ಬೆಂಗಳೂರು,ಜೂನ್,29,2026 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ತೆಗೆದುಹಾಕುವಂತೆ ದೆಹಲಿ ನಾಯಕರಿಗೆ ಒತ್ತಾಯಿಸಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಈ ವಿಚಾರ ಕುರಿತು ಮಾತನಾಡಿರುವ ಮಾಜಿ ಸಿಎಂ ಡಿ.ವಿ ಸದಾನಂದಗೌಡರು, ಆರೋಪ ಮಾಡುವವರು ಸಾವಿರ ಜನ ಇರುತ್ತಾರೆ. ಹಾಗಂತ ಅವರಿಗೆಲ್ಲಾ ಉತ್ತರ ಕೊಟ್ಟು ಸಾಯುವ ವ್ಯಕ್ತಿ ನಾನಲ್ಲ . ನಾನು ಕಳ್ಳನಾಗಿದ್ದರೇ ಬಾಗಿಲು ಹಾಕಿ ನಿಮ್ಮನ್ನ ಹೊರಗೆ ಇರುಸುತ್ತಿದ್ದೆ. ಆಡಿಯೋ ಬಗ್ಗೆ ನಾನು ಏನು ಮಾತನಾಡುವುದಕ್ಕೆ ಹೋಗಲ್ಲ. ಯಾರ ಜೊತೆಗೂ ನಾನು ಹೋಗಿ ಮಾತನಾಡಲ್ಲ. ರಾಷ್ಟ್ರೀಯ ನಾಯಕರು ಕೇಳಿದರೇ ಮಾತ್ರ ಹೋಗಿ ಹೇಳುತ್ತೇನೆ. ಆ ಆಡಿಯೋ ಬಗ್ಗೆ ಸತ್ಯಾಸತ್ಯತೆ ಬಗ್ಗೆ ಮಾಧ್ಯಮಗಳೇ ಪತ್ತೆ ಹಚ್ಚಿ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರ ಜೊತೆಗೆ ಡಿವಿ ಸದಾನಂದಗೌಡ ಅವರು ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋದಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಎಂಬ ಬೇಡಿಕೆ ಇಡಲಾಗಿದೆ.
Key words: Audio, viral issue, Former CM, Sadananda Gowda
The post ಆಡಿಯೋ ವೈರಲ್ ವಿಚಾರ: ನಾನು ಏನೂ ಮಾತನಾಡಲ್ಲ- ಮಾಜಿ ಸಿಎಂ ಸದಾನಂದಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





