26
July, 2026

A News 365Times Venture

26
Sunday
July, 2026

A News 365Times Venture

ಗ್ಯಾಸ್ ಪೂರೈಕೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ- ಸಚಿವ ಕೆ.ಎಚ್ ಮುನಿಯಪ್ಪ

Date:

ಬಾಗಲಕೋಟೆ,ಏಪ್ರಿಲ್,7,2026 (www.justkannada.in):  ಎಲ್ ಪಿಜಿ ಗ್ಯಾಸ್ ಪೂರೈಕೆ ಮಾಡುವಲ್ಲಿ  ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಆರೋಪಿಸಿದರು.

ಹಲವೆಡೆ ಆಟೋ ಗ್ಯಾಸ್ ಅಭಾವ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ,  ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಗ್ಯಾಸ್ ಸಿಗದೆ ಆಟೋ ಚಾಲಕರಿಗೆ ಬಹಳ ತೊಂದರೆಯಾಗಿದೆ ಸಿಎನ್ ಜಿ, ಎಲ್ ಪಿಜಿ ಗ್ಯಾಸ್ ಎಲ್ಲವೂ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರದ ಮೇಲೆ ಕೇಂದ್ರ ಮಲತಾಯಿ ಧೋರಣೆ ತಾಳುತ್ತಿದೆ.  ಬಿಜೆಪಿ ಅಧಿಕಾರ ಇರುವ ರಾಜ್ಯಗಳಿಗೆ ಸರಿಯಾಗಿ ಗ್ಯಾಸ್ ಪೂರೈಕೆ ಮಾಡುತ್ತಿದೆ.  ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಗೆ  ಮಲತಾಯಿ ಧೋರಣೆ ಅದರಲ್ಲೂ ಕರ್ನಾಟಕಕ್ಕೆ  ಮತ್ತಷ್ಟು ಮಲತಾಯಿ ಧೋರಣೆ ತೋರುತ್ತಿದೆ ಎಂದು ಕಿಡಿಕಾರಿದರು.

ಸಮಸ್ಯೆ ಸರಿಪಡಿಸದಿದ್ದರೇ ಆಟೋ ಚಾಲಕರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಅಷ್ಟರೊಳಗೆ ಸರಿಯಾಗುತ್ತೋ ಇಲ್ಲವೋ ನೋಡುತ್ತೇವೆ.  ಈಗಾಗಲೇ ನಾನು ಕೇಂದ್ರದ ಜೊತೆ ಮಾತನಾಡಿದ್ದೇನೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words: Step-motherly attitude, central government, state, Minister, K.H Muniyappa

The post ಗ್ಯಾಸ್ ಪೂರೈಕೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ- ಸಚಿವ ಕೆ.ಎಚ್ ಮುನಿಯಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

தொகுதி மறுவரையறை மசோதா: 'அடுத்தகட்ட திட்டம் என்ன?' – கே.சி.வேணுகோபால் பதில்

நீட் தேர்வு முறைகேடு மற்றும் வினாத்தாள் கசிவு விவகாரத்தில் மத்திய பா.ஜ.க...

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಕೋಲಾರ,ಜುಲೈ25,2026 (www.justkannada.in):  ತಾಯಿ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು...