29
May, 2026

A News 365Times Venture

29
Friday
May, 2026

A News 365Times Venture

ನುಡಿದಂತೆ ನಡೆದ ಹೆಮ್ಮೆ ನಮಗಿದೆ: 3 ವರ್ಷದ ಸಾಧನೆ ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮೇ,27,2026 (www.justkannada.in): ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ಸಿದ್ದರಾಮಯ್ಯ  ರಾಜೀನಾಮೆ ನೀಡುವ ಸಾಧ್ಯತೆ ಇದಕ್ಕೂ ಈ ಮುನ್ನ ತಮ್ಮ ಮೂರು ವರ್ಷದ ಸಾಧನೆ ಕುರಿತು ಮೆಲುಕು ಹಾಕಿದ್ದಾರೆ.

ಈ  ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ನಾವು ಜಾರಿಗೆ ತಂದ ಗೃಹಜ್ಯೋತಿ ಯೋಜನೆ ಇಂದು ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ.

ಈ ಯೋಜನೆಯಡಿ  ರಾಜ್ಯದ ಒಟ್ಟು 1.64 ಕೋಟಿ ಕುಟುಂಬಗಳಿಗೆ ಮಾಸಿಕ ಗರಿಷ್ಠ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ ಯೋಜನೆಗಾಗಿ ₹26,115 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Key words: CM Siddaramaiah, 3 years,  achievements

The post ನುಡಿದಂತೆ ನಡೆದ ಹೆಮ್ಮೆ ನಮಗಿದೆ: 3 ವರ್ಷದ ಸಾಧನೆ ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രതീക്ഷയുടെ പ്രത്യാശയുടെ മുഖ്യമന്ത്രി; വി.ഡി. സതീശനെ പുകഴ്ത്തി ബി.ജെ.പി നേതാവ് ശ്രീധരന്‍ പിള്ള

കോഴിക്കോട്: മുഖ്യമന്ത്രി വി.ഡി. സതീശനെ പുകഴ്ത്തി ബി.ജെ.പി നേതാവ് അഡ്വ. പി.എസ്....

Vaibhav Parents: ‘అతడిని అలా వదిలేయకండమ్మా’.. వైభవ్ సూర్యవంశీ తల్లిదండ్రులకు రిక్వెస్ట్..

రాజస్థాన్ రాయల్స్ యువ బ్యాటర్, 15 ఏళ్ల వైభవ్ సూర్యవంశీపై భారత...

ಇನ್ಮುಂದೆ ಗ್ಯಾರಂಟಿಗಳು ಸ್ಟಾಪ್: ಸಿದ್ದರಾಮಯ್ಯ ರಾಜೀನಾಮೆ ‘ಕೈ’ ಪತನಕ್ಕೆ ಕಾರಣ- ಭವಿಷ್ಯ ನುಡಿದ MLC

ಬೆಂಗಳೂರು,ಮೇ,28,2026 (www.justkannada.in) : ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪತನಕ್ಕೆ...