18
June, 2026

A News 365Times Venture

18
Thursday
June, 2026

A News 365Times Venture

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತಿಗೂ ಡೋಂಟ್ ಕೇರ್..? ಅಬಕಾರಿ ಡಿಸಿ ಸೇಫ್, ಕಿರಿಯ ಅಧಿಕಾರಿಗಳ ಅಮಾನತು

Date:

.

ಮೈಸೂರು, ಜೂ.೧೭,೨೦೨೬: ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದರೂ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚಿಸಿದ್ದ ಪ್ರಮುಖ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಜರುಗದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಅಗ್ನಿ ಅವಘಡದ ಸಂಬಂಧ ಕಟ್ಟಡದ ಮೇಲ್ಛಾವಣಿಯಲ್ಲಿ ಯಾವುದೇ ಅನುಮತಿ ಪಡೆಯದೆ ಒಣ ಹುಲ್ಲು ಹಾಗೂ ಗರಿಗಳಿಂದ ನಿರ್ಮಾಣ ಮಾಡಿದ್ದ ರೂಫ್‌ಟಾಪ್‌ನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು. ಈ ಅಕ್ರಮ ಚಟುವಟಿಕೆಯನ್ನು ಪರಿಶೀಲಿಸದೇ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ, ಮೈಸೂರು ವಲಯ-3ರ ಅಬಕಾರಿ ನಿರೀಕ್ಷಕ, ಇಬ್ಬರು ಅಬಕಾರಿ ಉಪನಿರೀಕ್ಷಕರು ಹಾಗೂ ಒಬ್ಬ ಅಬಕಾರಿ ಪೇದೆ ಸೇರಿ ಒಟ್ಟು ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆದರೆ, ಘಟನೆಯ ಮರುದಿನವೇ ಮೈಸೂರಿಗೆ ಧಾವಿಸಿದ್ದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ, ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ವಿರುದ್ಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅವರ ಈ ಹೇಳಿಕೆ ಬಳಿಕ ಜಿಲ್ಲೆಯಲ್ಲಿ ಅಬಕಾರಿ ಡಿಸಿ ವಿರುದ್ಧವೂ ಶಿಸ್ತು ಕ್ರಮ ಜರುಗಲಿದೆ ಎಂಬ ನಿರೀಕ್ಷೆ ಮೂಡಿತ್ತು.

ಆದರೆ ಸರ್ಕಾರದ ಅಂತಿಮ ಆದೇಶದಲ್ಲಿ ಅಬಕಾರಿ ಡಿಸಿ ನಾಗರಾಜಪ್ಪ ಅವರನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ಕೇವಲ ಕಿರಿಯ ಹಂತದ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ. ಇದರಿಂದ “ದೊಡ್ಡ ಮೀನುಗಳನ್ನು ಬಿಟ್ಟು ಸಣ್ಣ ಮೀನುಗಳನ್ನು ಹಿಡಿಯುವ” ಕೆಲಸ ನಡೆದಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಜಿಲ್ಲೆಯ ಅಬಕಾರಿ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಡಿಸಿ ಅವರ ಹೊಣೆಗಾರಿಕೆ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೇಲಧಿಕಾರಿಯ ಮೇಲ್ವಿಚಾರಣೆಯ ವೈಫಲ್ಯವಿದ್ದರೂ, ಅದರ ಹೊಣೆ ಕೇವಲ ಅಧೀನ ಅಧಿಕಾರಿಗಳ ಮೇಲೆ ಮಾತ್ರ ಹೊರಿಸಲಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.

ಇದರೊಂದಿಗೆ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಸೂಚನೆಗೂ ಸರ್ಕಾರ “ಡೋಂಟ್ ಕೇರ್” ಎಂದಿದೆಯೇ? ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸಚಿವರು ಬಹಿರಂಗವಾಗಿ ಕ್ರಮಕ್ಕೆ ಸೂಚಿಸಿದ್ದರೂ, ಅವರ ಸೂಚನೆಯಂತೆ ನಡೆದುಕೊಳ್ಳದಿರುವುದು ಸರ್ಕಾರದಲ್ಲಿ ಅವರ ಮಾತಿಗೆ ಎಷ್ಟು ಬೆಲೆ ಇದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಅಗ್ನಿ ಅವಘಡದಂತಹ ಗಂಭೀರ ಪ್ರಕರಣದಲ್ಲಿ ಜಿಲ್ಲಾಮಟ್ಟದ ಮುಖ್ಯ ಅಧಿಕಾರಿಯನ್ನು ಬಿಟ್ಟು ಉಳಿದವರನ್ನು ಅಮಾನತುಗೊಳಿಸಿರುವ ಕ್ರಮ ಇದೀಗ ಟೀಕೆಗೆ ಗುರಿಯಾಗಿದ್ದು, ಸರ್ಕಾರದ ಹೊಣೆಗಾರಿಕೆ ಮತ್ತು ಆಡಳಿತಾತ್ಮಕ ಪಾರದರ್ಶಕತೆ ಕುರಿತ ಪ್ರಶ್ನೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Key words: Mysuru, Bar & Restaurant Fire Accident, Government Ignores, Minister Yathindra Siddaramaiah’s Directive, Excise DC Spared, Junior Officials Suspended

