ಬೆಂಗಳೂರು,ಜುಲೈ,7,2026 (www.justkannada.in) : ಬೆಂಗಳೂರಿನ ಕಾವೇರಿ ಭವನ ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರು ಇಂದು ಏಕಾಏಕಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಕಾವೇರಿ ಭವನ ಯಲಹಂಕ ತಹಶೀಲಾರ್ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಒಟ್ಟು ಏಳು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಹಾರ ಇಲಾಖೆಯ ಎಂಡಿ ಎಂ.ಕೆ ಜಗದೀಶ್ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ನಗರದಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಜಗದೀಶ್ ಯಲಹಂಕದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಜಮೀನು ನೀಡಿದ್ದ ಆರೋಪ ಕೇಳಿ ಬಂದಿತ್ತು. 2023 ರಲ್ಲಿ 9 ಹಾಗೂ 2 ಜಮೀನನ್ನು ಅನಧಿಕೃತವಾಗಿ ನೀಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಗದೀಶ್ ಅವರ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ.
Key words: Lokayukta, raid, 7 places, including, Bengaluru
The post ಬೆಂಗಳೂರು ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರ ದಾಳಿ, ಪರಿಶೀಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





