ಬೆಂಗಳೂರು,ಮೇ,25,2026 (www.justkannada.in): ದೇಶದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ 11 ದಿನದಿಂದ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದೆ. ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕ ಜೀವನ ದುಬಾರಿಯಾಗಿದೆ ಬಿಜೆಪಿ ಅಧಿಕಾರಕ್ಕೆ ಬಂದರೇ ಅಚ್ಚೇದಿನ್ ಆಗುತ್ತೆ ಎಂದಿದ್ದರು. ಇದೇನಾ ಅಚ್ಚೇದಿನ್ ಎಂದು ಕುಟುಕಿದರು.
ಸಿಎನ್ ಜಿದರವನ್ನು ಹಿಂದೇಂದೂ ಕಾಣದ ರೀತಿ ಹೆಚ್ಚಿಸ್ದಾರೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 ರೂ ಆಗಿದೆ ಬೆಂಗಳೂರು ಡೀಸೆಲ್ ದರ 98.89 ಆಗಿದೆ. 10 ದಿನಗಳಲ್ಲಿ 7.52 ರೂ. ಏರಿಕೆಯಾಗಿದೆ. 2014ರಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ದರ 71 ರೂ. ಇತ್ತು. 2014ರಲ್ಲಿ ಗ್ಯಾಸ್ ಬೆಲೆ 412 ರೂ. ಇತ್ತು. ಈಗ ಸಿಲಿಂಡರ್ ಬೆಲೆ 915 ರೂ ಆಗಿದೆ ಎಂದು ಹರಿಹಾಯ್ದರು.
Key words: Petrol, diesel, price hike, CM, Siddaramaiah
The post ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಇದೇನಾ ಅಚ್ಚೇದಿನ್? ಸಿಎಂ ಸಿದ್ದರಾಮಯ್ಯ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





