ಮಂಡ್ಯ,ಮೇ,26,2026 (www.justkannada.in): ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗಿದರೂ ಮೇಕೆದಾಟು ಡ್ಯಾಂ ಕಟ್ಟೋದನ್ನ ತಡೆಯಲು ಸಾಧ್ಯವಿಲ್ಲ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ತಿಳಿಸಿದ್ದಾರೆ.
ಮೇಕೆದಾಟು ಡ್ಯಾಂ ನಿರ್ಮಾಣ ಸಂಬಂಧ ತಮಿಳುನಾಡಿನ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಹಿನ್ನೆಲೆ ಈ ಕುರಿತು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಮಾತನಾಡಿದರು.
ತಮಿಳುನಾಡಿನಲ್ಲಿ ವಿಜಯ್ ಸಿಎಂ ಆದರೂ ಮೇಕೆದಾಟು ಡ್ಯಾಂ ಕಟ್ಟೋದನ್ನ ತಡೆಯಲು ಸಾಧ್ಯವಿಲ್ಲ. ಈಗಾಗಲೇ ನಾವು ಡಿಪಿಆರ್ ಕೂಡ ಸಿದ್ದಪಡಿಸಿದ್ದೇವೆ. ತಮಿಳುನಾಡಿನ ಪಾಲಿನ ನೀರನ್ನು ನಾವು ಕೊಡುತ್ತಿದ್ದೇವೆ. ನಮ್ಮ ಜಾಗದಲ್ಲಿ ಡ್ಯಾಂ ಕಟ್ಟುವುದನ್ನು ತಡೆಯಲು ಸಾಧ್ಯವಿಲ್ಲ. ನಾವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಗೆದ್ದಿದ್ದೇವೆ. ನಾವು ಶೀಘ್ರದಲ್ಲಿಯೇ ಮೇಕೆದಾಟು ಡ್ಯಾಂ ಕಟ್ಟುತ್ತೇವೆ ಎಂದು ಹೇಳಿದರು.
Key words: Tamil Nadu, cannot stop, construction, Mekedatu Dam, MLA, Ravikumar
The post ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗಿದ್ರೂ ಮೇಕೆದಾಟು ಡ್ಯಾಂ ಕಟ್ಟೋದನ್ನ ತಡೆಯಲು ಸಾಧ್ಯವಿಲ್ಲ- ‘ಕೈ’ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





