ಕಲಬುರ್ಗಿ,ಜುಲೈ,6,2026 (www.justkannada.in): ಗೃಹ ಸಚಿವರ ತವರು ಕಲ್ಬುರ್ಗಿಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಡ್ರೈವರ್ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.
ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಕ ಬಸವರಾಜ್, ಚಾಲಕ ಆಕಾಶ್ ಎಂಬುವವರನ್ನು ಅಮಾನತು ಮಾಡಿ ವಿಭಾಗಿಯ ನಿಯಂತ್ರಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಜುಲೈ 5 ರಂದು ಕಲ್ಬುರ್ಗಿಯಿಂದ ಚಿಂಚೋಳಿ ಕಡೆಗೆ ಬಸ್ ತೆರಳುತ್ತಿತ್ತು. ಕಲಬುರಗಿ-ಚಿಂಚೋಳಿ ಮಾರ್ಗದಲ್ಲಿ ರಾತ್ರಿ 7.30ಕ್ಕೆ ಕಲಬುರಗಿಯಿಂದ ತೆರಳುತ್ತಿದ್ದ ಕೆಕೆಆರ್ಟಿಸಿ ಬಸ್ ಹೆಡ್ ಲೈಟ್ ಇಲ್ಲದಿದ್ದರೂ ಕೂಡ ಮೊಬೈಲ್ ಟಾರ್ಚ್ ನಲ್ಲಿ ಬಸ್ ಚಾಲನೆ ಮಾಡಲಾಗಿತ್ತು.
ಈ ಘಟನೆ ನಡೆದ ಬೆನ್ನಲ್ಲೇ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
Key words: Bus driving, torch light, Three, suspended
The post ಹೆಡ್ ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ: ಡ್ರೈವರ್ ಸೇರಿ ಮೂವರು ಸಸ್ಪೆಂಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