ENGLISH SUMMARY: 

Mysuru Bar & Restaurant Fire Accident: Government Ignores Minister Yathindra Siddaramaiah’s Directive; Excise DC Spared, Junior Officials Suspended

Mysuru: In a development that has sparked fresh debate over accountability within the Excise Department, the Karnataka government has suspended five Excise officials in connection with the fire accident at a bar and restaurant near Dattagalli in Mysuru, while notably sparing the Excise Deputy Commissioner (DC), despite a public call for action against him by Minister Dr. Yathindra Siddaramaiah.

According to an order issued by the Excise Commissioner, Bengaluru, five officials have been suspended with immediate effect for alleged dereliction of duty. Those suspended include the Excise Deputy Superintendent of Mysuru Sub-Division, the Excise Inspector of Mysuru Range-3, two Excise Sub-Inspectors, and one Excise Beat Constable.

The action follows allegations that the establishment had illegally constructed and operated a rooftop section made of dry grass and thatched materials without obtaining the required permissions. Authorities contend that the officials failed to inspect the premises and prevent the violations, leading to disciplinary action.

However, the decision has raised eyebrows because Excise Deputy Commissioner Nagarajappa, who headed the district administration of the department, has not been suspended.

The controversy deepened as Dr. Yathindra Siddaramaiah, who rushed to Mysuru a day after the incident, had publicly expressed concern over the fire mishap and reportedly directed officials to initiate action against Excise DC Nagarajappa for supervisory lapses. His statement had created an impression that accountability would extend to the highest district-level officer responsible for monitoring Excise operations.

Contrary to those expectations, the government’s latest order has targeted only subordinate officials, leaving the Excise DC untouched. Political observers and sections of the public are questioning whether the government’s action amounts to shielding senior officers while making junior staff scapegoats for administrative failures.

The development has also triggered speculation about the weight carried by the directions of a Mysuru-based minister within the government. Critics argue that if Dr. Yathindra Siddaramaiah’s recommendation for action against the Excise DC has been overlooked, it raises questions about whether his views were taken seriously by the administration.

With the Excise DC remaining in office and only lower-ranking officials facing suspension, the government’s response has become a subject of intense discussion, with many asking whether true accountability has been enforced or merely shifted downward.

#MysuruFireAccident #ExciseDepartment #YathindraSiddaramaiah #ExciseDC #Nagarajappa #MysuruNews #KarnatakaGovernment #AdministrativeAccountability #BarFireCase #JustKannada

Editor Pic

The post ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತಿಗೂ ಡೋಂಟ್ ಕೇರ್..? ಅಬಕಾರಿ ಡಿಸಿ ಸೇಫ್, ಕಿರಿಯ ಅಧಿಕಾರಿಗಳ ಅಮಾನತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

DA Hike: విద్యుత్ ఉద్యోగులకు సర్కార్‌ గుడ్‌న్యూస్..

DA Hike: రాష్ట్రంలోని విద్యుత్ ఉద్యోగులకు తెలంగాణ ప్రభుత్వం శుభవార్త అందించింది....

ಜಯದೇವ ರೋಗಿಗಳ ಸಾವು ಕೇಸ್: ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ- ಸಚಿವ ಡಾ ಶರಣ ಪ್ರಕಾಶ್ ಪಾಟೀಲ್

ಮೈಸೂರು,ಜೂನ್,17,2026 (www.justkannada.in):  ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು...

നാഷണല്‍ കോണ്‍ഫറന്‍സിന്റെ തത്വങ്ങള്‍ വില്പനയ്ക്കുള്ളതല്ല; രാഷ്ട്രീയ നിലപാട് വ്യക്തമാക്കി ഒമര്‍ അബ്ദുള്ള

  ശ്രീനഗര്‍: അധികാരത്തിന് വേണ്ടി തങ്ങളുടെ രാഷ്ട്രീയ പ്രത്യയശാസ്ത്രത്തിലോ അടിസ്ഥാന മൂല്യങ്ങളിലോ...

`அனிதாவில் துவங்கிய நீட் மரணம் என் மகளோடு முடியணும்’ – தற்கொலை செய்த கோவை மாணவியின் தந்தை வேதனை!

கோவைப்புதூர் பார்க் டவுன் பகுதியைச் சேர்ந்த செந்தில் பிரபு என்பவர், கோவை...