12
September, 2026

A News 365Times Venture

12
Saturday
September, 2026

A News 365Times Venture

ಪತಿಯನ್ನು ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿದ ಪತ್ನಿ

Date:

ಮೈಸೂರು,ಸೆಪ್ಟಂಬರ್,12,2025 (www.justkannada.in): ಪರಿಹಾರದ ಆಸೆಗಾಗಿ ಪತ್ನಿಯು ಪತಿಯನ್ನೇ ಕೊಂದು  ನಂತರ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಈಗ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕ ಹೆಜ್ಜೂರು ಗ್ರಾಮದ ನಿವಾಸಿ ವೆಂಕಟಸ್ವಾಮಿ ಹತ್ಯೆಯಾದವರು  ಎಂದು ಗುರುತಿಸಲಾಗಿದೆ. ಪತ್ನಿ ಸಲ್ಲಾಪುರಿ ಎಂಬಾಕೆಯೇ ತನ್ನ ಗಂಡ ವೆಂಕಟಸ್ವಾಮಿಯನ್ನ ಹತ್ಯೆಗೈದು ನಂತರ ಹುಲಿ ಕೊಂದಿದೆ ಎಂದು ನಾಟಕವಾಗಿ ಇದೀಗ ಸಿಕ್ಕಿಬಿದ್ದಿರುವುದು.

ಕಳೆದ ಕೆಲ ವರ್ಷಗಳಿಂದ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ದಂಪತಿಗಳು ವಾಸವಾಗಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಸಲ್ಲಾಪುರಿ ಪೊಲೀಸರಿಗೆ ದೂರು ನೀಡಿದ್ದಳು. ಅಷ್ಟೇ ಅಲ್ಲದೆ ಪತಿಯನ್ನು ಹುಲಿ ಎಳೆದುಕೊಂಡು ಹೋಗಿರಬಹುದು ಎಂದು ಅನುಮಾನ ಕೂಡ ವ್ಯಕ್ತಪಡಿಸಿದ್ದಳು

ಈ ಮಧ್ಯೆ ಕೆಲ ದಿನಗಳ ಹಿಂದೆ ಹೆಜ್ಜೂರು ಗ್ರಾಮದ ಬಳಿಯಲ್ಲಿ ಹುಲಿ ಓಡಾಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪತ್ನಿ ಸಲ್ಲಾಪುರಿ ಹುಲಿ ಕೊಂದಿದೆ ಎಂದು ದೂರು ನೀಡಿದ್ದಳು. ದೂರು ಸ್ವೀಕರಿಸಿದ್ದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟಸ್ವಾಮಿಗೆ ಹುಡುಕಾಡಿದ್ದಾರೆ. ಪರಿಶೀಲನೆ ವೇಳೆ ಪ್ರಾಣಿ ಹೆಜ್ಜೆ ಗುರುತು ಪ್ತತೆಯಾಗಿತ್ತು. ಆದರೇ ಹುಲಿ ಎಲ್ಲೂ ಕಂಡಿರಲಿಲ್ಲ. ಮನೆ ಹಿಂದಿನ ತಿಪ್ಪೆಗುಂಡಿಯಲ್ಲೇ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ವರಸೆಯಲ್ಲಿ ಸಲ್ಲಾಪುರಿ ವಿಚಾರಿಸಿದಾಗ, ಪರಿಹಾರದ ಆಸೆಗೆ ಪತಿಯನ್ನು ಕೊಂದು, ಈ ನಾಟಕ ಆಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮುದ್ದೆಯಲ್ಲಿ ವಿಷ ಬೆರೆಸಿ ಕೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Key words: Mysore, wife, husband, killed, tiger

The post ಪತಿಯನ್ನು ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿದ ಪತ್ನಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹೊಸಕಡಜೆಟ್ಟಿ ಮಹದೇವಮ್ಮ ಸಾವು ಪ್ರಕರಣ: ಮೃತಳ ಮಗಳಿಗೆ ₹4.12 ಲಕ್ಷ ಪರಿಹಾರ

ಮೈಸೂರು,ಸೆಪ್ಟಂಬರ್,11,2026 (www.justkannada.in):  ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ...

മോദിയുടെ സ്വയം പുകഴ്ത്തല്‍ വേണ്ട; റഷ്യയുമായുള്ള ബന്ധത്തിന് നീണ്ട ചരിത്രമുണ്ട്: കോണ്‍ഗ്രസ്

ന്യൂദല്‍ഹി: പ്രധാനമന്ത്രി നരേന്ദ്ര മോദിയുടെ സ്വയം പ്രചാരണം എന്തുതന്നെയായാലും ഇന്ത്യയും റഷ്യയും...

“சுயநலத்தை மறுத்து நாட்டின் நலனைப் பார்த்தால் தடை?” – BRICS-ல் ட்ரம்ப் மீது புதின் மறைமுகத் தாக்கு!

டெல்லியில் நடக்கும் பிரிக்ஸ் மாநாட்டிற்காக இந்தியாவிற்கு வந்திருக்கிறார் ரஷ்ய அதிபர்...

Raghav Chadha: ఆప్ నా “ఎక్స్-గర్ల్‌ఫ్రెండ్”.. రాఘవ్ చద్దా ఫైర్..

Raghav Chadha: రాజ్యసభ ఎంపీ రాఘవ్ చద్దా ఆమ్ ఆద్మీ పార్టీ(ఆప్)పై...