18
April, 2026

A News 365Times Venture

18
Saturday
April, 2026

A News 365Times Venture

ಮೈಸೂರು: ಮನೆಯೊಳಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಚಿರತೆ ಸೆರೆ

Date:

ಮೈಸೂರು, ಏಪ್ರಿಲ್, 17,2026 (www.justkannada.in):  ಮೈಸೂರಿನ ಸಿದ್ದಾರ್ಥನಗರದ ಮನೆಯೊಂದರಲ್ಲಿ ಗಂಡು ಚಿರತೆಯೊಂದು ಕಾಣಿಸಿಕೊಂಡ ಘಟನೆ ಆತಂಕ ಹುಟ್ಟಿಸಿದರೂ, ಅರಣ್ಯ ಇಲಾಖೆ ತ್ವರಿತ ಕಾರ್ಯಾಚರಣೆಯಿಂದ ಯಶಸ್ವಿಯಾಗಿ ಸೆರೆ ಹಿಡಿದು ಮರಳಿ ಅರಣ್ಯಕ್ಕೆ ಬಿಡಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಮೈಸೂರು ವಿಭಾಗದಿಂದ ನೀಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಇಂದು ಬೆಳಿಗ್ಗೆ ಚಿರತೆ ಕಾಣಿಸಿಕೊಂಡ ಮಾಹಿತಿ ದೊರಕುತ್ತಿದ್ದಂತೆ ಅಧಿಕಾರಿಗಳು ಹಾಗೂ ಎಲ್.ಟಿ.ಎಫ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ, ಚಿರತೆಯು ಸುಮಾರು 2-3 ವರ್ಷ ವಯಸ್ಸಿನದ್ದಾಗಿದ್ದು, ಅದು ಚಾಮುಂಡಿ ಬೆಟ್ಟ ಅಥವಾ ವರಕೂಡು ಅರಣ್ಯ ಪ್ರದೇಶದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ.

ಘಟನೆಯಿಂದ ಸಾರ್ವಜನಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ, ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಚಿರತೆ ಸಂಪೂರ್ಣ ಆರೋಗ್ಯವಾಗಿರುವುದು ದೃಢಪಟ್ಟಿದೆ.

ಎನ್.ಎಫ್.ಸಿ.ಎ ನಿಯಮಾವಳಿಗಳ ಪ್ರಕಾರ, ಚಿರತೆಯನ್ನು ಸುರಕ್ಷಿತವಾಗಿ ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಸೆರೆಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

Mysuru: A male leopard spotted inside a house in Siddarthanagar was safely captured by the Forest Department and released back into the wild. The 2–3 year old leopard is believed to have strayed from Chamundi Hills or nearby forest areas. No injuries or harm to the public were reported.

#Mysuru #LeopardRescue #ForestDepartment #Wildlife #Karnataka #BreakingNews

Key words: Mysuru, leopard, house, captured, Forest Department

The post ಮೈಸೂರು: ಮನೆಯೊಳಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಚಿರತೆ ಸೆರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീകളുടെ ക്രോധം നിങ്ങളറിയും; ഡി.എം.കെ അടക്കമുള്ള പ്രതിപക്ഷ കക്ഷികള്‍ക്കെതിരെ അമിത് ഷാ

ന്യൂദല്‍ഹി: വനിതാ സംവരണ ഭേദഗതി ബില്‍ പരാജയപ്പെട്ടതിന് പിന്നാലെ പ്രതിപക്ഷ പാര്‍ട്ടികള്‍ക്കെതിരെ...

Women Reservation: అంకెల్లో గెలిచి.. అధిక్యంలో ఓడి.. బిల్లు వీగిపోవడం వెనుక ఉన్న కారణాలివే..

నేడు లోక్‌సభ వేదికగా జరిగిన పరిణామాలు భారత పార్లమెంటరీ చరిత్రలో ఒక...

ബി.ജെ.പിയുടെ വോട്ട് വിഹിതം ഇടിയുന്നു, മണ്ഡല പുനര്‍ നിര്‍ണയം അധികാരത്തിലേക്കുള്ള കുറുക്കുവഴി: കേന്ദ്രത്തിനെതിരെ ഡിംപിള്‍ യാദവ്

ന്യൂദല്‍ഹി: വനിതാ സംവരണ നിയമത്തെക്കുറിച്ചുള്ള പ്രതിപക്ഷത്തിന്റെ നിലപാട് കേന്ദ്രസര്‍ക്കാര്‍ തെറ്റായി ചിത്രീകരിക്കുകയാണെന്ന്...