ಮೈಸೂರು,ಜೂನ್,24,2026 (www.justkannada.in): ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಸಾರ ವಿಭಾಗದ ಮನೆ ಮನೆ ಹನುಮ ಧಾರ್ಮಿಕ ಕಾರ್ಯಕ್ರಮಕ್ಕೆ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಾಪುರ ಮಾಹಾಪೀಠಂ ಕ್ಷೇತ್ರ ಬಂಗಾರಮಕ್ಕಿಯ ಪೀಠಾಧಿಪತಿ ಮಾರುತಿ ಗುರೂಜಿ ಚಾಲನೆ ನೀಡಿದರು.
ಇದೇ ವೇಳೆ ವಿಶ್ವ ಹಿಂದೂ ಪರಿಷತ್ ನ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಹಾಗೂ ಪ್ರತಿ ಮನೆಯಲ್ಲೂ ಹನುಮನ ಪೂಜೆಯ ಮೂಲಕ ಸನಾತನ ಧರ್ಮದ ಆಚರಣೆ ಹಾಗೂ ಜಾಗೃತಿ ಮೂಡಲಿ ಎಂದು ಮಾರುತಿ ಗುರೂಜಿ ತಿಳಿಸಿದರು. 
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್ ಮಾತನಾಡಿ ವಿಶ್ವ ಹಿಂದೂ ಪರಿಷತ್ ಹನುಮನ ಪೂಜೆಯನ್ನು ಮೈಸೂರಿನ ಪ್ರತಿ ಮನೆಯಲ್ಲೂ ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ಪೂಜೆ ಮಾಡಬಹುದು ಎಂದು ತಿಳಿಸಿದರು.
ಧರ್ಮ ಪ್ರಸಾರ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಪುನೀತ್ ಜಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ. ಆರ್. ಗಣೇಶ್, ಉದ್ಯಮಿ ಮನು, ವಿಶ್ವ ಹಿಂದೂ ಪರಿಷತ್ ನ ನರಸಿಂಹ ಮೂರ್ತಿ, ಜಗದೀಶ್ ಹೆಬ್ಬಾರ್, ಮಂಜುನಾಥ್, ಹುಲಗಾದ್ರಿ, ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ನಿರ್ದೇಶಕಿ ಸರಸ್ವತಿ ಗಣೇಶ್, ದಿಲೀಪ್, ಮೂಕಾಂಬಿಕಾ ಸತ್ಸಂಗ ಅಧ್ಯಕ್ಷರಾದ ಶುಭಾ ಅರುಣ್, ನಂಜನಗೂಡು ಬ್ರಾಹ್ಮಣ ಸಂಘದ ಫಣೀಶ್, ಸುಧಾ ಪ್ರಕಾಶ್, ಶೈಲಾ, ಚಂದ್ರಶೇಖರ್, ಪೂಜಾ ಪುನೀತ್, ಹೇಮಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Key words: Mysore, Mane Mane Hanuma, program
The post ಮೈಸೂರು: ‘ಮನೆ ಮನೆ ಹನುಮ’ ಕಾರ್ಯಕ್ರಮ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





