17
June, 2026

A News 365Times Venture

17
Wednesday
June, 2026

A News 365Times Venture

ಸರ್ಕಾರಿ ಆಂಗ್ಲ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಸೂಚನೆ- ಮಾಜಿ ಸಚಿವ ಮಧು ಬಂಗಾರಪ್ಪ

Date:

ಬೆಂಗಳೂರು,ಜೂನ್,16,2026 (www.justkannada.in):  ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರಿ ಆಂಗ್ಲ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಮಾಜಿ ಸಚಿವ ಮಧು ಬಂಗಾರಪ್ಪ,  ಅಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಸರ್ಕಾರ ಮುಂದಾಗಿದೆ.   2 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಗಳು ಇದ್ದರೇ ಅಲ್ಲಿ ದಾಖಲಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.  ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಗಳಲ್ಲೇ ಪ್ರವೇಶಕ್ಕೆ ಸೂಚಿಸಲಾಗಿದೆ.  8ನೇ ತರಗತಿಗೆ  ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಗಳನ್ನ ಅಪ್ಡೇಟ್ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಬಡವರು ಮತ್ತು ರೈತರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಕಲಿಯಲಿ ಎಂಬ ಉದ್ದೇಶದಿಂದ 2018-19ನೇ ಸಾಲಿನಲ್ಲಿ 1001 ಕನ್ನಡ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ತಿಳಿಯದೇ ಅತಂತ್ರರಾಗಿದ್ದಾರೆ ಎಂದು ವರದಿಯಾಗಿತ್ತು. 1 ರಿಂದ 7ನೇ ತರಗತಿಯವರೆಗೆ ಇವರು ಆಂಗ್ಲ ಮಾಧ್ಯಮದಲ್ಲಿ ಓದಿದ್ದಾರೆ. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಅವರಲ್ಲಿ ಉಂಟಾಗಿದ್ದು ಈ ಬಗ್ಗೆ ಸುದ್ದಿಯಾಗಿತ್ತು.

Key words: students studied, government, English medium, Madhu Bangarappa

The post ಸರ್ಕಾರಿ ಆಂಗ್ಲ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಸೂಚನೆ- ಮಾಜಿ ಸಚಿವ ಮಧು ಬಂಗಾರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಧರ್ಮಸ್ಥಳ ಬುರುಡೆ ಕೇಸ್ ತನಿಖೆ ನಡೆಸುತ್ತಿದ್ದ SIT ಎಸ್ ಪಿ ಕಾರು ಪಲ್ಟಿ

ಮಂಗಳೂರು,ಜೂನ್,16,2026 (www.justkannada.in): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್...

കേരളത്തിന് പിന്നാലെ തമിഴ്‌നാട്ടിലും; സംസ്ഥാനം കടക്കെണിയില്‍, പോയ സര്‍ക്കാരിനെ പഴിച്ച് ധവളപത്രം

ചെന്നൈ: തമിഴ്‌നാട്ടില്‍ സംസ്ഥാന സര്‍ക്കാരിന്റെ സാമ്പത്തിക സ്ഥിതിയെ സംബന്ധിച്ച് ധവളപത്രം പുറത്തിറക്കി...

'இந்திய அரசு அனுமதித்த அளவுக்குள்ளேயே தமிழக அரசின் கடன் இருக்கிறது'- நிதித்துறைச் செயலர் சித்திக்

தமிழகத்தின் அனைத்து துறைகளின் நிதிநிலை, கடன் சுமை முந்தைய நிர்வாக செயல்பாடுகள்...

Off The Record: మెట్రో కేంద్రంగా కాంగ్రెస్, బీజేపీ పొలిటికల్ వార్..

Off The Record: హైదరాబాద్‌ మెట్రో కేంద్రంగా మాటల మంటలు రేగుతున్నాయి....