ಬೆಂಗಳೂರು, ಜೂ.೦೨,೨೦೨೬: ಕ್ರಿಕೆಟ್ ಅಭಿಮಾನಿಗಳ ಹಬ್ಬವೆಂದೇ ಕರೆಯಲಾಗುವ ಐಪಿಎಲ್ ಟ್ರೋಫಿ ಗೆಲುವಿನ ಕೆಲವು ಮಹತ್ವದ ಕ್ಷಣಗಳು ಕನ್ನಡದ ವರನಟ ಡಾ.ರಾಜ್ ಕುಮಾರ್ (Dr. Rajkumar) ಕುಟುಂಬದ ಸ್ಮರಣೀಯ ದಿನಗಳೊಂದಿಗೆ ಹೊಂದಿಕೆಯಾಗಿರುವುದು ಈಗ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
2024ರ ಮಾರ್ಚ್ 17ರಂದು ನಡೆದ ಮಹಿಳಾ ಐಪಿಎಲ್ ಫೈನಲ್‌ನಲ್ಲಿ Royal Challengers Bengaluru Women ತನ್ನ ಚೊಚ್ಚಲ ಟ್ರೋಫಿಯನ್ನು ಗೆದ್ದಿತ್ತು. ವಿಶೇಷವೆಂದರೆ ಅಂದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಜನ್ಮದಿನವಾಗಿತ್ತು.
ಅದರ ನಂತರ 2025ರ ಮಾರ್ಚ್ 17ರಂದು ನಡೆದ ಆರ್‌ಸಿಬಿಯ “ಅನ್‌ಬಾಕ್ಸ್” ಕಾರ್ಯಕ್ರಮವೂ ಅಪ್ಪು ಜನ್ಮದಿನದಂದೇ ನಡೆದಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು.
2026ರ ಏಪ್ರಿಲ್ 24ರಂದು Royal Challengers Bengaluru ತಂಡವು Gujarat Titans ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆ ದಿನವೇ ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಅವರ ಜನ್ಮದಿನವಾಗಿರುವುದು ಮತ್ತೊಂದು ಕಾಕತಾಳೀಯ ಸಂಗತಿಯಾಗಿ ಕಂಡುಬಂದಿದೆ.
ಇದೀಗ 2026ರ ಮೇ 31ರಂದು ಆರ್‌ಸಿಬಿ ತನ್ನ ಎರಡನೇ ಪುರುಷರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ವಿಶೇಷವೆಂದರೆ ಇದೇ ದಿನ ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ( Parvathamma Rajkumar) ಅವರ ಪುಣ್ಯಸ್ಮರಣೆಯ ದಿನವೂ ಆಗಿದೆ.

ಈ ಎಲ್ಲಾ ಘಟನೆಗಳು ಕೇವಲ ಕಾಕತಾಳೀಯವಾಗಿರಬಹುದು. ಆದರೆ ಕನ್ನಡಿಗರ ಹೆಮ್ಮೆಯ ಡಾ. ರಾಜ್‌ಕುಮಾರ್ ಕುಟುಂಬದ ಮಹತ್ವದ ದಿನಗಳೊಂದಿಗೆ ಆರ್‌ಸಿಬಿಯ ಐತಿಹಾಸಿಕ ಕ್ಷಣಗಳು ಹೊಂದಿಕೆಯಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಭಾವನಾತ್ಮಕ ಚರ್ಚೆಗೆ ಕಾರಣವಾಗಿದೆ. “ಇದು ಕಾಕತಾಳೀಯವೇ, ಅಥವಾ ರಾಜ್ ಕುಟುಂಬದ ಆಶೀರ್ವಾದವೇ?” ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Key words: IPL, Dr. Rajkumar Family, A Strange Coincidence, That Has Fans Talking!

SUMMARY:
IPL and Dr. Rajkumar Family: A Strange Coincidence That Has Fans Talking!
Bengaluru: Several memorable moments in the history of the IPL have surprisingly coincided with important dates connected to the family of legendary Kannada actor Dr. Rajkumar, sparking discussion among cricket and cinema fans alike.

The journey began on March 17, 2024, when Royal Challengers Bengaluru Women lifted their maiden Women’s Premier League trophy. Interestingly, the date also marked the birthday of Power Star Puneeth Rajkumar.
A year later, on March 17, 2025, RCB’s much-celebrated Unbox Event was held on Puneeth Rajkumar’s birthday, once again linking a major RCB occasion with the Rajkumar family.
On April 24, 2026, Royal Challengers Bengaluru registered a memorable five-wicket victory over Gujarat Titans. The date happened to be the birth anniversary of Dr. Rajkumar, adding another coincidence to the list.
The latest connection came on May 31, 2026, when RCB secured their second men’s IPL title. Significantly, the day coincided with the remembrance day (Punya Smarane) of Dr. Rajkumar and Parvathamma Rajkumar.

While these events are most likely just coincidences, the repeated overlap between RCB’s landmark moments and important dates in the Rajkumar family’s legacy has caught the attention of fans. Social media is abuzz with discussions, with many wondering whether it is merely chance or a special emotional connection that continues to resonate with Kannada hearts.

#RCB #IPL2026 #DrRajkumar #PuneethRajkumar #Appu #KannadaPride #RCBFans #CricketAndCinema
The post IPLಗೂ ಡಾ. ರಾಜ್ ಕುಟುಂಬಕ್ಕೂ ವಿಶೇಷ ನಂಟು? ಕಾಕತಾಳೀಯವಾದರೂ ಕುತೂಹಲ ಮೂಡಿಸಿದ ಸಂಗತಿಗಳು! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





