22
April, 2026

A News 365Times Venture

22
Wednesday
April, 2026

A News 365Times Venture

ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ

Date:

ಬೆಂಗಳೂರು,ಏಪ್ರಿಲ್,22,2026 (www.justkannada.in): ಒಳಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆಬಿದ್ದಿದ್ದು ಸುಮಾರು ಮೂರು ವರ್ಷಗಳಿಂದಲೂ ನೇಮಕಾತಿಗಳು ಆಗದೆ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದಿದ್ದಾರೆ. ಈ ಮಧ್ಯೆ ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಉರಿಲಿಂಗ ಪೆದ್ದಿಮಠದ  ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜ್ಞಾನ ಪ್ರಕಾಶ ಸ್ವಾಮೀಜಿ, ಒಳಮೀಸಲಾತಿ ವಿಚಾರದಲ್ಲಿ  ಆತುರದ ನಿರ್ಧಾ ರಮಾಡದಂತೆ ಮನವಿ ಮಾಡಿದ್ದೇನೆ.  ಒಳಮೀಸಲಾತಿ ಇತ್ಯರ್ಥ  ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ ಒಳಮೀಸಲಾತಿ ನಿಯಮದಡಿ ನೇಮಕಾತಿ ಪ್ರಕ್ರಿಯೆ ಮಾಡಬಾರದು ಹಿಂದಿನ ಮೀಸಲಾತಿಯಿಂದ ನೇಮಕಾತಿ ಮಾಡಲು ಮನವಿ ಮಾಡಿದ್ದೇವೆ  ಎಂದರು.

ಏಪ್ರಿಲ್ 24ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲ್ಲ ಎಂದಿದ್ದಾರೆ.  ಚರ್ಚೆ ಮಾಡಿಯೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದಿದ್ದಾರೆ. ಒಳಮೀಸಲಾತಿ ಗೊಂದಲ ಇತ್ಯರ್ಥ  ಮಾಡಬೇಕು ಎಂದು ಉರಿಲಿಂಗ ಜ್ಞಾನ ಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

Key words: Recruitment, internal reservation, Gyana Prakash Swamiji, CM Siddaramaiah

The post ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പാതിവെന്ത സത്യം, ചരിത്രത്തെ വെളുപ്പിക്കുന്ന വ്യജ നിർമിതി; പള്ളിച്ചട്ടമ്പി സിനിമയ്‌ക്കെതിരെ സന്ദീപ് വാരിയർ

തിരുവനന്തപുരം: തിയേറ്ററുകളിൽ പ്രദർശനം തുടരുന്ന ടോവിനോ തോമസ് ചിത്രമായ പള്ളിച്ചട്ടമ്പിക്കെതിരെ വിമർശനവുമായി...

Tragedy: వయ్యారాలు ఒలకబోస్తూ 5 గురు స్త్రీలు.. ఏకాంతంగా కలిసేందుకు ఆహ్వానాలు.. చివరకు ఇలా..

అనంతపురంలో వెలుగులోకి వచ్చిన ఈ హనీ ట్రాప్ ఉదంతం సమాజంలోని నైతిక...

എന്തിനാണ് തീകൊണ്ട് കളിക്കുന്ന ഇത്തരം പൂരങ്ങള്‍; വെടിക്കെട്ട് ദുരന്തത്തില്‍ ആര്‍. ശ്രീലേഖ

തിരുവനന്തപുരം: തൃശ്ശൂര്‍മുണ്ടത്തിക്കോട് വെടിക്കെട്ട് അപകടത്തിന്റെ പശ്ചാത്തലത്തില്‍ പൂരങ്ങളിലെ അപകടകരമായ ആഘോഷങ്ങള്‍ക്കെതിരെ വിമര്‍ശനവുമായി...