22
September, 2026

A News 365Times Venture

22
Tuesday
September, 2026

A News 365Times Venture

ನೇಮಕಾತಿ ಪ್ರಮಾಣಪತ್ರ ಪಡೆಯಲು ಬಂದಿದ್ದ ವೇಳೆ ಕಾರು ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

Date:

ಮೈಸೂರು,ಸೆಪ್ಟಂಬರ್‌,22,2026 (www.justkannada.in) ಕಾಲೇಜು ಮುಂಭಾಗ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ  ನಂಜನಗೂಡಿನಲ್ಲಿ ನಡೆದಿದೆ.

ಜೆಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಈ ಘಟನೆ ನಡೆದಿದೆ. 19 ವರ್ಷದ ಪ್ರಿತೇಶ್ ಜೈನ್ ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಕೋರ್ಸ್ ಪೂರ್ಣಗೊಳಿಸಿ ಉದ್ಯೋಗಕ್ಕೂ ಆಯ್ಕೆಯಾಗಿದ್ದ ವಿದ್ಯಾರ್ಥಿ ಪ್ರಿತೇಶ್‌ ಜೈನ್‌ ನೇಮಕಾತಿ ಪ್ರಮಾಣಪತ್ರ ಪಡೆಯಲು ಕಾಲೇಜಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗದ್ದು ಅಪಘಾತದ ರಭಸಕ್ಕೆ ವಿದ್ಯಾರ್ಥಿಗೇ ಗಂಭೀರ ಗಾಯಗಳಾಗಿದ್ದು ಪ್ರಿತೇಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.

ಅಪಘಾತ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು ಬೆಂಗಳೂರು ನೋಂದಣಿ ಕಾರನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿ ಸಾವಿನಿಂದ ಜೆಎಸ್‌ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿನ್ನೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಲೇಜು ಮುಂಭಾಗ ವೇಗ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ರಸ್ತೆ ಸಂಚಾರ ನಿಯಮಗಳ ಫಲಕ ಅಳವಡಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಂಜನಗೂಡು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರು ಚಾಲಕನಿಗಾಗಿ ಸಂಚಾರ ಠಾಣೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Key words: Student, die,  car , Accident, Nanjanagud

Source link

LEAVE A REPLY

Please enter your comment!
Please enter your name here

Share post:

Popular

More like this
Related

ഹൈദരാബാദ് ഗണേശോത്സവം; ഘോഷയാത്ര കടന്ന് പോവുന്ന പാതകളിലെ പള്ളികള്‍ തുണികൊണ്ട് മൂടി

ഹൈദരാബാദ്: 2026ലെ ഗണേശ ഘോഷയ്ക്ക് മുന്നോടിയായി ജാഥ കടന്ന് പോവുന്ന പ്രധാന...

"இடைத்தேர்தலைத் திணிப்பவர்களே தேர்தல் செலவையும் ஏற்க வேண்டும்" – தாராபுரத்தில் சீமான் ஆவேசம்

மதுராந்தகம், தாராபுரம் ஆகிய இரண்டு தொகுதிகளில் இடைத்தேர்தலுக்கான வாக்குப்பதிவு அக்டோபர் 6...

Heavy Rain Alert: ఏపీ వైపు దూసుకొస్తున్న తీవ్ర వాయుగుండం.. విశాఖ-గోపాల్‌పూర్ మధ్య తీరం దాటనున్న వాయుగుండం..!

Heavy Rain Alert: బంగాళాఖాతంలో ఏర్పడిన అల్పపీడనం వాయుగుండంగా బలపడింది. ఇది...

ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

ಮೈಸೂರು,ಸೆಪ್ಟಂಬರ್‌,21,2026 (www.justkannada.in) : ಮಹಾರಾಜ ಎಜುಕೇಶನ್ ಟ್ರಸ್ಟ್‌ (ರಿ) ವತಿಯಿಂದ...