ಬೆಂಗಳೂರು,ಜುಲೈ,7,2026 (www.justkannada.in): ಎಸ್ ಐಆರ್ ಪ್ರಕ್ರಿಯೆ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ನವರು ದೂರು ಕೊಟ್ಟಿದ್ದಾರೆ. ತನಿಖೆಯಾಗಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಎಸ್ ಐಆರ್ ವಿಚಾರದಲ್ಲಿ ಆರೋಪ ಆತಂಕ ಪಡುವುದು ಏನೂ ಇಲ್ಲ. ಈಗಾಗಲೇ ದೂರು ಕೊಟ್ಟದ್ದಾರೆ ತನಿಖೆ ಆಗಲಿ. ನಮ್ಮ ದೃಷ್ಟಿಯಲ್ಲಿಎಲ್ಲರನ್ನೂ ಸೇರಿಸುತ್ತಿದ್ದೇವೆ. ಎಲ್ಲರನ್ನೂ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಮತದಾರರ ಪಟ್ಟಿಯಲ್ಲಿ ಇರಬೇಕು ಎಂದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ವಸದಸ್ಯರ ಸಭೆ ವಿಚಾರ. ಪಕ್ಷದಲ್ಲಿ ಹೊಸ ಬದಲಾವಣೆ ಆಗಬೇಕು. ಬಹಳಷ್ಟು ಬದಲಾವಣೆ ಬಗ್ಗೆ ಅದ್ಯಕ್ಷರು ಚಿಂತನೆ ಮಾಡುತ್ತಿದ್ದಾರೆ ಹೊಸಬರಿಗೆ ಅವಕಾಶ ಕೊಡಬೇಕು ಏನು ಚರ್ಚೆ ಆಗುತ್ತೆ ನೋಡೋಣ ಎಂದರು.
Key words: complaint, SIR, issue, investigate, Minister, Satish Jarkiholi
The post ಎಸ್ ಐಆರ್ ವಿಚಾರದಲ್ಲಿ ದೂರು ಕೊಟ್ಟಿದ್ದಾರೆ, ತನಿಖೆಯಾಗಲಿ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





