24
June, 2026

A News 365Times Venture

24
Wednesday
June, 2026

A News 365Times Venture

ಮೈಸೂರು: ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Date:

ಮೈಸೂರು,ಜೂನ್,22,2026 (www.justkannada.in):  ಡೆತ್ ನೋಟ್ ಬರೆದಿಟ್ಟು ತಾಯಿ, ತಂದೆ ಹಾಗೂ ಮಗಳು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಆತ್ಮಹತ್ಯೆಗೆ ಶರಣಾದವರು. ಅದೇ ಗ್ರಾಮದ ಉಲ್ಲಾಸ್ ಗೌಡನ ಕಿರುಕುಳ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ರಕ್ಷಿತಾಗೆ ಮದುವೆ ನಿಶ್ಚಿಯವಾಗಿತ್ತು, ಉಲ್ಲಾಸ್ ಗೌಡನಿಗೆ ರಕ್ಷಿತಾ ಕಳುಹಿಸಿದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಮದುವೆ ನಿಶ್ಚಿಯವಾಗಿದ್ದ ಯುವಕನಿಗೆ ಮೆಸೇಜ್ ಹಾಗೂ ಫೋಟೋಗಳನ್ನು ಉಲ್ಲಾಸ್ ಗೌಡ ಕಳುಹಿಸಿದ್ಧ ಎನ್ನಲಾಗಿದೆ.

ಈ ಬೆಳವಣಿಗೆಯಿಂದ ಬೇಸತ್ತು ಗ್ರಾಮದ ತಮ್ಮ ಮನೆಯಲ್ಲೇ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರ ಸಾವಿಗೂ ಉಲ್ಲಾಸ್ ಗೌಡ‌ನೆ ಕಾರಣನೆಂದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದ್ದು,  ಸ್ಥಳಕ್ಕೆ ವರುಣಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Mysore, death note, suicide, Three people, same family

The post ಮೈಸೂರು: ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

CM Vijay : 'தவெக அரசின் விஜய்யிஸ அரசியல்.!' – ஓர் விரிவான அலசல்!

தவெக முதல் சட்டமன்றக் கூட்டத்தொடர் நடந்து முடிந்திருக்கிறது. எதிர்க்கட்சிகளின் விமர்சனங்களுக்கு முதல்வர்...

Telangana Govt: పాఠశాల విద్యాశాఖ కీలక ఉత్తర్వులు.. టీచర్ల సర్దుబాటుపై కలెక్టర్లకు పూర్తి అధికారం!

Telangana Govt: తెలంగాణలో ప్రభుత్వ పాఠశాలల్లో విద్యాబోధనకు ఎలాంటి ఆటంకం కలగకుండా...

ಸಂಪುಟ ವಿಸ್ತರಣೆ ಕುರಿತು HDK ಹೇಳಿಕೆ ಖಂಡನೀಯ- ಎಚ್.ಎ. ವೆಂಕಟೇಶ್

ಮೈಸೂರು,ಜೂನ್,23,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ...