2
June, 2026

A News 365Times Venture

2
Tuesday
June, 2026

A News 365Times Venture

IPS ಕ್ಯಾಡರ್ ಹಂಚಿಕೆ: ಕರ್ನಾಟಕಕ್ಕೆ 6 ಅಧಿಕಾರಿಗಳ ಆಯ್ಕೆ

Date:

ನವದೆಹಲಿ, ಜೂನ್ 1,2026 (www.justkannada.in): 2024ರ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಭಾರತೀಯ ಪೊಲೀಸ್ ಸೇವೆ (IPS)ಗೆ ಆಯ್ಕೆಯಾದ ಅಭ್ಯರ್ಥಿಗಳ ಕ್ಯಾಡರ್ ಹಂಚಿಕೆ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ (MHA) ಪ್ರಕಟಿಸಿದೆ. ಈ ಪಟ್ಟಿಯ ಪ್ರಕಾರ ಕರ್ನಾಟಕ ಕ್ಯಾಡರ್‌ಗೆ ಒಟ್ಟು 6 ಅಭ್ಯರ್ಥಿಗಳು ಹಂಚಿಕೆಯಾಗಿದ್ದಾರೆ.

ಕರ್ನಾಟಕ ಕ್ಯಾಡರ್‌ಗೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ವಿವರ ಹೀಗಿದೆ:

ಆಕಾಶ್ (ದೆಹಲಿ) – ರ್ಯಾಂಕ್ 117

ಅಭಿಲಾಶ್ ಸುಂದರಂ (ದೆಹಲಿ) – ರ್ಯಾಂಕ್ 129

ಅಭಿನವ್ ಶರ್ಮಾ (ಉತ್ತರ ಪ್ರದೇಶ) – ರ್ಯಾಂಕ್ 130

ರಾಹುಲ್ ಸಿ ಯಾರಂಟೇಲಿ (ಕರ್ನಾಟಕ) – ರ್ಯಾಂಕ್ 462

ಮಹೇಶ್ ಆರ್ ಮಡಿವಾಳರ್ (ಕರ್ನಾಟಕ) – ರ್ಯಾಂಕ್ 482

ಸಂಪ್ರೀತ್ ಸಂತೋಷ್ (ಕರ್ನಾಟಕ) – ರ್ಯಾಂಕ್ 652

ಈ ಪೈಕಿ ದೆಹಲಿ ಹಾಗೂ ಉತ್ತರ ಪ್ರದೇಶ ಮೂಲದ ಮೂವರು ಅಭ್ಯರ್ಥಿಗಳು ಹೊರರಾಜ್ಯ ಕೋಟಾದಡಿ ಕರ್ನಾಟಕ ಕ್ಯಾಡರ್ ಪಡೆದಿದ್ದರೆ, ಕರ್ನಾಟಕ ಮೂಲದ ರಾಹುಲ್ ಸಿ ಯಾರಂಟೇಲಿ, ಮಹೇಶ್ ಆರ್ ಮಡಿವಾಳರ್ ಹಾಗೂ ಸಂಪ್ರೀತ್ ಸಂತೋಷ್ ತಮ್ಮ ರಾಜ್ಯದ ಕ್ಯಾಡರ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಕರ್ನಾಟಕ ಮೂಲದ ಇನ್ನಿಬ್ಬರು ಅಭ್ಯರ್ಥಿಗಳಿಗೆ ಬೇರೆ ರಾಜ್ಯಗಳ ಕ್ಯಾಡರ್ ಹಂಚಿಕೆಯಾಗಿದೆ. ಪಾಂಡುರಂಗ ಎಸ್. ಕಾಂಬಳಿ ಅವರಿಗೆ ಅಸ್ಸಾಂ-ಮೇಘಾಲಯ ಹಾಗೂ ಶ್ರೇಯಸ್ ರಾವ್ ಜಿ ಅವರಿಗೆ ಆಂಧ್ರ ಪ್ರದೇಶ ಕ್ಯಾಡರ್ ನೀಡಲಾಗಿದೆ.

ಕೇಂದ್ರ ಸರ್ಕಾರವು ಭಾರತೀಯ ಪೊಲೀಸ್ ಸೇವೆ (ಕ್ಯಾಡರ್) ನಿಯಮಗಳು, 1954ರ ಅನ್ವಯ ಈ ಕ್ಯಾಡರ್ ಹಂಚಿಕೆ ಅಧಿಸೂಚನೆಯನ್ನು ಹೊರಡಿಸಿದೆ.

Key words: IPS ,cadre, allocation, 6 officers, selected,  Karnataka

The post IPS ಕ್ಯಾಡರ್ ಹಂಚಿಕೆ: ಕರ್ನಾಟಕಕ್ಕೆ 6 ಅಧಿಕಾರಿಗಳ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

IPLಗೂ ಡಾ. ರಾಜ್ ಕುಟುಂಬಕ್ಕೂ ವಿಶೇಷ ನಂಟು? ಕಾಕತಾಳೀಯವಾದರೂ ಕುತೂಹಲ ಮೂಡಿಸಿದ ಸಂಗತಿಗಳು!

  ಬೆಂಗಳೂರು, ಜೂ.೦೨,೨೦೨೬: ಕ್ರಿಕೆಟ್ ಅಭಿಮಾನಿಗಳ ಹಬ್ಬವೆಂದೇ ಕರೆಯಲಾಗುವ ಐಪಿಎಲ್‌ ಟ್ರೋಫಿ...

കുട്ടികള്‍ക്ക് മിഠായി കൈയില്‍ കൊടുക്കാതിരുന്ന സംഭവം; വിമര്‍ശങ്ങള്‍ക്കൊടുവില്‍ പ്രതികരണവുമായി വി. മുരളീധരന്‍

തിരുവനന്തപുരം: കട്ടേല മോഡല്‍ റസിഡന്‍ഷ്യല്‍ സ്‌കൂളില്‍ കുട്ടികള്‍ക്ക് മിഠായി കൈയില്‍ കൊടുക്കാതെ...

போலி கையொப்ப சிக்கல்; அதிகரிக்கும் அதிருப்தி… பிளவை நோக்கிச் செல்கிறதா மம்தா கட்சி?!

மேற்கு வங்கத்தில் திரிணாமுல் காங்கிரஸ் சமீபத்தில் நடந்த சட்டமன்றத் தேர்தலில் தோல்வியைத்...