27
October, 2026

A News 365Times Venture

27
Tuesday
October, 2026

A News 365Times Venture

ಜೈಲಿನಲ್ಲಿ ನಟ ದರ್ಶನ್‌ಗೆ ಸವಲತ್ತು ನೀಡದ ಆರೋಪ: ಪರಿಶೀಲಿಸಿ ವರದಿ ನೀಡಲಿ ಕೋರ್ಟ್‌ ಆದೇಶ

Date:

ಬೆಂಗಳೂರು,ಅಕ್ಟೋಬರ್,10,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆರೋಪಿ ನಟ  ದರ್ಶನ್ ಜೈಲಿನಲ್ಲಿ ಕನಿಷ್ಠ ಸವಲತ್ತುಗಳನ್ನು ಕೂಡ ನೀಡಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯನ್ನ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಭಾಗಶಃ ಅಂಗೀಕಾರ ಮಾಡಿದೆ.

ನಟ ದರ್ಶನ್ ಅವರಿಗೆ ಜೈಲಿನಲ್ಲಿ ಕನಿಷ್ಠ ಸವಲತ್ತುಗಳನ್ನು ಕೂಡ ನೀಡಿಲ್ಲ  ಎಂದು ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಖುದ್ದು ಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆ ಅರ್ಜಿಯನ್ನು ಇದೀಗ ಬೆಂಗಳೂರಿನ 57ನೇ ಸಿಸಿಹೆಚ್  ನ್ಯಾಯಾಲಯ ಅಂಗೀಕರಿಸಿದ್ದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು ಎಂದು ಆದೇಶಿಸಿದೆ.

‘ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಅಕ್ಟೋಬರ್ 18ರೊಳಗೆ ಭೇಟಿ ನೀಡಿ ವರದಿ ನೀಡಬೇಕು’ ಎಂದು ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚನೆ ನೀಡಿದೆ.

ನಟ ದರ್ಶನ್‌ ಜೈಲಿನಲ್ಲಿ ತನಗೆ ಹೆಚ್ಚುವರಿ ಹಾಸಿಗೆ, ದಿಂಬು ಹಾಗೂ ಇತರೆ ಮೂಲಸೌಲಭ್ಯ ಕಲ್ಪಿಸಲು ನ್ಯಾಯಾಧೀಶರೇ ಒಮ್ಮೆ ಪರಿಶೀಲಿಸುವಂತೆ ಕೋರಿ ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದರು.

Key words: Actor, Darshan, accused, jail, court

The post ಜೈಲಿನಲ್ಲಿ ನಟ ದರ್ಶನ್‌ಗೆ ಸವಲತ್ತು ನೀಡದ ಆರೋಪ: ಪರಿಶೀಲಿಸಿ ವರದಿ ನೀಡಲಿ ಕೋರ್ಟ್‌ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ശമ്പളം വെട്ടിക്കുറയ്ക്കുന്നു; ഫലസ്തീന്‍ അഭയാര്‍ത്ഥികള്‍ക്കായുള്ള ഐക്യരാഷ്ട്രസഭാ ജീവനക്കാരുടെ പ്രതിഷേധ റാലി

  ഗസ: ഫലസ്തീന്‍ അഭയാര്‍ത്ഥികള്‍ക്കായുള്ള ഐക്യരാഷ്ട്രസഭയുടെ റിലീഫ് ആന്‍ഡ് വര്‍ക്‌സ് ഏജന്‍സിയിലെ...

Bengaluru IT Jobs: బెంగళూరులో ఉద్యోగాలు తెలుగు, తమిళులకేనా? యువతి ఆరోపణలపై సీఎం వార్నింగ్!

Bengaluru IT Jobs: కర్ణాటకలో స్థానిక కన్నడిగులను ఉద్దేశపూర్వకంగా ఉద్యోగాలకు దూరంగా...

എസ്.ഐ.ആര്‍ തീരുമാനങ്ങള്‍ ഐക്യകണ്ഠമായി: ഫോം6 ല്‍ മാറ്റങ്ങള്‍ വരുത്തിയിട്ടില്ല; തെരഞ്ഞെടുപ്പ് കമ്മീഷന്‍ കോടതിയില്‍

ന്യൂദല്‍ഹി: വോട്ടര്‍ പട്ടികയുടെ പ്രത്യേക തീവ്ര പരിഷ്‌കരണം സംബന്ധിച്ച എല്ലാ തീരുമാനങ്ങളും...