10
May, 2026

A News 365Times Venture

10
Sunday
May, 2026

A News 365Times Venture

ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ: ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ-  ಬಸವರಾಜ್ ಬೊಮ್ಮಾಯಿ

Date:

ಚಿತ್ರದುರ್ಗ,ಮೇ,9,2026 (www.justkannada.in):  ರಾಜ್ಯದಲ್ಲಿ ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ ಬಿಎಸ್ ಯಡಿಯೂರಪ್ಪ ಅವರ ಆಶೀರ್ವಾದದಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಬರಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್ ವೈ ಅಭಿಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಎಂಬ ಹೆಸರಲ್ಲಿ ದೊಡ್ಡ ಶಕ್ತಿಯಿದೆ.  ಬಡವರು ದೀನ ದಲಿತರ ಹೃದಯದಲ್ಲಿ ಬಿಎಸ್ ವೈ ಹೆಸರಿದೆ. ಚಿತ್ರದುರ್ಗದ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಭದ್ರ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದು ಬಿಎಸ್ ವೈ.  ಬಯಲು ಸೀಮೆಗೆ ನೀರು ಕೊಟ್ಟ ಭಗೀರಥ ಬಿಎಸ್ ವೈ ಎಂದು ಬಣ್ಣಿಸಿದರು.

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಬೇಡ. ಅಧಿಕಾರಕ್ಕಾಗಿ ಜನರಿಗೆ ದಾರಿ ತಪ್ಪಿಸುವ ಕಾಲವಿದು.  ಸಿದ್ದರಾಮಯ್ಯರನ್ನ ಮಾಸ್ ಲೀಡರ್ ಅಂತಾರೆ ಆದರೆ ಏಕಮೇವ ಮಾಸ್ ಲೀಡರ್ ಬಿಎಸ್ ಯಡಿಯೂರಪ್ಪ. ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುತ್ತಾರೆ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಿದ್ದಾರೆ. ಸ್ಥಾನಮಾನ ಗೌರವ ಕೊಟ್ಟು ಶಕ್ತಿ ತುಂಬಿದ ನನ್ನ ನಾಯಕ ಬಿಎಸ್ ಯಡಿಯೂರಪ್ಪ. ಬಿಎಸ್ ವೈಗೆ ನೂರ ವರ್ಷ ತುಂಬಲಿ ಎಂದು ಹಾರೈಸಿದರು.

ಆಡಳಿತ ಪಕ್ಷದ ಹಡುಗು ಮುಳುಗುತ್ತಿದೆ. ನಮ್ಮ ಹಡಗು ತೇಲುತ್ತಿದೆ ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ.   ಬಿಎಸ್ ವೈ ಆಶೀರ್ವಾದದ ನಮ್ಮ ಸರ್ಕಾರ ರಾಜ್ಯದಲ್ಲಿ ಬರಲಿ. ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ ಎಂದರು.

Key words: BSY Abhimanotsav, Former CM,  Basavaraj Bommai

The post ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ: ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ-  ಬಸವರಾಜ್ ಬೊಮ್ಮಾಯಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ദീദിയില്ലാത്ത ബംഗാള്‍ നിയമസഭ; തൃണമൂലിനെ നയിക്കാനിനി ശോഭന്‍ദേബ്

കൊല്‍ക്കത്ത: ബംഗാള്‍ നിയമസഭയിലെ പ്രതിപക്ഷ നേതാവിനെ നിയമിച്ച് തൃണമൂല്‍ കോണ്‍ഗ്രസ്. ബാലിഗഞ്ച്...

TVK: "கலாம் ஐயா சொன்னதுபோல, இந்தக் கனவு என்பது பெரும் கனவு!" – பதவியேற்புக்கு பின் ராஜ்மோகன்!

சட்டமன்றத் தேர்தலில், 108 இடங்களை வென்று தனிப்பெரும் கட்சியாக உருவெடுத்திருக்கிறது தமிழக...

Buttermilk vs Lassi: మజ్జిగ వర్సెస్ లస్సీ.. ఈ మండుటెండలో ఏది ఎక్కువ మేలు చేస్తుంది..?

Buttermilk vs Lassi: ఎండలు దంచికొడుతున్నాయి.. బయటకు వెళ్లాలి అంటేనే ఆలోచించాల్సిన...

ಪೋಷಕರ ಎಡವಟ್ಟು: ಸೋಫಾದಡಿ ಮಲಗಿದ್ದ ಮಗುಗಾಗಿ ಕಿಡ್ನಾಪ್  ದೂರು

ಮಂಡ್ಯ,ಮೇ,9,2026 (www.justkannada.in): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿ...