಕು. ವಿಐಪಿ ಹೆಸರು ಹೇಳಿಕೊಂಡು ಬಂದರೆ ಒಳಗೆ ಬಿಡಲ್ಲ ಎಂದರು.

ದರ್ಶನಕ್ಕೆ 2000 ರೂಪಾಯಿ ಟಿಕೆಟ್ ದರ ಹೆಚ್ಚಾಗಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಈಗಾಗಲೇ 300 ರೂಪಾಯಿ ಟಿಕೆಟ್ ಬೇಡ ಎಂದು ತೀರ್ಮಾನ ಮಾಡಿದ್ದೇವೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿದ್ದೇವೆ ಎಂದರು.

ಮೆಟ್ಟಿಲು ಹತ್ತುವ ಭಕ್ತಾದಿಗಳಿಗೆ ಶೌಚಾಲಯದ  ವ್ಯವಸ್ಥೆ ವಿಚಾರ, ತಾತ್ಕಾಲಿಕವಾಗಿ ಶೌಚಾಲಯ ನಿರ್ಮಾಣ ಮಾಡಲು ಚರ್ಚೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಶೌಚಾಲಯದ ವ್ಯವಸ್ಥೆಯನ್ನೂ ಸಹ ಮಾಡುತ್ತೇನೆ.ಭಕ್ತಾದಿಗಳಿಗೆ ಯಾವ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು  ತಿಳಿಸಿದರು.

ಕಂಬಳ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿಲ್ಲ

ದಸರಾದಲ್ಲಿ ಕಂಬಳ ನಡೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ದಸರಾದಲ್ಲಿ ಕಂಬಳ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿಲ್ಲ. ಪರಿಸರಕ್ಕೆ ತೊಂದರೆ ಮಾಡಿ ಕಂಬಳ ಮಾಡುತ್ತಿಲ್ಲ. ಕಂಬಳ ಬೇಡ ಎಂಬ ಕೂಗು ಎದ್ದಿದೆ. ಎಲ್ಲದರ ಸಾಧಕ ಬಾಧಕಗಳನ್ನ ಸಿಎಂ ಪರಿಶೀಲನೆ ಮಾಡುತ್ತಾರೆ. ಸಿಎಂ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಕಂಬಳ ಕೂಡ ನಮ್ಮ ಸಂಸ್ಕೃತಿಯ ಭಾಗ. ಅದನ್ನು ಮೈಸೂರು ಭಾಗಕ್ಕೂ ಪ್ರಚಾರ ಮಾಡುವ ದೃಷ್ಟಿಯಿಂದ ಕಂಬಳ ನಡೆಸಲು ಚಿಂತನೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸೂಟ್ ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ

ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸೂಟ್ ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಸುಟ್ಕೇಸ್ ಕೊಟ್ಟರೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬುದು ಸುಳ್ಳು. ಈ ಬಗ್ಗೆ ಆರೋಪ ಮಾಡುವ ವಿಪಕ್ಷದಲ್ಲೇ ಸುಟ್ಕೇಸ್ ಸಂಸ್ಕೃತಿ ಇದೆ. ಸಂಪುಟ ವಿಸ್ತರಣೆ ವಿಚಾರ ಸಿಎಂ ಹಾಗೂ ಸಿದ್ದರಾಮಯ್ಯ ಅವರನ್ನೇ ಕೇಳಿ. ನನಗೆ ಈ ಬಗ್ಗೆ ಗೊತ್ತಿಲ್ಲ ಎಂದರು.

Key words: Ashada Masa, Chamundi hills, Minister, Yathindra Siddaramaiah

The post ಅಷಾಢ ಮಾಸದ ಸಿದ್ದತೆ ಪರಿಶೀಲನೆ: ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಸಚಿವ ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇ-20 വീഡിയോ ഗഡ്കരിയെ താറടിക്കാനെന്ന ബി.ജെ.പി ഐ.ടി സെല്‍ കണ്‍വീനറുടെ പരാതിയില്‍ 4 പേര്‍ക്കെതിരെ കേസ്

നാഗ്പൂര്‍: ഇ-20 ഇന്ധനത്തെക്കുറിച്ച് വീഡിയോ ചെയ്ത നാല് ഇന്‍ഫ്‌ളൂവന്‍സര്‍മാര്‍ക്കെതിരെ കേസ്. ബി.ജെ.പി...

வடபழஞ்சி: `ஓர் உயிரிழப்புக்குப் பிறகும் தொடரும் பாதுகாப்பு குறைபாடு' – ரயில்வே கேட் அமைக்கப்படுமா?

மதுரை – போடிநாயக்கனூர் ரயில் பாதையில் அமைந்துள்ள வடபழஞ்சி ரயில்வே நிலையம்,...

ഓപ്പറേഷന്‍ തൂഫാന് തമിഴ്‌നാടിന്റെ പച്ചക്കൊടി: കൊച്ചിയിലെ പ്രചരണ പരിപാടിയില്‍ മോഹന്‍ലാലും വിജയ്‌യും ഒരുമിച്ച് പങ്കെടുക്കും: രമേശ് ചെന്നിത്തല

തിരുവനന്തപുരം: ഓപ്പറേഷന്‍ തൂഫാന് തമിഴ്‌നാട് സര്‍ക്കാരിന്റെ പൂര്‍ണ പിന്തുണ. തമിഴ്‌നാട് മുഖ്യമന്ത്രി...