28
August, 2026

A News 365Times Venture

28
Friday
August, 2026

A News 365Times Venture

ಎಲ್ಲಾ ಕ್ಷೇತ್ರಗಳಲ್ಲೂ ದೇಶ ಮುನ್ನುಗ್ಗುತ್ತಿದೆ: ವಿಕಸಿತ ಭಾರತವೊಂದೇ ನಮ್ಮಅಜೆಂಡಾ, ಗುರಿ – ಪ್ರಧಾನಿ ಮೋದಿ

Date:

ನವದೆಹಲಿ,ಫೆಬ್ರವರಿ,5,2026 (www.justkannada.in): ದೇಶದ ಅಭಿವೃದ್ದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.  ವಿಕಸಿತ ಭಾರತ ಒಂದೇ ನಮ್ಮ ಅಜೆಂಡಾ ಹಾಗೂ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ಪ್ರತಿಯೊಂದು ಗುರಿಯನ್ನು ಸಾಧಿಸಬೇಕು ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದೆ.  ಭಾರತವು ಭವಿಷ್ಯಕ್ಕೆ ಬೇಕಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ  ಭಾರತ 9 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಕಾಂಗ್ರೆಸ್ ಪಕ್ಷ ದೇಶದ ರೈತರಿಗೂ ಅನ್ಯಾಯ ಮಾಡಿದೆ. ನಾವು ಮಣ್ಣಿನ ಮಕ್ಕಳಿಗೆ ನೆರವಾಗಿದ್ದೇವೆ ಎಂದರು.

ನಮ್ಮ ಯುವ ಪ್ರತಿಭೆಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಭಾರತ ಇತ್ತೀಚೆಗೆ 9 ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಹಿಂದೆ ಯಾವುದೇ ದೇಶ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ.  ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಏಕೆ ಮುಂದೆ ಬಂದಿರಲಿಲ್ಲ . ಇದಕ್ಕೆ ವಿರೋಧ ಪಕ್ಷಗಳು ಉತ್ತರಿಸಬೇಕು ಕಾಂಗ್ರೆಸ್ ತಪ್ಪುಗಳನ್ನ ಸರಿಪಡಿಸಲು ಸಮಯ ಕಳೆಯುತ್ತಿದ್ದೇವೆ. ಅವರ ತಪ್ಪು ಸರಿಪಡಿಸಲು ಸಾಕಷ್ಟು ಸಮಯ ಬೇಕು.  ಕಾಂಗ್ರೆಸ್ ಗೆ ಯಾವುದೇ ಯೋಜನೆ ದೃಷ್ಠಿಕೋನವಿಲ್ಲ ಕಾಂಗ್ರೆಸ್ ಸರ್ಕಾರ ತನ್ನ ಜೇಬು ತುಂಬಿಕೊಂಡಿತ್ತು ಅಷ್ಟೆ ಎಂದು ಪ್ರಧಾನಿ ಮೋದಿ  ವಾಗ್ದಾಳಿ ನಡೆಸಿದರು.

Key words:  developed India, our agenda, goal, PM Modi

The post ಎಲ್ಲಾ ಕ್ಷೇತ್ರಗಳಲ್ಲೂ ದೇಶ ಮುನ್ನುಗ್ಗುತ್ತಿದೆ: ವಿಕಸಿತ ಭಾರತವೊಂದೇ ನಮ್ಮಅಜೆಂಡಾ, ಗುರಿ – ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഫലസ്തീന്‍ ആക്ഷനെ യു.എസ് ഭീകര പട്ടികയില്‍ ഉള്‍പ്പെടുത്തി; നിരോധനം നീക്കാന്‍ ബ്രിട്ടിഷ് പ്രധാനമന്ത്രിക്ക് കത്ത്‌

വാഷിങ്ടണ്‍: ബ്രിട്ടണ്‍ ആസ്ഥാനമായി പ്രവര്‍ത്തിക്കുന്ന ഫലസ്തീന്‍ അവകാശ സംഘടനയായ ഫലസ്തീന്‍ ആക്ഷനെ...

`அரசுக்கு திமுக பஞ்சபாண்டவர்களாக துணை நிற்கும்!' – புதுச்சேரி எதிர்க்கட்சித் தலைவர் நாஜிம்

புதுச்சேரி சட்டப்பேரவையில் கவர்னர் உரைக்கு நன்றி தெரிவிக்கும் தீர்மானத்தின் மீது பேசிய...

PMSBY: రూ.20తో రూ.2 లక్షల బీమా.. ఈ ప్రభుత్వ పథకం గురించి తెలుసా?

PMSBY: సాధారణంగా బీమా పాలసీ తీసుకోవాలంటే ప్రతి ఏడాది భారీ మొత్తంలో...

ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಆಗಸ್ಟ್,27,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ...